Published on: May 2, 2023

ಚುಟುಕು ಸಮಾಚಾರ : 1 ಮೇ 2023

ಚುಟುಕು ಸಮಾಚಾರ : 1 ಮೇ 2023

  • ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಇಲೆಕ್ಟ್ರಾನಿಕಲಿ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಂ (ಇಟಿಪಿಬಿಎಸ್) ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ  ಬಾರಿಗೆ ಜಾರಿಗೆ ತರಲಾಯಿತು. ರಾಜ್ಯದ ಹೊರಗೆ ಸಶಸ್ತ್ರ ಪಡೆಗಳಲ್ಲಿ  ಪರವಾಗಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ  ವಿದೇಶಗಳಲ್ಲಿ ಭಾರತ ಸರ್ಕಾರದ ಉದ್ಯೋಗದಲ್ಲಿ ಇರುವವರಿಗೆ ಮಾತ್ರ ಈ ಮತದಾನ ಪದ್ಧತಿಯನ್ನು  ರಾಜ್ಯದಲ್ಲಿ ಚುನಾವಣಾ ಆಯೋಗ ಜಾರಿಗೆ ತಂದಿದೆ.
  • ಜೋಗ ಜಲಪಾತ ಹಾಗೂ ನಂದಿ ಬೆಟ್ಟದಲ್ಲಿ ರೋಪ್ವೇ ನಿರ್ಮಾಣಕ್ಕೆ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ, ಮುಂದಿನ ಹಂತದಲ್ಲಿ ಕೊಡಚಾದ್ರಿ ಬೆಟ್ಟ ಹಾಗೂ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.
  • ಬಾಹ್ಯಾಕಾಶ ವಲಯದಲ್ಲಿ ಜಾಗತಿಕವಾಗಿ ಸೂಪರ್ ಪವರ್ ಆಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಭಾರತೀಯ ಬಾಹ್ಯಾಕಾಶ ನೀತಿ 2023 ಘೋಷಿಸಿದೆ.