Published on: April 3, 2023
ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ
ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ
ಸುದ್ದಿಯಲ್ಲಿ ಏಕಿದೆ? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಚಿನೂಕ್ ಹೆಲಿಕಾಪ್ಟರ್ ಬಳಸಿ ಚಿತ್ರದುರ್ಗದಲ್ಲಿ ತನ್ನ ಅಭಿವೃದ್ಧಿ ಹಂತದಲ್ಲಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಲ್ಯಾಂಡಿಂಗ್ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿತು. ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಆರ್‌ಎಲ್‌ವಿ, ಆರ್‌ಎಲ್‌ವಿ ಎಲ್ಇಎಕ್ಸ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಮುಖ್ಯಾಂಶಗಳು
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ , ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ವಾಯುಪಡೆ – ಎಂಸಿಸಿಕಾರ್ಯಾಚರಣೆಯನ್ನು ನೆರವೇರಿಸಿದವು.
- ಬಾಹ್ಯಾಕಾಶ ನೌಕೆಯು ನಾಸಾದ ಬಾಹ್ಯಾಕಾಶ ನೌಕೆಗಳನ್ನು ಹೋಲುತ್ತದೆ, ಇದು ಯುಎಸ್ ಬಾಹ್ಯಾಕಾಶ ಸಂಸ್ಥೆಯ ಅತಿದೊಡ್ಡ ಸಾಗಣೆದಾರವಾಗಿ ಲೋ ಅರ್ಥ್ ಆರ್ಬಿಟ್ ಗೆ ಕಾರ್ಯನಿರ್ವಹಿಸುತ್ತದೆ.
- ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಬಾಹ್ಯಾಕಾಶ ನೌಕೆಯು ಹಾರಾಟ ನಡೆಸಿತು. ಹೆವಿ-ಲಿಫ್ಟ್ ಚಾಪರ್‌ನಲ್ಲಿ ಮೇಲ್ಮೈಯಿಂದ 4.5 ಕಿಲೋಮೀಟರ್ ಎತ್ತರಕ್ಕೆ ಅಂಡರ್‌ಸ್ಲಂಗ್ ತೂಕವಾಗಿ ಉಡಾವಣೆ ಮಾಡಲಾಯಿತು. ಒಮ್ಮೆ ಅದು ಪರೀಕ್ಷಾ ಎತ್ತರವನ್ನು ತಲುಪಿದಾಗ, ಆರ್ ಎಲ್ ವಿ ಯ ಮಿಷನ್ ಮ್ಯಾನೇಜ್ಮೆಂಟ್ ಕಂಪ್ಯೂಟರ್ ಸಂಜ್ಞೆಯನ್ನು ಆಧರಿಸಿ, ಆರ್ ಎಲ್ ವಿಯನ್ನು ಗಾಳಿಯಲ್ಲಿ ಬಿಡುಗಡೆ ಮಾಡಲಾಯಿತು.
- ಆ ಬಿಡುಗಡೆಯೂ ಸ್ವಾಯತ್ತವಾಗಿದ್ದು, ಸ್ಥಾನ, ವೇಗ, ಎತ್ತರ, ಬಾಡಿ ರೇಟ್ ಸೇರಿದಂತೆ 10 ನಿಯತಾಂಕಗಳನ್ನು ಒಳಗೊಂಡಿತ್ತು. ಬಳಿಕ ಆರ್‌ಎಲ್‌ವಿ ಸ್ವತಂತ್ರವಾಗಿ ಭೂಮಿಯೆಡೆಗೆ ಚಲಿಸಿ ಭೂಸ್ಪರ್ಶ ನಡೆಸಿತು.
- ಹೆಲಿಕಾಪ್ಟರ್ ಮೂಲಕ ಎತ್ತರಕ್ಕೆ ಸಾಗಿಸಿ ರನ್‌ವೇಯಲ್ಲಿ ಸ್ವಯಂ ಲ್ಯಾಂಡಿಂಗ್ ಮಾಡಲು ಬಿಡುಗಡೆ ಮಾಡಿರುವುದು ವಿಶ್ವದಲ್ಲಿ ಇದೇ ಮೊದಲು.
ಉದ್ದೇಶ
- ಆರ್ ಎಲ್ ವಿ ಬಾಹ್ಯಾಕಾಶಕ್ಕೆ ಕಡಿಮೆ-ವೆಚ್ಚದ ತಂತ್ರಜ್ಞಾನದಲ್ಲಿ ಹಾರಾಟ ನಡೆಸಲು ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಇಸ್ರೋದ ಪ್ರಯತ್ನವಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಶತಕೋಟಿ ಡಾಲರ್ ಉಪಗ್ರಹ ಉಡಾವಣಾ ಮಾರುಕಟ್ಟೆಯಲ್ಲಿ ವೆಚ್ಚ-ಪರಿಣಾಮಕಾರಿ ಉಡಾವಣಾ ಸೇವಾ ಪೂರೈಕೆದಾರ ಎನಿಸಿಕೊಂಡಿದೆ.
