Published on: July 22, 2023
ಚುಟುಕು ಸಮಾಚಾರ : 20 ಜುಲೈ 2023
ಚುಟುಕು ಸಮಾಚಾರ : 20 ಜುಲೈ 2023
- ಡಿಜಿಟಲ್ ಇಂಡಿಯಾ ಭೂದಾಖಲೆಗಳ ಆಧುನೀಕರಣ ಕಾರ್ಯಕ್ರಮವನ್ನು (ಡಿಐಎಲ್ಆರ್ಎಂಪಿ) ಅನುಷ್ಠಾನಗೊಳಿಸುವಲ್ಲಿ ಸಾಧನೆ ಮಾಡಿದ 9 ರಾಜ್ಯ ಕಾರ್ಯದರ್ಶಿಗಳು ಹಾಗೂ 68 ಜಿಲ್ಲಾಧಿಕಾರಿಗಳಿಗೆ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರು ‘ಭೂಮಿ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಆಧುನೀಕರಣ ಕಾರ್ಯಕ್ರಮದ (DILRMP) ಅನುಷ್ಠಾನದಲ್ಲಿ ವ್ಯಕ್ತಿಗಳು ಮತ್ತು ತಂಡಗಳ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸುವ ಗುರಿಯನ್ನು ಹೊಂದಿದೆ.
- ಗಡಿಯಾಚೆಗಿನ ವಹಿವಾಟುಗಳಿಗಾಗಿ ಭಾರತೀಯ ರೂಪಾಯಿ (INR) ಮತ್ತು UAE ದಿರ್ಹಾಮ್ (AED) ಬಳಕೆಯನ್ನು ಉತ್ತೇಜಿಸಲು ಸ್ಥಳೀಯ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ (LCSS) ಅನ್ನು ಸ್ಥಾಪಿಸಲು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಒಪ್ಪಂದಕ್ಕೆ ಸಹಿ ಹಾಕಿವೆ.
- ಅಮೆರಿಕವು ದಶಕಗಳಷ್ಟು ಹಳೆಯದಾದ ಕೆಮಿಕಲ್ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಜೋ ಬೈಡೆನ್ ಘೋಷಿಸಿದ್ದಾರೆ. 1993ರಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ಕೈಗೊಂಡ ನಿರ್ಧಾರದಂತೆ ಎಲ್ಲ ರಾಷ್ಟ್ರಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ್ದು, ಕೊನೆಯದಾಗಿ ಅಮೆರಿಕ ಪೂರ್ಣಗೊಳಿಸಿದೆ.