Published on: April 28, 2023

ಕೇಶವಾನಂದ ಭಾರತಿ ಪ್ರಕರಣ

ಕೇಶವಾನಂದ ಭಾರತಿ ಪ್ರಕರಣ

ಸುದ್ದಿಯಲ್ಲಿ ಏಕಿದೆ? ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ವಾದ, ಲಿಖಿತ ರೂಪದ ಹೇಳಿಕೆಗಳು ಮತ್ತು ತೀರ್ಪಿನ ಕುರಿತು ಮಾಹಿತಿ ಒಳಗೊಂಡಿರುವ ವೆಬ್ಪೇಜ್ ಅನ್ನು ಸಂಶೋಧಕರು ಸೇರಿ ದೇಶದ ಜನರಿಗೆ ಸುಪ್ರೀಂ ಕೋರ್ಟ್‌ ಅರ್ಪಿಸಿತು.

ಮುಖ್ಯಾಂಶಗಳು

  • 1973ರ ಏಪ್ರಿಲ್ 24ರಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಈ ತೀರ್ಪು ಹೊರಬಿದ್ದು 50 ವರ್ಷ ಗಳು ತುಂಬಿದ ಸಂದರ್ಭದಲ್ಲಿ ವೆಬ್ಪೇಜ್ ಅನ್ನು ಅರ್ಪಿಸಲಾಗಿದೆ
  • ಉದ್ದೇಶ: ಈ ವೆಬ್ಪೇಜ್ನಿಂದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಕೀಲರಿಗೆ ಸಾಕಷ್ಟು ಅನುಕೂಲವಾಗಲಿದೆ.

ಏನೀದು ಪ್ರಕರಣ? 

  • 1972ರಲ್ಲಿ, ಕೇರಳ ಸರಕಾರ ಎರಡು ಭೂಸುಧಾರಣಾ ಕಾನೂನುಗಳನ್ನು ರೂಪಿಸಿತು. ಅದರಲ್ಲಿ, ಎಡನೀರು ಮಠದ ಜಮೀನಿನ ನಿರ್ವಹಣೆಯನ್ನು ಮಠದಿಂದ ಕಿತ್ತುಕೊಳ್ಳಲು ಸರಕಾರ ಮುಂದಾಗಿತ್ತು. ಇದನು ಪ್ರಶ್ನಿಸಿ ಕೇಶವಾನಂದ ಭಾರತೀ ಸ್ವಾಮೀಜಿ ಕೋರ್ಟಿಗೆ ಹೋದರು. ಇದರ ಜೊತೆಗೆ, ಇನ್ನೂ ಮೂರು ಸಂವಿಧಾನ ತಿದ್ದುಪಡಿಗಳನ್ನೂ ಸ್ವಾಮೀಜಿ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಅರ್ಜಿಯಲ್ಲಿ ಕೇಳಲಾಗಿದ್ದ ಮೂಲಭೂತ ಪ್ರಶ್ನೆ ಎಂದರೆ, ಸಂಸತ್ತು ಸಂವಿಧಾನವನ್ನು ತಿದ್ದುವ ಪರಮಾಧಿಕಾರವನ್ನು ಎಷ್ಟು ಹೊಂದಿದೆ, ಪ್ರಜೆಗಳ ಮೂಲಭೂತ ಹಕ್ಕುಗಳನ್ನೂ ಕಿತ್ತುಕೊಳ್ಳುವ ತಿದ್ದುಪಡಿಯನ್ನು ಸಂಸತ್ತು ಮಾಡಬಹುದೇ?
  • ಸುಪ್ರೀಂ ಕೋರ್ಟ್ ಈ ಮೊಕದ್ದಮೆಯಲ್ಲಿ ಸಂವಿಧಾನದ ಮೂಲ ರಚನೆಗೆ ಧಕ್ಕೆ ಬಾರದಂತೆ ಪ್ರಸ್ತಾವನೆಯನ್ನು ತಿದ್ದುಪಡಿಯನ್ನು ಮಾಡಬಹುದೆಂದು ತೀರ್ಪು ನೀಡಿತು ಇದರನ್ವಯ 1976 ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ಭಾರತದ ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಮತ್ತು ಐಕ್ಯತೆ ಎಂಬ ಮೂರು ಪದಗಳನ್ನು ಸೇರಿಸಿತು.

ನಿಮಗಿದು ತಿಳಿದಿರಲಿ

  • ಕೇಶವಾನಂದ ಭಾರತಿ ತೀರ್ಪಿನ ವರ್ಷವಾದ 1973 ರಿಂದ, ಸಂವಿಧಾನವನ್ನು 60 ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಐದು ದಶಕಗಳಲ್ಲಿ, ಸುಪ್ರೀಂ ಕೋರ್ಟ್ ಕನಿಷ್ಠ 16 ಪ್ರಕರಣಗಳಲ್ಲಿ ಮೂಲಭೂತ ರಚನೆಯ ಸಿದ್ಧಾಂತದ ವಿರುದ್ಧ ಸಾಂವಿಧಾನಿಕ ತಿದ್ದುಪಡಿಗಳನ್ನು ಪರೀಕ್ಷಿಸಿದೆ.
  • ಈ 16 ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳಲ್ಲಿ, ಮೂಲಭೂತ ರಚನೆಯ ಸಿದ್ಧಾಂತದ ಉಲ್ಲಂಘನೆಯ ಆಧಾರದ ಮೇಲೆ ಪ್ರಶ್ನಿಸಲಾದ ಸಾಂವಿಧಾನಿಕ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇವುಗಳಲ್ಲಿ ಆರು ಪ್ರಕರಣಗಳು ಮೀಸಲಾತಿಗೆ ಸಂಬಂಧಿಸಿವೆ – ಇತರೆ ಹಿಂದುಳಿದ ವರ್ಗಗಳ (OBC) ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS) ಕೋಟಾ ಮತ್ತು ಬಡ್ತಿಗಳಲ್ಲಿ ಮೀಸಲಾತಿ ಸೇರಿದಂತೆ.
  • ಸರ್ವೋಚ್ಚ ನ್ಯಾಯಾಲಯವು ಕೇವಲ ಒಂದು ಸಾಂವಿಧಾನಿಕ ತಿದ್ದುಪಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ – ಸಂವಿಧಾನ (ತೊಂಬತ್ತೊಂಬತ್ತನೇ ತಿದ್ದುಪಡಿ) ಕಾಯಿದೆ, 2014, ಇದು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (NJAC) ಸ್ಥಾಪಿಸಿತು.
  • ಪ್ರಸ್ತುತ ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಿ, ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಜವಾಬ್ದಾರರಾಗಿರುವ ಸಂಸ್ಥೆ. 2015 ರಲ್ಲಿ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಈ ತಿದ್ದುಪಡಿಯನ್ನು “ನ್ಯಾಯಾಂಗ ಸ್ವಾತಂತ್ರ್ಯ” ಕ್ಕೆ ಧಕ್ಕೆ ತರುತ್ತದೆ ಎಂಬ ಆಧಾರದ ಮೇಲೆ ತಳ್ಳಿಹಾಕಿತು, ಇದು ಸಂವಿಧಾನದ ಮೂಲಭೂತ ಲಕ್ಷಣವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.