Published on: July 23, 2023
ಮೈಸೂರ್ ಪಾಕ್
ಮೈಸೂರ್ ಪಾಕ್
ಸುದ್ದಿಯಲ್ಲಿ ಏಕಿದೆ? ಮೈಸೂರ್ ಪಾಕ್ ಇದೀಗ ವಿಶ್ವ ಸ್ಟ್ರೀಟ್ ಫುಡ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.
ಮುಖ್ಯಾಂಶಗಳು
- 4 ರೇಟಿಂಗ್ ಪಡೆದ ಮೈಸೂರು ಪಾಕ್, ಆನ್‌ಲೈನ್ ಮಾರ್ಕೆಟ್ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಭಾರತದ ಮೂರು ಖಾದ್ಯಗಳು
- ಆನ್‌ಲೈನ್ ಟೂರ್ ಗೈಡ್ ಟೇಸ್ಟ್ ಅಟ್ಲಾಸ್ ಇತ್ತೀಚಿಗೆ ಬಿಡುಗಡೆ ಮಾಡಿದ ವಿಶ್ವದ 50 ಅತ್ಯುತ್ತಮ ಬೀದಿ ಆಹಾರ ಸಿಹಿತಿಂಡಿಗಳು ಪಟ್ಟಿಯಲ್ಲಿ ಭಾರತದ ಮೂರು ಖಾದ್ಯಗಳು ಸ್ಥಾನ ಪಡೆದಿದೆ. ಮೈಸೂರು ಪಾಕ್ 14ನೇ ಸ್ಥಾನದಲ್ಲಿದ್ದರೆ. ಕುಲ್ಫಿ 18ನೇ ಸ್ಥಾನ ಹಾಗೂ ಕುಲ್ಫಿ ಫಲೂದ 32ನೇ ಸ್ಥಾನದಲ್ಲಿದೆ. ಮೊಘಲ್ ಸಾಮ್ರಾಜ್ಯದ ಯುಗದಲ್ಲಿ ಹಿಮಾಲಯದ ಪ್ರಾಚೀನ ನಿವಾಸಿಗಳು ಕುಲ್ಫಿಯನ್ನು ಕಂಡುಹಿಡಿದರು ಎಂದು ನಂಬಲಾಗಿದೆ.
ಮೈಸೂರು ಪಾಕ್ ಹಿನ್ನಲೆ
- 90 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಭಾಣಸಿಗರಾಗಿದ್ದ ಮಾದಪ್ಪ ಎಂಬುವವರು ಆಗಿನ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಊಟಕ್ಕೆ ಕುಳಿತಾಗ ತಟ್ಟೆಯಲ್ಲಿ ಸಿಹಿ ಇಲ್ಲದಿರುವುದನ್ನು ಗಮನಿಸಿ ಅವಸರದಲ್ಲಿ ಸಕ್ಕರೆ, ತುಪ್ಪ ಹಾಗೂ ಕಡ್ಲೇಹಿಟ್ಟಿನ ಮಿಶ್ರಣದಿಂದ ಖಾದ್ಯವನ್ನು ತಯಾರಿಸಿಕೊಟ್ಟು ಬಾರಿ ಪ್ರಶಂಸೆ ಗಿಟ್ಟಿಸಿದ್ದರು.