Published on: May 21, 2023
ಉತ್ಪಾದನೆ ಆಧಾರಿತ ಇನ್ಸೆಂಟಿವ್ (ಪಿಎಲ್‌ಐ) 2.O ಯೋಜನೆ
ಉತ್ಪಾದನೆ ಆಧಾರಿತ ಇನ್ಸೆಂಟಿವ್ (ಪಿಎಲ್‌ಐ) 2.O ಯೋಜನೆ
ಸುದ್ದಿಯಲ್ಲಿ ಏಕಿದೆ? ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಬಂಡವಾಳ ಆಕರ್ಷಿಸುವ ಹಾಗೂ ಭಾರತೀಯ ಕಂಪನಿಗಳ ಸಾಮರ್ಥ್ಯ ವೃದ್ಧಿಗೆ ಕೇಂದ್ರ ಸರಕಾರವು ಐಟಿ ಹಾರ್ಡ್‌ವೇರ್ ಕ್ಷೇತ್ರಕ್ಕೆ 17,000 ಕೋಟಿ ರೂಪಾಯಿ ಉತ್ಪಾದನೆ ಆಧಾರಿತ ಇನ್ಸೆಂಟಿವ್ ಯೋಜನೆಯನ್ನು ಘೋಷಿಸಿದೆ.
ಮುಖ್ಯಾಂಶಗಳು
- ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು, ಸರ್ವರ್‌ಗಳು ಹಾಗೂ ಅತಿ ಚಿಕ್ಕ ಡಿವೈಸ್ ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳ ಉತ್ಪಾದನೆ ಹೆಚ್ಚಿಸಲು ಸರಕಾರವು 6 ವರ್ಷಗಳ ಅವಧಿಗೆ ಈ 17,000 ಕೋಟಿ ರೂಪಾಯಿಗಳ ನೆರವು ನೀಡಲಿದೆ.
ಪ್ರಯೋಜನಗಳು
- 2025-26ರ ವೇಳೆಗೆ 300 ಶತಕೋಟಿ ಡಾಲರ್ (ಸುಮಾರು ರೂ.25 ಲಕ್ಷ ಕೋಟಿ) ಮೌಲ್ಯದ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯೊಂದಿಗೆ ಡಿಜಿಟಲ್ ಆರ್ಥಿಕತೆಯ ಗುರಿಯನ್ನು ರೂ.82 ಲಕ್ಷ ಕೋಟಿಗೆ ತಲುಪಿಸಲು ಯೋಜನೆಯು ಸಹಾಯ ಮಾಡುತ್ತದೆ.
- ಪ್ರೋತ್ಸಾಹಧನ ಹೆಚ್ಚಾಗಲಿದೆ: PLI 2.O ಯೋಜನೆಯಡಿ, ಕಂಪನಿಗಳು 5 ಪ್ರತಿಶತದವರೆಗೆ ಪ್ರೋತ್ಸಾಹವನ್ನು ಪಡೆಯುತ್ತವೆ. ಅಲ್ಲದೆ, ಸರಕುಗಳ ಉತ್ಪಾದನೆಗೆ ದೇಶೀಯವಾಗಿ ತಯಾರಿಸಿದ ಭಾಗಗಳನ್ನು ಬಳಸಿದರೆ 4 ಪ್ರತಿಶತದಷ್ಟು ಹೆಚ್ಚುವರಿ ಪ್ರೋತ್ಸಾಹ ಲಭ್ಯವಿದೆ. ಹಳೆಯ ಪಿಎಲ್ಐ ಯೋಜನೆಯಲ್ಲಿ ಶೇ.2ರಷ್ಟಿತ್ತು.
