Published on: July 30, 2023
ಅಂತರರಾಷ್ಟ್ರೀಯ ಹುಲಿ ದಿನ
ಅಂತರರಾಷ್ಟ್ರೀಯ ಹುಲಿ ದಿನ
ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಜುಲೈ 29 ರಂದು ‘ಹುಲಿ ದಿನ’ವನ್ನು ಆಚರಣೆ ಮಾಡಲಾಗುತ್ತದೆ
ಮುಖ್ಯಾಂಶಗಳು
- ಹುಲಿ ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ. ಇತ್ತಿಚಿನ ದಿನಗಳಲ್ಲಿ ಅಳುವಿನಂಚಿನತ್ತ ಹುಲಿಯ ಸಂತತಿಯು ಸಾಗುತ್ತಿದೆ.
- ಅಕ್ರಮವಾಗಿ ನಡೆಸುತ್ತಿರುವ ವನ್ಯಜೀವಿಗಳ ವ್ಯಾಪಾರ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡಿನ ನಾಶದಿಂದಾಗಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.
ಉದ್ದೇಶ
- ಜಗತ್ತಿನ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಂಡುಬರುತ್ತವೆ. ಈ ಹಿನ್ನಲೆಯಲ್ಲಿ ಹುಲಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.
- ಆವಾಸಸ್ಥಾನ ನಷ್ಟ, ಬೇಟೆಯಾಡುವುದು, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸೇರಿದಂತೆ ಹುಲಿಗಳು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಹುಲಿ ದಿನವು ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಭವಿಷ್ಯದ ಪೀಳಿಗೆಗೆ ಹುಲಿಗಳ ಉಳಿವನ್ನು ಖಚಿತಪಡಿಸಿಕೊಳ್ಳಲು ಹುಲಿಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಮಹತ್ವವನ್ನು ಇದು ಒತ್ತಿಹೇಳುತ್ತದೆ.
ದಿನದ ಮಹತ್ವ
- ಹುಲಿಗಳು ಅತ್ಯುನ್ನತ ಪರಭಕ್ಷಕಗಳಾಗಿವೆ ಮತ್ತು ಅವುಗಳ ಉಪಸ್ಥಿತಿಯು ಅವುಗಳ ಪರಿಸರ ವ್ಯವಸ್ಥೆಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹುಲಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವ ಮೂಲಕ, ನಾವು ಹಲವಾರು ಇತರ ಜಾತಿಗಳನ್ನು ಮತ್ತು ಅವು ವಾಸಿಸುವ ಪರಿಸರ ವ್ಯವಸ್ಥೆಗಳ ಒಟ್ಟಾರೆ ಜೀವವೈವಿಧ್ಯತೆಯನ್ನು ರಕ್ಷಿಸುತ್ತೇವೆ.
ಹಿನ್ನಲೆ
- ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010ರ ಜುಲೈ 29ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್ನಲ್ಲಿ ಆಚರಿಸಲಾಯಿತು.
ಭಾರತದಲ್ಲಿ ಹುಲಿ ಗಣತಿ
- 2006 ರಿಂದ ಹುಲಿಗಳ ಗಣತಿಯನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆ ನಾಲ್ಕು ವರ್ಷಕ್ಕೊಮ್ಮೆ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತದೆ. 2006, 2010, 2014 ಹಾಗೂ 2018ರಲ್ಲಿ ಗಣತಿ ಆಗಿದೆ. ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ.
- 2018ರ ಹುಲಿ ಗಣತಿ ಪ್ರಕಾರ ದೇಶದಲ್ಲಿ 2967 ಹುಲಿಗಳು ಇವೆ. ಈ ಮೂಲಕ ಜಗತ್ತಿನಲ್ಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳ ಭಾರತವಾಗಿದೆ.
- 2018ರ ಹುಲಿ ಗಣತಿಗೆ 1400 ಕ್ಯಾಮೆರಾ ಟ್ರ್ಯಾಪ್ಗಳನ್ನು ಬಳಸಲಾಗಿತ್ತು. ಪ್ರಪಂಚದ 13 ದೇಶಗಳ ಕಾಡಿನಲ್ಲಿ ಮಾತ್ರ ಹುಲಿಗಳನ್ನು ನಾವು ಕಾಣಬಹುದಾಗಿದೆ.
- ವಿಶ್ವದಲ್ಲೇ ಅತಿಹೆಚ್ಚು ಹುಲಿಗಳು ಏಷ್ಯಾಖಂಡದಲ್ಲೇ ಇರುವುದು.
