Published on: July 19, 2023

ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಸುದ್ದಿಯಲ್ಲಿ ಏಕಿದೆ? ಪೋರ್ಟ್ ಬ್ಲೇರನಲ್ಲಿ  ನಿರ್ಮಿಸಿರುವ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಮುಖ್ಯಾಂಶಗಳು

  • ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಮೋದಿ ಉದ್ಘಾಟಿಸಲಿದ್ದಾರೆ.
  • ನೂತನ ಏಕೀಕೃತ ಟರ್ಮಿನಲ್ ಕಟ್ಟಡವು ವಾರ್ಷಿಕ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
  • ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಎರಡು ಬೋಯಿಂಗ್-767-400 ಮತ್ತು ಎರಡು ಏರ್‌ಬಸ್-321 ಮಾದರಿಯ ವಿಮಾನಗಳಿಗೆ ಸೂಕ್ತವಾದ ಅಪ್ರಾನ್ ಸಹ ನಿರ್ಮಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಏಕಕಾಲದಲ್ಲಿ ಹತ್ತು ವಿಮಾನಗಳ ನಿಲುಗಡೆಗೆ ವಿಮಾನ ನಿಲ್ದಾಣವು ಸಿದ್ಧವಾಗಿದೆ.
  • ಒಟ್ಟು ಸುಮಾರು 40,800 ಚದರ ಮೀಟರ್‌ನ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.

ವಿಶೇಷತೆ

  • ನಿಸರ್ಗದಿಂದ ಸ್ಫೂರ್ತಿ ಪಡೆದು, ನಿರ್ಮಿಸಲಾದ ವಿಮಾನ ನಿಲ್ದಾಣದ ಟರ್ಮಿನಲ್‌ನ ವಾಸ್ತುಶಿಲ್ಪ ವಿನ್ಯಾಸವು ಚಿಪ್ಪಿನ ಆಕಾರದ ರಚನೆಯನ್ನು ಹೊಂದಿದೆ.ಇದು  ಸಮುದ್ರ ಮತ್ತು ದ್ವೀಪಗಳನ್ನು ಬಿಂಬಿಸುತ್ತದೆ.
  • ಶಾಖ ಹೀರಿಕೊಳ್ಳುವಿಕೆಯನ್ನು ತಗ್ಗಿಸಲು ಡಬಲ್ ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಕಟ್ಟಡದ ಒಳಗೆ ಕೃತಕ ಬೆಳಕಿನ ಅವಶ್ಯಕತೆಯನ್ನು ತಗ್ಗಿಸಲು ಹಗಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕ ಸೂರ್ಯನ ಬೆಳಕಿನ ಗರಿಷ್ಠ ಒಳಹರಿವಿಗೆ ಸ್ಕೈಲೈಟ್‌ಗಳು, ಎಲ್ಇಡಿ ಲೈಟಿಂಗ್, ಶಾಖ ತಗ್ಗಿಸುವ ಗೇನ್ ಗ್ಲೇಜಿಂಗ್ ಮುಂತಾದ ಹಲವಾರು ಸಮರ್ಥನೀಯ ವೈಶಿಷ್ಟ್ಯಗಳನ್ನು ಹೊಸ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಹೊಂದಿದೆ.
  • ಇಲ್ಲಿ ನಿರ್ಮಿಸಲಾದ ಭೂಮಿಯಡಿಯ ನೀರಿನ ತೊಟ್ಟಿಯಲ್ಲಿ ಮಳೆನೀರಿನ ಸಂಗ್ರಹಣೆ, 100% ಸಂಸ್ಕರಿಸಿದ ತ್ಯಾಜ್ಯನೀರಿನೊಂದಿಗೆ ಆನ್-ಸೈಟ್ ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು 500 ಕಿಲೊ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವು ದ್ವೀಪಗಳ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಗ್ಗಿಸುವುದನ್ನು ಖಾತ್ರಿಪಡಿಸುವುದು

ಪ್ರಯೋಜನ:

  • ಈ ವಿಮಾನ ನಿಲ್ದಾಣ  ದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ  ಸಂಪರ್ಕವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಅಂಡಮಾನ್ ಮತ್ತು ನಿಕೋಬಾರ್‌ನ ಪ್ರಾಚೀನ ದ್ವೀಪಗಳಿಗೆ ದ್ವಾರದಂತೆ, ಪೋರ್ಟ್ ಬ್ಲೇರ್ ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ.
  • ವಾಯು ಸಂಚಾರವನ್ನು ವೃದ್ಧಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಇದು ಸ್ಥಳೀಯರಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ಪುಷ್ಟಿ ನೀಡುವುದರ ಜೊತೆಗೆ ಪ್ರದೇಶದ ಆರ್ಥಿಕತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

ಪೋರ್ಟ್ ಬ್ಲೇರ

  • ಇದು ಅಂಡಮಾನ್ ನಿಕೋಬಾರ ದ್ವೀಪದ ರಾಜಧಾನಿಯಾಗಿದೆ. ಇದು ಬಂಗಳ ಕೊಲ್ಲಿ ಸಮುದ್ರದಲ್ಲಿದೆ.
  • ಅಂಡಮಾನ್ ನಿಕೋಬಾರ ದ್ವೀಪಗಳು ಎರಡು ದ್ವೀಪ ಗುಂಪುಗಳನ್ನು ಒಳಗೊಂಡಿದೆ, ಅಂಡಮಾನ್(ಭಾಗಶಃ) ಮತ್ತು ನಿಕೋಬಾರ್ ದ್ವೀಪಗಳು, 150 ಕಿಮೀ (100 ಮೈಲಿ) ಅಗಲದ  10 ° ಚಾನೆಲ್ ಇವುಗಳನ್ನು ಬೇರ್ಪಡಿಸುತ್ತದೆ. ಈ ಅಕ್ಷಾಂಶದ ಉತ್ತರಕ್ಕೆ ಅಂಡಮಾನ್  ಮತ್ತು ದಕ್ಷಿಣಕ್ಕೆ ನಿಕೋಬಾರ್ ದ್ವೀಪಗಳಿವೆ.

ಪ್ರದೇಶವನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ:

  • ನಿಕೋಬಾರ್ ಜಿಲ್ಲೆ : ರಾಜಧಾನಿ ಕಾರ್ ನಿಕೋಬಾರ್
  • ದಕ್ಷಿಣ ಅಂಡಮಾನ್ ಜಿಲ್ಲೆ : ರಾಜಧಾನಿ ಪೋರ್ಟ್ ಬ್ಲೇರ್
  • ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆ: ರಾಜಧಾನಿ ಮಾಯಾಬಂದರ್