Published on: May 21, 2023

ಚುಟುಕು ಸಮಾಚಾರ : 18-19 ಮೇ 2023

ಚುಟುಕು ಸಮಾಚಾರ : 18-19 ಮೇ 2023

  • ಕೇಂದ್ರ ಸರ್ಕಾರವು ಮೊಬೈಲ್ ಟ್ರ್ಯಾಕಿಂಗ್ ಸಿಸ್ಟಮ್ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಅನ್ನು ಪ್ರಾರಂಭಿಸಿದೆ. ಸಂಚಾರ ಸಾತಿ ಪೋರ್ಟಲ್ ಮೂಲಕ ಜನರು ತಮ್ಮ ಕಾಣೆಯಾದ ಅಥವಾ ಕದ್ದ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲು ಅಥವಾ ಪತ್ತೆಹಚ್ಚಲು ಸಾಧ್ಯವಾಗುತ್ತದೆ.ಸಂಚಾರ ಸಾಥಿ ಪೋರ್ಟಲ್ ಸಿಇಐಆರ್ ನೋಯುವರ್ ಮೊಬೈಲ್ ಮತ್ತು ಎಎಸ್ಟಿಆರ್ಗಳನ್ನು ಒಳಗೊಂಡಿದೆ. ಸಿಇಐಆರ್ ಆರಂಭಿಕ ಪ್ರಾಜೆಕ್ಟ್ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕನ್ಸೂಮರ್ ಪ್ರೊಟೆಕ್ಷನ್ ಮತ್ತೊಂದು ಮಾದರಿಯನ್ನು ಒಳಗೊಂಡಿದೆ.
  • 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನವನ್ನು 2027ರ ಹೊತ್ತಿಗೆ ನಿಷೇಧಿಸುವಂತೆ ತೈಲ ಸಚಿವಾಲಯದ ಸಮಿತಿಯು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಪೆಟ್ರೋಲಿಯಂ ಮತ್ತು ನೈಸಗಿರ್ಕ ಅನಿಲ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ‘ಎನರ್ಜಿ ಟ್ರಾನ್ಸಿಟಿಷನ್ ಅಡ್ವೈಸರಿ ಕಮಿಟಿ’ಯು ಇಂಥಹದ್ದೊಂದು ಮಹತ್ವದ ಶಿಫಾರಸನ್ನು ಮಾಡಿದೆ.
  • ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಬಂಡವಾಳ ಆಕರ್ಷಿಸುವ ಹಾಗೂ ಭಾರತೀಯ ಕಂಪನಿಗಳ ಸಾಮರ್ಥ್ಯ ವೃದ್ಧಿಗೆ ಕೇಂದ್ರ ಸರಕಾರವು ಐಟಿ ಹಾರ್ಡ್ವೇರ್ ಕ್ಷೇತ್ರಕ್ಕೆ 17,000 ಕೋಟಿ ರೂಪಾಯಿ ಉತ್ಪಾದನೆ ಆಧಾರಿತ ಇನ್ಸೆಂಟಿವ್ ಯೋಜನೆಯನ್ನು ಘೋಷಿಸಿದೆ.