ಇಸ್ರೋ ವರದಿ
ಇಸ್ರೋ ವರದಿ
ಸುದ್ದಿಯಲ್ಲಿ ಏಕಿದೆ? ದೇಶದ ಭೂಕುಸಿತ ಅಪಾಯದ ಪ್ರದೇಶಗಳ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ ) ಮತ್ತೊಂದು ವರದಿ ಬಿಡುಗಡೆ ಮಾಡಿದೆ. ದೇಶದಲ್ಲಿರುವ ಭೂಕುಸಿತದ 147 ಸೂಕ್ಷ್ಮ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮುಖ್ಯಾಂಶಗಳು
- ಇಸ್ರೋ ವಿಜ್ಞಾನಿಗಳು 17 ರಾಜ್ಯಗಳ 147 ಜಿಲ್ಲೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 1988 ಮತ್ತು 2022ರ ನಡುವೆ ದಾಖಲಾದ 80,933 ಭೂ ಕುಸಿತಗಳ ಆಧಾರದ ಮೇಲೆ ಭೂಕುಸಿತದ ಅಪಾಯದಲ್ಲಿರುವ ಪ್ರದೇಶಗಳ ಮೌಲ್ಯಮಾಪನ ಕೈಗೊಂಡಿದ್ದಾರೆ.
- ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (National Remote Sensing Centre – NRSC)ವು ಭೂಕುಸಿತದ ನಕ್ಷೆಗಳ ಅಟ್ಲಾಸ್ ಬಿಡುಗಡೆ ಮಾಡಿದೆ.
- ಈ ಪಟ್ಟಿಯಲ್ಲಿ ಉತ್ತರಾಖಂಡದ ಎರಡು ಜಿಲ್ಲೆಗಳು ಅಗ್ರಸ್ಥಾನದಲ್ಲಿದ್ದರೆ, ಕೊಡಗು 12ನೇ ಸ್ಥಾನದಲ್ಲಿದೆ. ಇದರಲ್ಲಿ 17 ರಾಜ್ಯಗಳಲ್ಲಿ ಭೂಕುಸಿತ ಪೀಡಿತ ಪ್ರದೇಶ ಭೂಕುಸಿತ ಅಪಾಯದ ಪ್ರದೇಶಗಳ ಮತ್ತು ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದೆ.
- ಉತ್ತರಾಖಂಡ ನಂತರದಲ್ಲಿ ಕೇರಳ, ಜಮ್ಮು ಮತ್ತು ಕಾಶ್ಮೀ ರ, ಸಿಕ್ಕಿಂ ಹಾಗೂ ಮಣಿಪುರದ ಜಿಲ್ಲೆಗಳ ಈ ಭೂ ಕುಸಿತದ ಅಪಾಯದ ಪಟ್ಟಿಯಲ್ಲಿವೆ. ಇದರ ಬಳಿಕ ಕರ್ನಾಟಕ ಕೂಡ ಇಂತಹ ಅಪಾಯ ಎದುರಿಸುತ್ತಿದೆ.
ರುದ್ರಪ್ರಯಾಗ – ತೆಹ್ರಿ ಅಪಾಯದ ಅಗ್ರ ಪ್ರದೇಶಗಳು:
- ಇಸ್ರೋ ಸಮೀಕ್ಷೆಯ ಪ್ರಕಾರ, ರುದ್ರಪ್ರಯಾಗ ಮತ್ತು ತೆಹ್ರಿ ಜಿಲ್ಲೆಗಳು ಉತ್ತರಾಖಂಡದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲೇ ಭೂಕುಸಿತದ ಅಪಾಯದಲ್ಲಿವೆ. ರುದ್ರಪ್ರಯಾಗ ಜಿಲ್ಲೆ ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಹೆಬ್ಬಾಗಿಲು ಆಗಿದೆ. ಇದರೊಂದಿಗೆ ರುದ್ರಪ್ರಯಾಗ ಜಿಲ್ಲೆ ಭಾರತದಲ್ಲಿ ಅತಿ ಹೆಚ್ಚು ಭೂಕುಸಿತ ಸಾಂದ್ರತೆಯನ್ನು ಹೊಂದಿದೆ. ಇದು ಅತ್ಯಧಿಕ ಒಟ್ಟು ಜನಸಂಖ್ಯೆ, ದುಡಿಯುವ ಜನಸಂಖ್ಯೆ, ಸಾಕ್ಷರತೆ ಮತ್ತು ಮನೆಗಳ ಸಂಖ್ಯೆಯನ್ನು ಹೊಂದಿದೆ.
ಕರ್ನಾಟಕದ ಜಿಲ್ಲೆಗಳು: ಕರ್ನಾಟಕದ ಎಂಟು ಜಿಲ್ಲೆಗಳು ಕೂಡ ಭೂಕುಸಿತ ಭೀತಿ ಪ್ರದೇಶಗಳನ್ನು ಒಳಗೊಂಡಿದೆ. ಕೊಡುಗು, ಹಾಸನ ಜಿಲ್ಲೆ – 53, ದಕ್ಷಿಣ ಕನ್ನಡ ಜಿಲ್ಲೆ – 54, ಉಡುಪಿ ಜಿಲ್ಲೆ – 77, ಚಿಕ್ಕಮಗಳೂರು ಜಿಲ್ಲೆ – 92, ಶಿವಮೊಗ್ಗ ಜಿಲ್ಲೆ – 103, ಉತ್ತರ ಕನ್ನಡ ಜಿಲ್ಲೆ – 116 ಹಾಗೂ ಹಾವೇರಿ ಜಿಲ್ಲೆ – 124ನೇ ಸ್ಥಾನದಲ್ಲಿದೆ ಎಂದು ಉಲ್ಲೇ ಖಿಸಲಾಗಿದೆ.
ಅಧ್ಯಯನ : ಇಸ್ರೋ ದ ರಾಷ್ಟ್ರೀ ಯ ದೂರಸಂವೇದಿ ಕೇಂದ್ರದ ವಿಜ್ಞಾನಿಗಳು ಮೊದಲ ಬಾರಿಗೆ 147 ಜಿಲ್ಲೆಗಳಲ್ಲಿ 1988 ಮತ್ತು 2022ರ ನಡುವೆ ದಾಖಲಾದ ಭೂಕುಸಿತಗಳ ಆಧಾರದ ಮೇಲೆ ಈ ಅಧ್ಯಯನ ಮಾಡಿದ್ದಾರೆ. ಈ ಭೂಕುಸಿತ ಅಪಾಯದ ವಿಶ್ಲೇಷಣೆಯು ಮಾನವ ಹಾಗೂ ಜಾನುವಾರುಗಳ ಜನಸಂಖ್ಯಾ ಸಾಂದ್ರತೆಯನ್ನು ಆಧರಿಸಿದ್ದು, ಇದು ಜನರ ಮೇಲೆ ಬೀರುವ ಪರಿಣಾಮವನ್ನು ಸೂಚಿಸುವುದರೊಂದಿಗೆ ದೇಶದಲ್ಲಿ ಹೆಚ್ಚು ಭೂ ಕುಸಿತದ ದುರ್ಬಲ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.