Published on: July 19, 2023
ಜಿಂಕೆಗಳ ಸೂಕ್ಷ್ಮ ತಾಣಗಳ ಅಭಿವೃದ್ಧಿ
ಜಿಂಕೆಗಳ ಸೂಕ್ಷ್ಮ ತಾಣಗಳ ಅಭಿವೃದ್ಧಿ
ಸುದ್ದಿಯಲ್ಲಿ ಏಕಿದೆ? ಹುಲಿ ಬೇಟೆಯ ನೆಲೆ ವಿಸ್ತರಿಸುವ ದೃಷ್ಟಿಯಿಂದ ಜಾರ್ಖಂಡ್ನ ಪಲಾಮು ಹುಲಿ ಸಂರಕ್ಷಿತ ಪ್ರದೇಶ(ಪಿಟಿಆರ್)ದಲ್ಲಿ ಜಿಂಕೆಗಳಿಗಾಗಿ ನಾಲ್ಕು ಸೂಕ್ಷ್ಮ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಾಂಶಗಳು
- ಹಿಂದೊಮ್ಮೆ ಮಾವೋ ವಾದಿಗಳ ನೆಲೆಯಾಗಿದ್ದ ಬುದ್ಧ ಪಹಡ್ನಲ್ಲಿ ಐದನೇ ಸೂಕ್ಷ್ಮ ಕೇಂದ್ರವನ್ನು ನಿರ್ಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
- ಬೆಟ್ಲಾ ಸಂರಕ್ಷಿತ ಪ್ರದೇಶದಿಂದ ಸೂಕ್ಷ್ಮ ತಾಣಗಳಿಗೆ ಜಿಂಕೆಗಳನ್ನು ಸ್ಥಳಾಂತರಿಸಲಾಗುವುದು.
- ಹುಲ್ಲುಗಾವಲು ಅಭಿವೃದ್ಧಿ, ಚೆಕ್ಡ್ಯಾಮ್ಗಳನ್ನು ಈ ಸೂಕ್ಷ್ಮ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಆಗ ಹುಲಿಗಳ ಸಂಚಾರ ಹೆಚ್ಚಾಗಲಿದೆ. ಜಾರ್ಖಂಡ್ನ ಲತೇಹಾರ್ ಮತ್ತು ಗರ್ವಾ ಜಿಲ್ಲೆಗಳ ಉದ್ದಕ್ಕೂ ಇರುವ ಬುದ್ಧ ಪಹಾದ್ನ ತಪ್ಪಲಿನಲ್ಲಿ ಹುಲ್ಲುಗಾವಲು ಅಭಿವೃದ್ಧಿಪಡಿಸಲು ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಿಸಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ. ಕುಟ್ಕು ವಲಯದಲ್ಲಿರುವ ಬುದ್ಧ ಪಹದ್ ಜಾರ್ಖಂಡ್ ಮತ್ತು ಛತ್ತೀಸಗಢ ನಡುವಿನ ಹುಲಿ ಕಾರಿಡಾರ್ ಕೂಡ ಹೌದು
ಉದ್ದೇಶ : ಈ ಪ್ರಯತ್ನದಿಂದಾಗಿ ಪಿಟಿಆರ್ಗೆ ಹುಲಿಗಳು ಮರಳಿ ಬರುವ ನಿರೀಕ್ಷೆಯಿದೆ.
ಹಿನ್ನೆಲೆ
- ಭಾರತದಲ್ಲಿ 70ರ ದಶಕದಲ್ಲಿ ರಚನೆಯಾದ 9 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪಿಟಿಆರ್ ಕೂಡ ಒಂದು. ಆದರೆ, 2019ರಲ್ಲಿ ಇಲ್ಲಿ ಹುಲಿ ಅಸ್ತಿತ್ವ ಇಲ್ಲ ಎಂದು ವರದಿಯಾಗಿತ್ತು. 2023ರಮಾರ್ಚ್ ನಲ್ಲಿ ಮೂರು ವರ್ಷಗಳ ಬಳಿಕ ಪಿಟಿಆರ್ನಲ್ಲಿ ಹುಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.
ಪಲಾಮು ಹುಲಿ ಸಂರಕ್ಷಿತ ಪ್ರದೇಶ
- ಇದು ಜಾರ್ಖಂಡ್ನ ಛೋಟಾ ನಾಗ್ಪುರ ಪ್ರಸ್ಥಭೂಮಿ ಪ್ರದೇಶದಲ್ಲಿದೆ .
- ಮೀಸಲು ಪ್ರದೇಶವು ಬಾಕ್ಸೈಟ್ ಮತ್ತು ಕಲ್ಲಿದ್ದಲಿನಂತಹ ಖನಿಜಗಳಿಂದ ಸಮೃದ್ಧವಾಗಿದೆ.
- 2019ರಲ್ಲಿ ಬಿಡುಗಡೆಯಾದ ಹುಲಿ ಗಣತಿ ವರದಿಯಲ್ಲಿ ಈ ಮೀಸಲು ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಶೂನ್ಯ ಎಂದು ಹೇಳಲಾಗಿತ್ತು.
- 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಪಲಾಮು ಟೈಗರ್ ರಿಸರ್ವ್ ಅನ್ನು ಸ್ಥಾಪಿಸಲಾಯಿತು.
- ಪಲಾಮು ಹುಲಿ ಸಂರಕ್ಷಿತ ಪ್ರದೇಶವು ಹುಲಿ ಗಣತಿಯನ್ನು ಹೆಜ್ಜೆ ಗುರುತುಗಳ ಆಧಾರದ ಮಾಡಲಾಗುವ ವಿಶ್ವದ ಮೊದಲ ಅಭಯಾರಣ್ಯವಾಗಿದೆ
- ‘ಬೆಟ್ಲಾ ರಾಷ್ಟ್ರೀಯ ಉದ್ಯಾನವನ’ ಪಲಾಮು ಹುಲಿ ಸಂರಕ್ಷಿತ ಪ್ರದೇಶದೊಳಗೆ 226.32 ಚ.ಕಿ.ಮೀ.ನಲ್ಲಿ ನೆಲೆಗೊಂಡಿದೆ, ಇದು ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ಒಟ್ಟು 1130 ಚದರ ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿದೆ.