Published on: May 4, 2023
ಚುಟುಕು ಸಮಾಚಾರ:2 ಮೇ 2023
ಚುಟುಕು ಸಮಾಚಾರ:2 ಮೇ 2023
- ಕರ್ನಾಟಕದ ನಿರುದ್ಯೋಗ ದರವು ಭಾರತಕ್ಕಿಂತ ಕಡಿಮೆಯಾಗಿದೆ ಮತ್ತು ರಾಜ್ಯವು ಸಂಘಟಿತ ಉದ್ಯೋಗ ಸೇರ್ಪಡೆಯಲ್ಲಿ ಏರಿಕೆ ಕಾಣುತ್ತಿದೆ, ಆದರೆ ಹೆಚ್ಚಿನ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸ್ಥಳಾಂತರಿಸುವುದು ಸವಾಲಾಗಿದೆ. ಸಂಘಟಿತ ವಲಯದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, 5 ವರ್ಷ ಗಳಲ್ಲಿ 1.2 ಕೋ ಟಿ ಉದ್ಯೋಗ ಸೃಷ್ಟಿಯಾಗಿದೆ.
- ಭಾರತೀಯ ನೌಕಾಪಡೆಯ ಮಾಜಿ ಕಮಾಂಡರ್ ಅಭಿಲಾಷ್ ಟೋಮಿ ಗೋಲ್ಡನ್ ಗ್ಲೋಬ್ ರೇಸ್ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೋಮಿ ಈ ಓಟವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯರಾಗಿದ್ದಾರೆ. ಇದು ವಿಶ್ವದ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ದೋಣಿ ರೇಸ್ ಇದಾಗಿದೆ. ಅಭಿಲಾಷ್ ಫ್ರಾನ್ಸ್ನ ಲೆಸ್ ಸೇಬಲ್ಸ್ ಡಿ’ಒಲೋನ್ನಲ್ಲಿ ಈ ರೇಸ್ ಅನ್ನು ಪೂರ್ಣಗೊಳಿಸಿದರು. ದಕ್ಷಿಣ ಆಫ್ರಿಕಾದ ಕರ್ಸ್ಟನ್ ನ್ಯೂಶಾಫರ್ ಮೊದಲ ಸ್ಥಾನ ಪಡೆದಿದ್ದಾರೆ.
- ಸಮಗ್ರ ಗರ್ಭಪಾತ ಆರೈಕೆ’ (ಸಿಎಸಿ) ಕಾರ್ಯಕ್ರಮ ಅನುಷ್ಠಾನದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಅತ್ಯುತ್ತಮ ರಾಜ್ಯ ಎಂಬ ಗೌರವಕ್ಕೆ ಭಾಜನವಾಗಿದೆ. ಮೊದಲ ಪ್ರಶಸ್ತಿಯನ್ನು ಛತ್ತಿಸಗಡ್ ಪಡೆದುಕೊಂಡಿದೆ.
- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಸಿದ್ಧ ಮನ್ ಕಿ ಬಾತ್’ನ 100ನೇ ಕಂತಿನ ವಿಶೇಷ ಭಾಷಣ ಅಕಾಶವಾಣಿಯಲ್ಲಿ ಪ್ರಸಾರ ವಾಯಿತು ಮತ್ತು ವಿಶೇಷವೆಂದರೆ ಯುಎಸ್ನ ನ್ಯೂಯಾರ್ಕ್ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ ಗೊಂಡಿತು.
