Published on: April 1, 2023
ಚುಟುಕು ಸಮಾಚಾರ:1 ಏಪ್ರಿಲ್ 2023
ಚುಟುಕು ಸಮಾಚಾರ:1 ಏಪ್ರಿಲ್ 2023
- ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ , ಗ್ರಾಹಕ ವ್ಯವಹಾರಗಳು , ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರು ವಿದೇಶಿ ವ್ಯಾಪಾರ ನೀತಿ 2023 ಅನ್ನು ಬಿಡುಗಡೆ ಮಾಡಿದರು. ನೀತಿಯು 2030 ರ ವೇಳೆಗೆ ಭಾರತದ ರಫ್ತುಗಳನ್ನು $ 2 ಟ್ರಿಲಿಯನ್ಗೆ ಕೊಂಡೊಯ್ಯುವ ಗುರಿ ಹೊಂದಿದೆ.ಈ ನೀತಿಯು “ಟೌನ್ಸ್ ಆಫ್ ಎಕ್ಸ್ಪೋರ್ಟ್ ಎಕ್ಸಲೆನ್ಸ್ ಸ್ಕೀಮ್” ಮೂಲಕ ಹೊಸ ನಗರಗಳನ್ನು ಮತ್ತು “ಸ್ಟೇಟಸ್ ಹೋಲ್ಡರ್ ಸ್ಕೀಮ್” ಮೂಲಕ ರಫ್ತುದಾರರನ್ನು ಗುರುತಿಸಲು ಪ್ರೋತ್ಸಾಹಿಸುತ್ತದೆ.
- ಸ್ವದೇಶಿ ಶಸ್ತ್ರಾಸ್ತ್ರಗಳ ಖರೀದಿಗೆ ಒತ್ತು ನೀಡಿರುವ ಭಾರತೀಯ ಸೇನೆ ಸೇನಾ ಉಪಕರಣಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಸ್ವಾವಲಂಬಿ ಭಾರತ ಅಭಿಯಾನದಡಿ 32,100 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ.6 ನೆಕ್ಸ್ಟ್ ಜನರೇಷನ್ ಮಿಸೈಲ್ ವೆಸೆಲ್ಗಳ ಖರೀದಿಗೆ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನೌಕಾಪಡೆಗೆ 11 ಮುಂದಿನ ಪೀಳಿಗೆಯ ಕಡಲಾಚೆಯ ಗಸ್ತು ಹಡಗುಗಳು ಮತ್ತು 6 ಮುಂದಿನ ಪೀಳಿಗೆಯ ಕ್ಷಿಪಣಿ ಹಡಗುಗಳನ್ನು ಸ್ವಾಧೀನಪಡಿಸಿಕೊಳ್ಳಲು ಎರಡು ಸ್ಥಳೀಯ ಹಡಗುಕಟ್ಟೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನೌಕಾಪಡೆಯಿಂದ ಬ್ರಹ್ಮೋಸ್ ಕ್ಷಿಪಣಿಗಳ ಖರೀದಿ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ನೊಂದಿಗೆ ಆಕಾಶ್ ಸಿಸ್ಟಮ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಸ್ವಾತಿ ರಾಡಾರ್ ಖರೀದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
- ಛತ್ತೀಸಗಡರಾಜ್ಯದಲ್ಲಿ ವಿದ್ಯಾವಂತರಿಗೆ ಮಾಸಿಕ ರೂ. 2,500 ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಿಸಿದ್ದಾರೆ. ಏಪ್ರಿಲ್ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ.
- ನಾಸಾ ಹೊಸದಾಗಿ ಆರಂಭಿಸಿರುವ ‘ಚಂದ್ರನಿಂದ– ಮಂಗಳ’ಕ್ಕೆಮಾನವ ಸಹಿತ ಮೊದಲ ಗಗನಯಾನ ಯೋಜನೆಯ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಮೆರಿಕದ ಸಾಫ್ಟ್ವೇರ್ ಮತ್ತು ರೊಬೊಟಿಕ್ ಎಂಜಿನಿಯರ್ ಅಮಿತ್ ಕ್ಷತ್ರಿಯಾ ಅವರನ್ನು ನೇಮಿಸಲಾಗಿದೆ. ಮನುಕುಲದ ಒಳಿತಿಗೆ ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಸಂಸ್ಥೆಯ ಮಾನವ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿಯನ್ನು ಈ ಹೊಸ ಯೋಜನೆ ಹೊಂದಿದೆ.
- ಪೋರ್ಚುಗಲ್ ಫುಟ್ಬಾಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ತಮ್ಮದಾಗಿಸಿಕೊಂಡರು. ಲಿಸ್ಬನ್ನಲ್ಲಿ ನಡೆದ ಪೋರ್ಚುಗಲ್ – ಲಿಕ್ಸ್ಟನ್ಸ್ಟ್ರೈನ್ ನಡುವಣ ಪಂದ್ಯ ಅವರಿಗೆ 197ನೇ ಅಂತರರಾಷ್ಟ್ರೀಯ ಪಂದ್ಯ ಆಗಿತ್ತು. 196 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕುವೈತ್ನ ಬದರ್ ಅಲ್ ಮುತಾವ ಅವರ ದಾಖಲೆಯನ್ನು ರೊನಾಲ್ಡೊ ಮುರಿದರು. ಪೋರ್ಚು ಗಲ್ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆಯೂ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಹೆಸರಿನಲ್ಲಿದೆ.