Published on: March 23, 2023

“ಇವಿ ಪವರ್ ಪ್ಲಸ್” ವಿದ್ಯುತ್ ಚಾಲಿತ ವಾಹನ

“ಇವಿ ಪವರ್ ಪ್ಲಸ್” ವಿದ್ಯುತ್ ಚಾಲಿತ ವಾಹನ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ರಾಜ್ಯದ ಐದು ನಗರಗಳಿಗೆ ಇವಿ ಪವರ್‌ ಪ್ಲಸ್‌ ಎಂಬ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನ ಆರಂಭಿಸಿದೆ.

ಮುಖ್ಯಾಂಶಗಳು

  • ಈ ಮೂಲಕ ಮೈಸೂರು ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರಗಳಿಗೆ ಕೂಡಾ ಪ್ರಯಾಣಿಕರು ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಪಡೆಯಬಹುದು.
  • ಕೆಎಸ್‌ಆರ್‌ಟಿಸಿ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಿದೆ.
  • ಈ ಪೈಕಿ ಮೊದಲ ಹಂತವಾಗಿ 25 ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ.
  • ಕಳೆದ ಕೆಲವು ದಿನಗಳ ಹಿಂದೆ ಯೂರೋಪಿಯನ್ ವಿನ್ಯಾಸದ ವೋಲ್ವೋ9600s “ಅಂಬಾರಿ ಉತ್ಸವ” ವಾಹನವನ್ನು ಸಾರ್ವಜನಿಕ ಬಳಕೆಗಾಗಿ ಲೋಕಾರ್ಪಣೆ ಮಾಡಲಾಗಿತ್ತು.

ಉದ್ದೇಶ

  • ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಹಂತ – ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ. ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೂ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ಬಸ್‌ಗಳು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.

ಬಸ್‌ ನ ವಿಶೇಷತೆ

  • ಈ ಬಸ್‌ ಪ್ರತಿ ಚಾರ್ಚ್‌ಗೆ 300 ಕಿ.ಮೀ ಕ್ರಮಿಸಲಿದೆ. ಸುಧಾರಿತ ಬ್ಯಾಟರಿ ಹೊಂದಿದ್ದು 2-3 ಗಂಟೆಗಳಲ್ಲಿ ಫಾಸ್ಟ ಚಾರ್ಚಿಂಗ್ ಮೂಲಕ ಸಂಪೂರ್ಣವಾಗಿ ರೀಚಾರ್ಚ್ ಮಾಡಬಹುದಾಗಿರುತ್ತದೆ.
  • ಬಸ್‌ನಲ್ಲಿ ಸಿಸಿ ಟಿವಿ ಕ್ಯಾಮರಾಗಳು, ಎಮರ್ಜೆನ್ಸಿ ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮ್ಮರ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಫೇಮ್-2 ಯೋಜನೆ

  • ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ (FAME II), ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ಭಾರತ ಸರ್ಕಾರವು ಪ್ರಾರಂಭಿಸಿರುವ ಯೋಜನೆಯಾಗಿದೆ.
  • ಜಗತ್ತಿನಾದ್ಯಂತ ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನಗಳನ್ನು ಪರಿಗಣಿಸಿ ಇದು ಮುಖ್ಯವಾಗಿದೆ. ಈ ಯೋಜನೆಯ ಎರಡನೇ ಹಂತಕ್ಕೆ ಭಾರತ ಸರ್ಕಾರವು 10,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಿದೆ.
  • ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆ (NEMMP) ಗುರಿಗಳನ್ನು ಸಾಧಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹಂತ I 2015 ರಿಂದ 2019 ರವರೆಗೆ ಇತ್ತು ಮತ್ತು 2019 ರಲ್ಲಿ FAME ಹಂತ II ಅನ್ನು ಪ್ರಾರಂಭಿಸಲಾಯಿತು
  • ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ FAME ಇಂಡಿಯಾ ಯೋಜನೆಯ ಎರಡನೇ ಹಂತದ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಶೇಕಡಾ 50 ರಷ್ಟು ಹೆಚ್ಚಿಸಿದೆ. FAME ಇಂಡಿಯಾ ಹಂತ II ರ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ಈಗ ಪ್ರತಿ kWh ಗೆ ರೂ 15,000 ಆಗಿರುತ್ತದೆ. ಈ ಹಿಂದೆ ಪ್ರತಿ kWh ಗೆ 10,000 ರೂ. ಹೆಚ್ಚುವರಿಯಾಗಿ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಸಬ್ಸಿಡಿ ಮೇಲಿನ ಮಿತಿಯು ಅದರ ವೆಚ್ಚದ 40 ಪ್ರತಿಶತದಷ್ಟು ಇರುತ್ತದೆ, ಇದು ಹಿಂದಿನ ಶೇಕಡಾ 20 ರಿಂದ ಹೆಚ್ಚಾಗಿದೆ.