- 75,000 ಉದ್ಯೋಗಗಳು: ಇತ್ತೀಚಿನ ಯೋಜನೆಯು ರೂ.2,430 ಕೋಟಿ ಹೂಡಿಕೆಗಳನ್ನು ಉತ್ಪಾದಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದು 3.35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಉತ್ಪಾದನೆಯನ್ನು ಉತ್ಪಾದಿಸುತ್ತದೆ ಮತ್ತು ನಿಗದಿತ ಅವಧಿಯಲ್ಲಿ 75,000 ಜನರಿಗೆ ನೇರ ಉದ್ಯೋ ಗಾವಕಾಶಗಳನ್ನು ಒದಗಿಸುತ್ತದೆ
ಉದ್ದೇಶ
- ಈ ವಲಯದಲ್ಲಿ ಬಜೆಟ್ ವೆಚ್ಚವನ್ನು ಹೆಚ್ಚಿಸಲು ಉದ್ಯಮ ಗುಂಪುಗಳು ಸರ್ಕಾರಕ್ಕೆ ವಿನಂತಿಸಿದ ಹಿನ್ನೆಲೆಯಲ್ಲಿ ಇತ್ತೀಚಿನ PLI 2.O ಯೋಜನೆಯನ್ನು ಘೋಷಿಸಲಾಗಿದೆ. “ಸರಕಾರದ ಈ ಇನ್ಸೆಂಟಿವ್ ಯೋಜನೆಯು ದೇಶೀಯವಾಗಿ ಐಟಿ ಹಾರ್ಡ್‌ವೇರ್ ಸರಕುಗಳನ್ನು ಉತ್ಪಾದಿಸಲು ಕಂಪನಿಗಳಿಗೆ ಉತ್ತೇಜನ ನೀಡಲಿದ್ದು, ಬೃಹತ್ ಪ್ರಮಾಣದಲ್ಲಿ ರಫ್ತಿಗೂ ಅನುಕೂಲವಾಗಲಿದೆ.
ಪಿಎಲ್‌ಐ ಯೋಜನೆ
- PLI ಯೋಜನೆಯನ್ನು ಏಪ್ರಿಲ್ 2020 ರಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು ಮುಖ್ಯವಾಗಿ ಮೊಬೈಲ್ ಫೋನ್ಗಳ ಉತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ತರಲಾಗಿದೆ. ಸರಕಾರ ಈ ಹಿಂದೆ 2021ರಲ್ಲಿ ನಾಲ್ಕು ವರ್ಷಗಳ ಅವಧಿಗೆಂದು ಐಟಿ ಹಾರ್ಡ್‌ವೇರ್ ವಲಯಕ್ಕೆ 7,300 ಕೋಟಿ ರೂ. ಉತ್ಪಾದನೆ ಆಧಾರಿತ ಇನ್ಸೆಂಟಿವ್ ಯೋಜನೆ ಘೋಷಿಸಿತ್ತು. ಆಗಲೂ ಇದನ್ನು ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ PCಗಳು, ಆಲ್ ಇನ್ ಒನ್ ಪಿಸಿಗಳು ಮತ್ತು ಸರ್ವರ್ಗಳಿಗೆ ಅನ್ವಯಿಸಲಾಯಿತು.
ಈ ಕ್ಷೇತ್ರದಲ್ಲಿ ಭಾರತದ ಸಾಧನೆ
- ಭಾರತವು ವಿಶ್ವದಲ್ಲಿ ಮೊಬೈಲ್ ಫೋನ್ಗಳ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.
- 2023 ಮಾರ್ಚ್‌ನಲ್ಲಿ ಮೊಬೈಲ್ ಫೋನ್ ರಫ್ತು 11 ಶತಕೋಟಿ ಡಾಲರ್ (ಸುಮಾರು 90,000 ಕೋಟಿ ರೂ.) ಮೈಲಿಗಲ್ಲನ್ನು ದಾಟಿದೆ.
- ಚೀನಾ ಹಾಗೂ ಇತರೆ ದೇಶಗಳಲ್ಲಿ ಉತ್ಪಾದನೆ ಆರಂಭಿಸಲು ಮುಂದಾಗಿರುವ ಅಂತಾರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿಗಳು ನಮ್ಮ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿ ವೆ.
- ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ದೊಡ್ಡ ಮಟ್ಟದ ಸಾಧನೆ ಮಾಡಿದೆ. ದೂರಸಂಪರ್ಕ ವಲಯದಲ್ಲೂ ಭಾರತದ ಎರಡು ಕಂಪನಿಗಳು ಬಾಹ್ಯಾಕಾಶ ವಲಯದಲ್ಲಿ ಹೆಚ್ಚು ಬಳಕೆಯಾಗುವಂಥಹ ಅತ್ಯುನ್ನತ ರೇಡಿಯೊ ಉಪಕರಣಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ.
- ಅಮೆರಿಕ, ಜರ್ಮನಿ, ಫ್ರಾನ್ಸ್ ಕೂಡ ಭಾರತದಿಂದ ಈ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಅದರಂತೆ ಈ ಐಟಿ ಹಾರ್ಡ್‌ವೇರ್ ವಲಯದ ಇನ್ಸೆಂಟಿವ್ ಯೋಜನೆ ಉತ್ತಮ ಫಲ ಕೊಡಲಿದೆ.