ಆರ್ ಎಲ್ ವಿ
- RLV ಯ ಸಂರಚನೆಯು ವಿಮಾನದಂತೆಯೇ ಇರುತ್ತದೆ. ಉಡಾವಣಾ ವಾಹನಗಳು ಮತ್ತು ವಿಮಾನಗಳ ಸಂಕೀರ್ಣತೆಯನ್ನು ಸಂಯೋಜಿಸುತ್ತದೆ. ಸಂಪೂರ್ಣ ಅಭಿವೃದ್ಧಿ ಹೊಂದಿದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮುಖ್ಯ ಕಾರ್ಯವೆಂದರೆ ಕಕ್ಷೆಯಲ್ಲಿ ಉಪಗ್ರಹವನ್ನು ನಿಯೋಜಿಸುವುದು, ರನ್‌ವೇಯಲ್ಲಿ ಇಳಿಯುವ ಮೂಲಕ ಭೂಮಿಗೆ ಹಿಂತಿರುಗುವುದು.ಇದನ್ನು ಇಸ್ರೋ ನಿರ್ಮಿಸಿದೆ.
- ಆರಂಭದಲ್ಲಿ ಈ ಯೋಜನೆಯನ್ನು ಸಂಪೂರ್ಣವಾಗಿ ಮರುಬಳಕೆ ಮಾಡಬಲ್ಲ, ಕಕ್ಷೆಗೆ ತೆರಳಬಲ್ಲ, ಎರಡು ಹಂತಗಳ ಬಾಹ್ಯಾಕಾಶ ವಾಹನದ ನಿರ್ಮಾಣಕ್ಕೆ ಪೂರ್ವಭಾವಿಯಾಗಿ, ವಿವಿಧ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಸಲುವಾಗಿ ಆರಂಭಿಸಲಾಯಿತು. 2016ರ ಮೇ 23ರಂದು ಇಸ್ರೋ ತನ್ನ ಮೊತ್ತಮೊದಲ ಆರ್‌ಎಲ್‌ವಿ-ಟಿಡಿ ಎಚ್ಇಎಕ್ಸ್-01 ಯೋಜನೆಯನ್ನು ಜಾರಿಗೆ ತಂದಿತು. ಅದು ಮರು ಆಗಮಿಸುವ ಬಾಹ್ಯಾಕಾಶ ವಾಹನದ ವಿನ್ಯಾಸ ಮತ್ತು ಪರೀಕ್ಷೆಯ ಪ್ರಮುಖ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿತು. ಇದೊಂದು ಸಬ್ ಆರ್ಬಿಟಲ್ ಯೋಜನೆಯಾಗಿದ್ದು, ನೀರಿನ ಮೇಲೆ ಇಳಿಸುವ ಉದ್ದೇಶದಿಂದ ನಿರ್ಮಿಸಲಾಗಿತ್ತು.
ಚಿನೂಕ್ ಹೆಲಿಕಾಪ್ಟರ್
- ಚಿನೂಕ್ ಹೆಚ್ಚು -ಭಾರ ಎತ್ತುವ ಹೆಲಿಕಾಪ್ಟರ್ ಆಗಿದ್ದು, ಇದು ಪಾಶ್ಚಿಮಾತ್ಯ ಹೆಲಿಕಾಪ್ಟರ್‌ಗಳಲ್ಲಿ ಭಾರ ಎತ್ತುವ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ.
- ಗರಿಷ್ಠ ವೇಗ: 302 km/h
- ಉದ್ದ: 30 ಮೀ
- ಮೊದಲ ಹಾರಾಟ: 21 ಸೆಪ್ಟೆಂಬರ್ 1961
- ತಯಾರಕರು: ಅಮೆರಿಕದ ಬೋಯಿಂಗ್ ರೋಟರ್‌ಕ್ರಾಫ್ಟ್ ಸಿಸ್ಟಮ್ಸ್, ಬೋಯಿಂಗ್ ಡಿಫೆನ್ಸ್, ಸ್ಪೇಸ್ & ಸೆಕ್ಯುರಿಟಿ
- ಭಾರತವು 15 ಚಿನೂಕ್ ಹೆಲಿಕಾಪ್ಟರ್ಗಳನ್ನು ಅಮೆರಿಕದಿಂದ ಸೆಪ್ಟೆಂಬರ್ 2015 ರಲ್ಲಿ ರೂ 8,048-ಕೋಟಿ ಒಪ್ಪಂದದ ಅಡಿಯಲ್ಲಿ ಖರೀದಿಸಿತು . ಅವುಗಳನ್ನು ಮಾರ್ಚ್ 2019 ರಲ್ಲಿ ಸೇವೆಗೆ ಸೇರಿಸಲಾಯಿತು.
ಬಾಹ್ಯಾಕಾಶ ಪ್ರವಾಸೋದ್ಯಮ
- ಬಾಹ್ಯಾಕಾಶ ಪ್ರವಾಸೋದ್ಯಮ ಎಂದರೆ ಮನೋರಂಜನಾ ಉದ್ದೇಶಕ್ಕಾಗಿ ವಾಣಿಜ್ಯಿಕ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವುದು. ಇದರಲ್ಲಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲು ಟಿಕೆಟ್ ಖರೀದಿಸುವುದನ್ನು ಒಳಗೊಂಡಿರುತ್ತದೆ. ಈ ಪ್ರವಾಸದಲ್ಲಿ ಭೂಮಿಯ ವಾತಾವರಣದಿಂದ ಸಾಕಷ್ಟು ಮೇಲಕ್ಕೆ ತೆರಳಿ, ತೂಕಾರಾಹಿತ್ಯ ಸ್ಥಿತಿಯ ಅನುಭವವನ್ನು ಪಡೆಯಲಾಗುತ್ತದೆ. ಈ ತೂಕಾರಾಹಿತ್ಯ ಸ್ಥಿತಿಯಲ್ಲಿ ಪ್ರಯೋಗಗಳನ್ನು ನಡೆಸಬಹುದಾಗಿದೆ.