- 2018ರ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 524 ಹುಲಿಗಳಿದ್ದು, ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 442 ಹುಲಿಗಳಿದ್ದು ಮೂರನೇ ಸ್ಥಾನದಲ್ಲಿದೆ. 2014ರಲ್ಲಿ ಕರ್ನಾಟಕ ರಾಜ್ಯದಲ್ಲಿ 406 ಹುಲಿಗಳಿದ್ದವು.
ಗಣತಿಯನ್ನ ಹೇಗೆ ಮಾಡಲಾಗುತ್ತದೆ?
- ಹುಲಿ ಗಣತಿಯನ್ನು ನಾಲ್ಕು ವಿಧಾನದಲ್ಲಿ ನಡೆಸಲಾಗುತ್ತದೆ. ಮೊದಲ ಎರಡು ಹಂತದಲ್ಲಿ ಹುಲಿ ಇರುವಿಕೆಯ ಚಿಹ್ನೆ, ಸ್ಕ್ಯಾಟ್ ಮತ್ತು ಪಗ್ ಮಾರ್ಕ್ ಮೂಲಕ ಗುರುತಿಸಲಾಗುತ್ತದೆ. ಮೂರನೇ ಹಂತದಲ್ಲಿ ಜಿಐಎಸ್ ಅಪ್ಲಿಕೇಶನ್ನೊಂದಿಗೆ ಸಿದ್ಧಪಡಿಸಿದ ಕ್ಯಾಮೆರಾ ಟ್ರ್ಯಾಪ್ಗಳನ್ನು ಬಳಸಿ ಎಣಿಸಲಾಗುತ್ತದೆ. ಕೊನೆ ಹಂತದಲ್ಲಿ ಕ್ಯಾಮೆರಾ ಹಾಕದ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿ ದತ್ತಾಂಶ ಕಲೆ ಹಾಕಲಾಗುತ್ತದೆ.
ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣ
- ಹುಲಿಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ, ಅರಣ್ಯ ಇಲಾಖೆಯ ಜಾಗರೂಕತೆ ಹಾಗೂ ಸಂರಕ್ಷಣೆಯ ಪ್ರಯತ್ನಗಳು ಹುಲಿ ಸಂಖ್ಯೆ ಹೆಚ್ಚಾಗಲು ಒಂದು ಕಾರಣ. ಜತೆಗೆ ಕಳ್ಳ ಬೇಟೆ ಕಡಿಮೆ ಆಗಿದ್ದು, ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೆಚ್ಚು ಮಾಡಲಾಗಿದೆ. ನ್ಯಾಷನಲ್ ಟೈಗರ್ ಕನ್ಜರ್ವೇಷನ್ ಅಥಾರಿಟಿ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಸ್ಥಾಪನೆಯಾಗಿದ್ದು ಪ್ರಯೋಜನಕಾರಿಯಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ
- ದೇಶದಲ್ಲಿ ಹುಲಿಗಳ ಸಂರಕ್ಷಣೆಗಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಅಸ್ತಿತ್ವಕ್ಕೆ ಬಂತು. ನಂತರ ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಾಗಿ ಬದಲಾಗಿ ಹುಲಿಗಳ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಸ್ಪೆಷಲ್ ಟೈಗರ್ ಪ್ರೊಟೆಕ್ಷನ್ ಫೋರ್ಸ್ ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಜಾರಿಗೆ ತರಲಾಗಿದೆ.
- ಕರ್ನಾಟಕದ ಹುಲಿ ಸಂರಕ್ಷಿತ 5 ಪ್ರದೇಶ: ಬಂಡೀಪುರ, ನಾಗರಹೊಳೆ, ಬಿಆರ್ಟಿ, ಭದ್ರಾ ಹಾಗೂ ಕಾಳಿ .
ನಿಮಗಿದು ತಿಳಿದಿರಲಿ
- ವಿಶ್ವ ವನ್ಯಜೀವಿ ನಿಧಿಯ ಪ್ರಧಾನ ಕಛೇರಿ: ಗ್ಲ್ಯಾಂಡ್, ಸ್ವಿಟ್ಜರ್ಲೆಂಡ್
- ವಿಶ್ವ ವನ್ಯಜೀವಿ ನಿಧಿ ಸ್ಥಾಪನೆ: 29 ಏಪ್ರಿಲ್ 1961
- ವಿಶ್ವ ವನ್ಯಜೀವಿ ನಿಧಿ ನಿರ್ದೇಶಕ ಜನರಲ್ : ಮಾರ್ಕೊ ಲ್ಯಾಂಬರ್ಟಿನಿ.