Published on: March 16, 2023

ಭಾರತದ ಮೆಕ್ ಮೋಹನ್ ರೇಖೆಗೆ ಅಮೆರಿಕ ಬೆಂಬಲ

ಭಾರತದ ಮೆಕ್ ಮೋಹನ್ ರೇಖೆಗೆ ಅಮೆರಿಕ ಬೆಂಬಲ

ಸುದ್ದಿಯಲ್ಲಿ ಏಕಿದೆ? ಭಾರತದ ಅರುಣಾಚಲ ಪ್ರದೇಶ ಹಾಗೂ ಚೀನಾ ನಡುವಿನ ಅಂತಾರಾಷ್ಟ್ರೀಯ ಗಡಿಯಾಗಿ ಮೆಕ್ ಮೋಹನ್  ರೇಖೆಗೆ ಅಮೆರಿಕ ಮಾನ್ಯತೆ ನೀಡಿದೆ.

ಮುಖ್ಯಾಂಶಗಳು

  • ಅರುಣಾಚಲ ಪ್ರದೇಶವು ತನ್ನ ರಾಷ್ಟ್ರದ ಭಾಗವಾಗಿದೆ ಎಂಬ ಚೀನಾದ ವಾದಕ್ಕೆ ಅಮೆರಿಕದ ಈ ನಿರ್ಣಯ ಬಹುದೊಡ್ಡ ಹಿನ್ನಡೆ ತಂದಿದೆ.
  • ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸುವ ನಿರ್ಣಯವನ್ನು ಅಮೆರಿಕದ ಸೆನೆಟ್ ಸ್ವೀಕರಿಸಿದೆ.
  • ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಯಥಾಸ್ಥಿತಿ ಬದಲಾಯಿಸಲು ಚೀನಾದ ಮಿಲಿಟರಿ ಆಕ್ರಮಣವನ್ನು ಖಂಡಿಸುತ್ತದೆ. ಅಲ್ಲದೆ, ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ’.

ಬೆಂಬಲ-ನೆರವು: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ಅಲ್ಲ ಎಂದು ಈ ನಿರ್ಣಯವು ಸ್ಪಷ್ಟಪಡಿಸುತ್ತದೆ. ಸಮಾನ ಮನಸ್ಕ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಜತೆಗೂಡಿ ಈ ಪ್ರದೇಶಕ್ಕೆ ಬೆಂಬಲ ಹಾಗೂ ನೆರವನ್ನು ನೀಡಲು ಬದ್ಧತೆ ವ್ಯಕ್ತಪಡಿಸುತ್ತದೆ.

