Published on: July 2, 2023

ಡ್ರೋನ್ ತಂತ್ರಜ್ಞಾನ ಸ್ಟಾರ್ಟ್ ಅಪ್

ಡ್ರೋನ್ ತಂತ್ರಜ್ಞಾನ ಸ್ಟಾರ್ಟ್ ಅಪ್

ಸುದ್ದಿಯಲ್ಲಿ ಏಕಿದೆ? ಬೆಂಗಳೂರು ಮೂಲದ ಡ್ರೋನ್ ತಂತ್ರಜ್ಞಾನ  ಸ್ಟಾರ್ಟ್ ಅಪ್, ಜಗತ್ತಿನ ಅತಿ ದೊಡ್ಡ ಭೂ ನಕ್ಷೆಯ ಯೋಜನೆಯ ಭಾಗವಾಗಿರಲಿದೆ.

ಮುಖ್ಯಾಂಶಗಳು

  • ಈ ಹಿಂದೆ ಆರವ್ ಅನ್ ಮ್ಯಾನ್ಡ್ ಸಿಸ್ಟಮ್ಸ್ ಎಂಬ ಸಂಸ್ಥೆಯಾಗಿದ್ದ ಏರಿಯೊ, ಈ ಯೋಜನೆಯ ಭಾಗವಾಗಿರಲಿದೆ.
  • ಕರ್ನಾಟಕ ರಾಜ್ಯ ಸರ್ಕಾರದ ಮುಕ್ತ ಟೆಂಡರ್ ಪ್ರಕ್ರಿಯೆಯಲ್ಲಿ ಆಲ್ಟೆರಾ ಮತ್ತು ನಿಯೋಜಿಯೋ (Allterra ಮತ್ತು NeoGeo), ಎರಡು ಜಿಯೋಸ್ಪೇಷಿಯಲ್ ಸಂಸ್ಥೆಗಳು ಲ್ಯಾಂಡ್ ಪಾರ್ಸೆಲ್ ಮ್ಯಾಪಿಂಗ್ ಗುತ್ತಿಗೆಯನ್ನು ಪಡೆದಿವೆ.
  • ಎರಡು ಸಂಸ್ಥೆಗಳು ಕರ್ನಾಟಕದ ಹತ್ತು ಜಿಲ್ಲೆಗಳನ್ನು ಒಳಗೊಂಡಿರುವ 86,000 ಚದರ ಕಿಮೀಗಳನ್ನು ಮ್ಯಾಪಿಂಗ್ ಮಾಡಲು ಏರಿಯೊದ ಸಹಾಯವನ್ನು ಪಡೆದಿವೆ.

ಭೂ ಮ್ಯಾಪಿಂಗ್

  • ಗದಗ, ಕೊಪ್ಪಳ, ಚಾಮರಾಜನಗರ, ಚಿಕ್ಕಮಗಳೂರು, ವಿಜಯಪುರ, ಯಾದಗಿರಿ, ರಾಯಚೂರು, ಬೀದರ್, ಕಲಬುರಗಿ ಗಳಲ್ಲಿ ಮ್ಯಾಪಿಂಗ್ ಆಗಲಿದೆ. ಡ್ರೋನ್ ಕಂಪನಿ 60 ಸರ್ವೇ-ಗ್ರೇಡ್ ಪೋಸ್ಟ್-ಪ್ರೊಸೆಸ್ಡ್ ಕಿನೆಮ್ಯಾಟಿಕ್ (ಪಿಪಿಕೆ) ಡ್ರೋನ್‌ಗಳನ್ನು ನಿಯೋಜಿಸುತ್ತದೆ. ಇದು ದಿನಕ್ಕೆ ಸರಾಸರಿ 1.75 ಲಕ್ಷ ಎಕರೆ ಪ್ರದೇಶವನ್ನು ಮ್ಯಾಪಿಂಗ್ ಮಾಡುತ್ತದೆ. 2023 ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು 2024 ರ ಮಾರ್ಚ್ ನಲ್ಲಿ ಯೋಜನೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಜಗತ್ತಿನಲ್ಲೇ ಇದು ಅತಿ ದೊಡ್ಡ ಮ್ಯಾಪಿಂಗ್ ಯೋಜನೆಯಾಗಿದೆ.
  • “ಇದು ಭಾರತ ಹಾಗೂ ಡ್ರೋನ್ ಕ್ಷೇತ್ರಕ್ಕೇ ಮಹತ್ವದ ಯೋಜನೆಯಾಗಿದೆ.   ಡ್ರೋನ್ ವ್ಯವಸ್ಥೆಗಳ ಮೂಲಕ ಪಾಲುದಾರರಿಗೆ ಅಪಾರ ಮೌಲ್ಯವನ್ನು ತಲುಪಿಸುವ ಗುರಿಯನ್ನು ಹೊಂದಿದೆ ಮತ್ತು ಬಹು-ವಲಯ ಅಪ್ಲಿಕೇಶನ್‌ಗಳನ್ನು ಹೊಂದಿರುವ ಅಲ್ಟ್ರಾ-ಹೈ ರೆಸಲ್ಯೂಶನ್ ಡಿಜಿಟಲ್ ಸಮೀಕ್ಷೆ ನಕ್ಷೆಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ನೆರವಾಗುವ ಗುರಿಯನ್ನು ಹೊಂದಿದೆ.

ಭೂ ಮ್ಯಾಪಿಂಗ್ ನ ಉದ್ದೇಶ

  • ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭೂ ದಾಖಲೆಗಳ ಡಿಜಿಟಲೀಕರಣವನ್ನು ತ್ವರಿತವಾಗಿ ಮಾಡಲು ಮ್ಯಾಪಿಂಗ್ ತುರ್ತು ಅಗತ್ಯವಾಗಿದೆ.