Published on: March 21, 2023
ಭಾರತ–ಬಾಂಗ್ಲಾ ತೈಲ ಪೈಪ್ಲೈನ್
ಭಾರತ–ಬಾಂಗ್ಲಾ ತೈಲ ಪೈಪ್ಲೈನ್
ಸುದ್ದಿಯಲ್ಲಿ ಏಕಿದೆ? ಬಾಂಗ್ಲಾದೇಶ-ಭಾರತ ನಡುವಿನ ‘ಫ್ರೆಂಡ್ಶಿಪ್ ಪೈಪ್ಲೈನ್’ ಅನ್ನು ವರ್ಚುವಲ್ ಆಗಿ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉದ್ಘಾಟಿಸಿದರು.
ಮುಖ್ಯಾಂಶಗಳು
- ಪೈಪ್‌ಲೈನ್ ಸಿಲಿಗುರಿಯ ಅಸ್ಸಾಂನ ನುಮಾಲಿಗಢ್ ರಿಫೈನರಿಯ ಮಾರ್ಕೆಟಿಂಗ್ ಡಿಪೋದಿಂದ ಬಾಂಗ್ಲಾದೇಶದ ಉತ್ತರದ ಪರ್ಬತಿಪುರಕ್ಕೆ ಡೀಸೆಲ್ ಪೂರೈಕೆ ಮಾಡಲಾಗುತ್ತದೆ.
- ಅನುಷ್ಠಾನ: ಈ ಯೋಜನೆಯನ್ನು ಭಾರತದ ನುಮಾಲಿಗಢ್ ರಿಫೈನರಿ ಲಿಮಿಟೆಡ್ ಮತ್ತು ಬಾಂಗ್ಲಾದೇಶದ ಮೇಘನಾ ಪೆಟ್ರೋಲಿಯಂ ಲಿಮಿಟೆಡ್ ಜಂಟಿಯಾಗಿ ಅನುಷ್ಠಾನಗೊಳಿಸಿದೆ.
- ಹೊಸದಾಗಿ ಉದ್ಘಾಟನೆಗೊಂಡ ಪೈಪ್‌ಲೈನ್ ಬಾಂಗ್ಲಾದೇಶದೊಳಗೆ 125 ಕಿಮೀ ಮತ್ತು ಭಾರತದೊಳಗೆ 5 ಕಿಮೀ ವಿಸ್ತರಿಸಿದೆ. ರೂ.377 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ನಿರ್ಮಾಣ ಮಾಡಲಾಗಿದ್ದು, ಬಾಂಗ್ಲಾದೇಶವು ಪೆಟ್ರೋಲ್, ವಿಶೇಷವಾಗಿ ಭಾರತದಿಂದ ಡೀಸೆಲ್ನ್ನು ಆಮದು ಮಾಡಿಕೊಳ್ಳಲಿದೆ.
- ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿಯಾಚೆಗಿನ ಮೊದಲ ಇಂಧನ ಪೈಪ್ಲೈನ್ ಆಗಿದೆ. ಇದರಲ್ಲಿ ಪೈಪ್ಲೈನಿನ ಬಾಂಗ್ಲಾದೇಶ ಭಾಗವನ್ನು 285 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅನುದಾನ ಸಹಾಯದ ಅಡಿಯಲ್ಲಿ ಭಾರತ ಇದನ್ನು ಭರಿಸಿದೆ.
- ಪೈಪ್ಲೈನ್ ಪ್ರತಿ ವರ್ಷಕ್ಕೆ 1 ಮಿಲಿಯನ್ ಮೆಟ್ರಿಕ್ ಟನ್ ಹೈ-ಸ್ಪೀಡ್ ಡೀಸೆಲ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಉತ್ತರ ಬಾಂಗ್ಲಾದೇಶದ ಏಳು ಜಿಲ್ಲೆಗಳಿಗೆ ಹೈಸ್ಪೀಡ್ ಡೀಸೆಲ್ ಅನ್ನು ಪೂರೈಸಲಾಗುತ್ತದೆ.
ಪ್ರಯೋಜನ
- ಈ ಸ್ನೇಹ ಪೈಪ್ಲೈನ್ ಕಾರ್ಯಾಚರಣೆಯು ಭಾರತದಿಂದ ಬಾಂಗ್ಲಾದೇಶಕ್ಕೆ ಹೈ-ಸ್ಪೀಡ್ ಡೀಸೆಲ್ ಸಾಗಿಸುವ ಸುಸ್ಥಿರ, ವಿಶ್ವಾಸಾರ್ಹ, ವೆಚ್ಚ- ಪರಿಣಾಮಕಾರಿತ್ವ ಮತ್ತು ಪರಿಸರ ಸ್ನೇಹಿ ವಿಧಾನವನ್ನು ಅಳವಡಿಸಲು ಸಹಕಾರಿಯಾಗಿದೆ.
- ಈ ಪೈಪ್ನಲೈನ್ ನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಇಂಧನ ಭದ್ರತೆ ಕ್ಷೇತ್ರದಲ್ಲಿ ಇನ್ನಷ್ಟು ಸಹಕಾರ ಸಂಬಂಧ ಹೆಚ್ಚಳಕ್ಕೆ ನೆರವಾಗುತ್ತದೆ. ಬಾಂಗ್ಲಾದೇಶದಲ್ಲಿ ವಿಶೇಷವಾಗಿ ಕೃಷಿ ವಲಯದಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲೇಖನವನ್ನು ಓದಿ: