Published on: July 7, 2023

‘ಹಂಪಿ ನೈಟ್ ಸಫಾರಿ’

‘ಹಂಪಿ ನೈಟ್ ಸಫಾರಿ’

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ  ಹಂಪಿಯ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್(ಹಂಪಿ ಮೃಗಾಲಯ)ನಲ್ಲಿ ರಾತ್ರಿ ಸಫಾರಿ ಆರಂಭವಾಗಲಿದೆ ಎಂದು ವರದಿಯಾಗಿದೆ.

ಮುಖ್ಯಾಂಶಗಳು

  • ‘ಹಂಪಿ ಮೃಗಾಲಯ 350 ಎಕರೆ ಪದೇಶದಲ್ಲಿ ವ್ಯಾಪಿಸಿಕೊಂಡಿದೆ. ಇಲ್ಲಿ 700 ಎಕರೆಯಷ್ಟು ಅರಣ್ಯವಿದ್ದರೂ ಅಷ್ಟೂ ಪ್ರದೇಶಕ್ಕೆ ಮೃಗಾಲಯ ವಿಸ್ತರಿಸುವ ಯೋಜನೆ ಇಲ್ಲ. ಉಳಿಕೆ ಪ್ರದೇಶವನ್ನು ಬಫರ್ ಜೋನ್ ಆಗಿ ಉಳಿಸಿಕೊಳ್ಳಲು ಯೋಜಿಸಲಾಯಿದೆ.
  • ಸಾಮಾನ್ಯವಾಗಿ ಮೃಗಾಲಯದಲ್ಲಿ ಸಫಾರಿ ಇರುವುದಿಲ್ಲ. ಸಫಾರಿ ವ್ಯವಸ್ಥೆ ಇದ್ದರೆ ಅದನ್ನು ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಹಂಪಿ ಮೃಗಾಲಯದಲ್ಲಿ ಈ ಎರಡೂ ವ್ಯವಸ್ಥೆಗಳು ಒಂದೇ ಕಡೆ ಇವೆ. ಮೊದಲು ಸಫಾರಿಯಲ್ಲಿ ಸುತ್ತಿದ ಬಳಿಕ, ಮೃಗಾಲಯಕ್ಕೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ‘ಅಟಲ್ ಬಿಹಾರಿ ವಾಜಪೇಯಿ ವನ್ಯಜೀವಿ ಧಾಮ’ ಎಂಬ ಹೆಸರಿನ ಈ ಪ್ರವಾಸಿ ತಾಣ ಹಂಪಿ ಮೃಗಾಲಯ ಎಂದೂ ಹೆಸರಾಗಿದೆ.

ಕಾರಣ : ಹಂಪಿ ಸುತ್ತಮುತ್ತ ಭಾರಿ ಬಿಸಿಲು ಇದೆ. ಹೀಗಾಗಿ ನೈಟ್ ಸಫಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಹಂಪಿ ಮೃಗಾಲಯ (ಶ್ರೀ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್”)

  • ಹಂಪಿ ಮೃಗಾಲಯದ ನಿರ್ಮಾಣ ಕಾರ್ಯ 2013ರಲ್ಲಿ ಆರಂಭಗೊಂಡು 2017ರಲ್ಲಿ ಕೊನೆಗೊಂಡಿತ್ತು.
  • ಕಲ್ಯಾಣ ಕರ್ನಾಟಕ ಪ್ರದೇಶದ ಏಕೈಕ ಸಫಾರಿ ಸ್ಥಳ ಇದಾಗಿದೆ.
  • ಇದು ಬಳ್ಳಾರಿ ಜಿಲ್ಲೆಯಲ್ಲಿರುವ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ.
  • ಮೃಗಾಲಯವು 80 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಹೊಂದಿದೆ.

ಹಿನ್ನೆಲೆ

  • ಬಳ್ಳಾರಿ ಮೃಗಾಲಯವನ್ನು 01-10-1981 ರಂದು, ಬಳ್ಳಾರಿ ನಗರದಲ್ಲಿ ಸ್ಥಾಪಿಸಲಾಯಿತು
  • ಈ ಪ್ರದೇಶದಲ್ಲಿ ಕಬ್ಬಿಣದ ಅದಿರು ಸಾಗಿಸುವ ಟ್ರಕ್‌ಗಳ ಸಂಚಾರದಿಂದ ಮತ್ತು ರೈಲುಗಳ ಸಂಚಾರದಿಂದ ಮಾಲಿನ್ಯ ಹೆಚ್ಚಾದ ಕಾರಣ, ಲಭ್ಯವಿರುವ ಪ್ರದೇಶವು ಚಿಕ್ಕದಾಗಿರುವುದರಿಂದ, ಕೇಂದ್ರ ಮೃಗಾಲಯ ಪ್ರಾಧಿಕಾರವು ಸೂಚಿಸಿದಂತೆ ಆವರಣಗಳನ್ನು ಗುಣಮಟ್ಟಕ್ಕೆ ನವೀಕರಿಸಲು ಯಾವುದೇ ಅವಕಾಶವಿರಲಿಲ್ಲ; ಹಾಗಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬಿಳಿಕಲ್ ಪಶ್ಚಿಮ ಮೀಸಲು ಅರಣ್ಯದ ಕಮಲಾಪುರ ಬಳಿಯ ಮೃಗಾಲಯವನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಯಿತು.

ಪ್ರಸ್ತುತ ಮೃಗಾಲಯವನ್ನು “ಶ್ರೀ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್” ಎಂದು ಮರುನಾಮಕರಣ ಮಾಡಲಾಗಿದೆ