  • ಚೀನಾ ಪ್ರಚೋದನೆಗಳಿಗೆ ಖಂಡನೆ: ಎಲ್ಎಸಿ ಉದ್ದಕ್ಕೂ ಯಥಾಸ್ಥಿತಿ ಬದಲಾಯಿಸಲು ಚೀನಾದ ಮಿಲಿಟರಿ ಬಲ ಬಳಕೆ, ವಿವಾದಾತ್ಮಕ ಪ್ರದೇಶಗಳಲ್ಲಿ ಹಳ್ಳಿಗಳ ನಿರ್ಮಾಣ, ಅರುಣಾಚಲ ಪ್ರದೇಶದ ವೈಶಿಷ್ಟ್ಯಗಳಿರುವ ನಗರಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರುಗಳೊಂದಿಗೆ ನಕ್ಷೆಗಳ ಪ್ರಕಟಣೆ ಮತ್ತು ಭೂತಾನ್ನಲ್ಲಿ ಚೀನಾದ ಪ್ರಾದೇಶಿಕ ಹಕ್ಕುಗಳ ವಿಸ್ತರಣೆ ಸೇರಿದಂತೆ ಚೀನಾದ ಹೆಚ್ಚುತ್ತಿರುವ ಪ್ರಚೋದನೆಗಳನ್ನು ಕೂಡ ಈ ನಿರ್ಣಯವು ಖಂಡಿಸಿದೆ.
  • ಭಾರತದ ಕ್ರಮಕ್ಕೆ ಶ್ಲಾಘನೆ: ಚೀನಾ ಆಕ್ರಮಣಶೀಲತೆ ಮತ್ತುಭದ್ರತಾ ಬೆದರಿಕೆಗಳ ವಿರುದ್ಧರಕ್ಷಿಸಿಕೊಳ್ಳಲು ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಈ ನಿರ್ಣಯ ಶ್ಲಾಘಿಸಿದೆ. ಭಾರತದ ಈ ಕ್ರಮಗಳಲ್ಲಿದೂರಸಂಪರ್ಕ ಮೂಲಸೌಕರ್ಯ ಬಲಪಡಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ಮತ್ತುಇತರ ಕ್ಷೇತ್ರಗಳಲ್ಲಿ ತೈವಾನ್ನೊಂದಿಗೆ ಸಹಕಾರವನ್ನು ವಿಸ್ತರಿಸುವುದು ಸೇರಿವೆ. ಈ ನಿರ್ಣಯವು ಅಮೆರಿಕ-ಭಾರತದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಾಯವಾಗಲಿದೆ. ಅಲ್ಲದೆ, ಕ್ವಾಡ್ (ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿ 2017ರಲ್ಲಿರಚಿಸಿಕೊಂಡ ಒಕ್ಕೂಟ) ಮತ್ತು ಪೂರ್ವ ಏಷ್ಯಾ ಶೃಂಗ ಮೂಲಕ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿನ ನಮ್ಮ ಪಾಲುದಾರರೊಂದಿಗೆ ಜತೆಗೂಡಿ ಭಾರತದೊಂದಿಗೆ ನಮ್ಮ ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲಾಗುವುದು ಎಂದೂ ಅಮೆರಿಕದ ಸೆನೆಟ್ ನಿರ್ಣಯದಲ್ಲಿಹೇಳಲಾಗಿದೆ.
  • ಮೆಕ್ ಮಹೊನ್ ಗಡಿರೇಖೆ: ಭಾರತ ಮತ್ತುಚೀನಾ ನಡುವಿನ ಸ್ಪಷ್ಟವಾದ ಗಡಿಯನ್ನು ವ್ಯಾಖ್ಯಾನಿಸುತ್ತದೆ. ಈ ರೇಖೆಯನ್ನು ಭಾರತದಲ್ಲಿಬ್ರಿಟಿಷ್ ಸರ್ಕಾರದ ಆಡಳಿತವಿದ್ದ ಸಂದರ್ಭದಲ್ಲಿ ಆಗಿನ ವಿದೇಶಾಂಗ ಕಾರ್ಯದರ್ಶಿ ಸರ್ ಹೆನ್ರಿ ಮೆಕ್ ಮಹೊನ್ ನಿರ್ಧರಿಸಿದ್ದರಿಂದ ಅವರ ಹೆಸರನ್ನೇ ಇಡಲಾಗಿದೆ. ಶಿಮ್ಲಾಒಪ್ಪಂದದ ಅನುಸಾರ 1914ರಲ್ಲಿಟಿಬೆಟ್ ಮತ್ತುಬ್ರಿಟನ್ ನಡುವೆ ಮಾತುಕತೆ ನಡೆಸಿ 890 ಕಿಲೋ ಮೀಟರ್ ಉದ್ದದ ಗಡಿ ರೇಖೆ ನಿರ್ಧರಿಸಲಾಗಿತ್ತು. ಈ ಒಪ್ಪಂದದ ಅನುಸಾರ ಅರುಣಾಚಲ ಪ್ರದೇಶದ ತವಾಂಗ್ ಮತ್ತು ಟಿಬೆಟ್ನ ದಕ್ಷಿಣ ಭಾಗವನ್ನು ಭಾರತದ ಭಾಗವೆಂದು ಪರಿಗಣಿಸಲಾಯಿತು. ಟಿಬೆಟಿಯನ್ನರು ಸಹ ಇದನ್ನು ಒಪ್ಪಿಕೊಂಡರು.
  • ನಂತರ 1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಿಸಿತು. ಶಿಮ್ಲಾಒಪ್ಪಂದದಲ್ಲಿತಾನು ಪಾಲ್ಗೊಂಡಿಲ್ಲವಾದ್ದರಿಂದ ಮೆಕ್ ಮಹೊ ನ್ ಗಡಿರೇಖೆಯನ್ನು ಒಪ್ಪುವುದಿಲ್ಲ; ತವಾಂಗ್ ಭಾಗವು ದಕ್ಷಿಣ ಟಿಬೆಟ್ ಆಗಿದ್ದು, ಅದು ತನಗೆ ಸೇರಬೇಕು ಎಂದು ಚೀನಾ ವಾದಿಸುತ್ತದೆ. ಆದರೆ, ಶಿಮ್ಲಾಒಪ್ಪಂದ ಏರ್ಪಟ್ಟಾಗ ಟಿಬೆಟ್ ಸ್ವತಂತ್ರ ರಾಷ್ಟ್ರವಾಗಿದ್ದು, ಚೀನಾದ ಆಡಳಿತ ಅಲ್ಲಿರಲಿಲ್ಲ. ಹೀಗಾಗಿ, ಮೆಕ್ ಮಹೊನ್ ರೇಖೆಯೇ ಚೀನಾ-ಭಾರತದ ನಡುವಿನ ಅಧಿಕೃತ ಗಡಿಯಾಗಿದೆ. ಇದೇ ವಾಸ್ತವ ನಿಯಂತ್ರಣ ರೇಖೆ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ -ಎಲ್ಎಸಿ) ಎಂದು ಭಾರತ ಪ್ರತಿಪಾದಿಸುತ್ತದೆ.
  • ಮೂಲಸೌಕರ್ಯ ವೃದ್ಧಿಗೆ ಪೈಪೋಟಿ: ಭಾರತ-ಚೀನಾ ಗಡಿಯಲ್ಲಿಮೆಕ್ ಮಹೊ ನ್ ರೇಖೆಗೆ ಹೊಂ ದಿಕೊಂಡಂತೆ 2,000-ಕಿಮೀ ಉದ್ದದ ರಸ್ತೆನಿರ್ವಿುಸುವ ಫ್ರಾಂಟಿಯರ್ ಹೈವೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಇದರೊಂದಿಗೆ ಈಗಾಗಲೇ ಇರುವ ಎರಡು ಹೆದ್ದಾರಿಗಳ ನಡುವೆ ಅಂತರ್ ಸಂಪರ್ಕ ಕೂಡ ಕಲ್ಪಿಸಲಾಗುತ್ತಿದೆ. ದುರ್ಗಮ ಪ್ರದೇಶದಲ್ಲಿವರ್ಷವಿಡೀ ಸಂಚರಿಸಲು ಸಾಧ್ಯವಾಗುವಂತಹ ಈ ಹೆದ್ದಾರಿಗಳು ಚೀನಾದ ವಿರುದ್ಧ ಪಾರಮ್ಯ ಸಾಧಿಸಲು ಭಾರತೀಯ ಸೇನೆಗೆ ರಹದಾರಿಯಾಗಲಿವೆ.
  • ಚೀನಿಯರು ಕೂಡ ತಮ್ಮ ಬದಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ತ್ವರಿತಗತಿಯಲ್ಲಿಕಾಮಗಾರಿಗಳನ್ನು ಕೈಗೊಂಡಿದ್ದಾರೆ.