- ಇಸ್ರೇಲ್ನ ತನ್ನ ಮೊದಲ ಪ್ರಯತ್ನದಲ್ಲಿಯೇ ಗಲಿಲಿ ಸಮುದ್ರವನ್ನು ಈಜುವ ಮೂಲಕ ಭಾರತೀಯ ಈಜುಪಟು ಆರ್ಯನ್ ಸಿಂಗ್ ದಡಿಯಾಲ ಅತ್ಯಂತ ವೇಗದ ಪುರುಷ ಈಜುಗಾರನ ಅಸ್ತಿತ್ವದಲ್ಲಿರುವ ವಿಶ್ವ ದಾಖಲೆಯನ್ನು ಸರಿಗಟ್ಟಿದರು. 21 ವರ್ಷದ ದಾಡಿಯಾಲಾ ಅವರು ಗಲಿಲೀ ಸಮುದ್ರದಲ್ಲಿ ಈಜಲು ಮೊದಲ ಏಷ್ಯನ್ ಈಜುಗಾರರಾಗಿದ್ದಾರೆ. ಗಲಿಲೀ ಸಮುದ್ರವು ವಿಶ್ವದ ಎರಡನೇ ಅತ್ಯಂತ ಕಡಿಮೆ ನೀರಿನ ಪ್ರದೇಶವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 214 ಮೀಟರ್ ಕೆಳಗಿದೆ. ಇಲ್ಲಿ ಸಮುದ್ರದ ಸುಳಿಗಳು ಮತ್ತು ಅನಿಯಮಿತ ಗಾಳಿ ಬಿರುಗಾಳಿಗಳಂತಹ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆರ್ಯನ್ ನವೆಂಬರ್ 2022ರಲ್ಲಿ ಗೋವಾದಲ್ಲಿ 5 ಗಂಟೆ 36 ನಿಮಿಷಗಳಲ್ಲಿ 32 ಕಿಮೀ ತೆರೆದ ನೀರಿನಲ್ಲಿ ಈಜಿ ವಿಶ್ವದಾಖಲೆ ನಿರ್ಮಿಸಿದ್ದರು. ಈವೆಂಟ್ ಅನ್ನು ಇಸ್ರೇಲ್ನ ಗೆಲಿಲೀ ಮ್ಯಾರಥಾನ್ ಸ್ವಿಮ್ಮಿಂಗ್ ಅಸೋಸಿಯೇಷನ್ನ ಮೇಲ್ವಿಚಾರಣೆ ಮತ್ತು ಪ್ರಮಾಣೀಕರಿಸಲಾಯಿತು.
- ಖ್ಯಾತ ಭೌತ ವಿಜ್ಞಾನಿ ಮತ್ತು ಬಾಬಾ ಪರಮಾಣು ಸಂಶೋಧನಾ ಕೇಂದ್ರದ(ಬಿಎಆರ್ಸಿ) ನಿರ್ದೇಶಕ ಅಜಿತ್ ಕುಮಾರ್ ಮೊಹಂತಿ ಅವರನ್ನು ಪರಮಾಣು ಶಕ್ತಿ ಆಯೋಗದ ಮುಖ್ಯಸ್ಥ ಮತ್ತು ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಮಾಡಲಾಗಿದೆ. ಕೆ.ಎನ್.ವ್ಯಾಸ್ ಅವರಿಂದ ತೆರವಾದ ಸ್ಥಾನಕ್ಕೆ ಮೊಹಂತಿ ಅವರನ್ನು ನೇಮಕಮಾಡಲಾಗಿದೆ. ಒಡಿಶಾಮೂಲದ ಮೊಹಂತಿ ಅವರುಮಾರ್ಚ್ 2019ರಲ್ಲಿ ಬಿಎಆರ್ಸಿ ನಿರ್ದೇಶಕರಾಗಿ ನೇಮಕವಾಗಿದ್ದರು. ಇದಕ್ಕೂ ಮುನ್ನ ಅವರು ವಿವಿಧ ಸಂಸ್ಥೆಗಳಲ್ಲಿ ಗೌರವಾನ್ವಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಭೌತಶಾಸ್ತ್ರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಅಧ್ಯಕ್ಷರಾಗಿ ಹಾಗೂ ಸಾಹಾ ಪರಮಾಣು ಭೌತವಿಜ್ಞಾನ ಸಂ ಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮೊಹಂ ತಿ ಅವರು 66 ವರ್ಷ ಪೂರ್ಣ ಗೊಳ್ಳುವವರೆಗೆ ಅಂದರೆ 2025 ಅಕ್ಟೋ ಬರ್ 10ರ ವರೆಗೆ ಅಥವಾ ಮುಂದಿನ ಆದೇಶದವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.
- ದುಬೈ ನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಗೆದ್ದುಕೊಂಡಿದ್ದಾರೆ. ಇದರೊಂದಿಗೆ 58 ವರ್ಷಗಳ ಬಳಿಕ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ ಇಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಮಲೇಷ್ಯಾ ತಂಡದವರನ್ನು ಸೋಲಿಸಿದರು. ಏಷ್ಯಾ ಚಾಂಪಿಯನ್ಷಿಪ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನವಿದು. 1971ರಲ್ಲಿ ಭಾರತದ ದೀಪು ಘೋಷ್– ರಮಣ್ ಘೋಷ್ ಕಂಚು ಜಯಿಸಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.