Published on: July 30, 2023
‘ಹಸಿರು ಸರೋವರ’ ಅಭಿವೃದ್ಧಿ
‘ಹಸಿರು ಸರೋವರ’ ಅಭಿವೃದ್ಧಿ
ಸುದ್ದಿಯಲ್ಲಿ ಏಕಿದೆ? ಜೈವಿಕ ಬೇಲಿಯೊಂದಿಗೆ ಕರ್ನಾಟಕ ರಾಜ್ಯದಲ್ಲಿ 100 ಕೆರೆಗಳು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಕಾಂಕ್ರೀಟ್, ಪೇವರ್ಸ್ಗಳನ್ನು ಅಳವಡಿಸದೆ ಜೈವಿಕ ತಡೆಗೋಡೆಗಳೊಂದಿಗೆ ‘ಹಸಿರು ಸರೋವರ’ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.
ಮುಖ್ಯಾಂಶಗಳು
- ‘ಅಮೃತ ಸರೋವರ ಕಾರ್ಯಕ್ರಮದಲ್ಲಿ ‘ಹಸಿರು ಸರೋವರ ಅಭಿಯಾನವನ್ನು’ ಆಯೋಜಿಸಲಾಗಿದೆ.
- ಹತ್ತಾರು ಕೆರೆಗಳನ್ನು ನೈಸರ್ಗಿಕವಾಗಿ ಅಭಿವೃದ್ಧಿಗೊಳಿಸಿರುವ ಆನಂದ ಮಲ್ಲಿಗಡವಾಡ ಅವರು ಯೋಜನೆಗೆ ಸಲಹೆ ನೀಡುತ್ತಿದ್ದಾರೆ. 100 ಕೆರೆಗಳು ‘ಹಸಿರು ಸರೋವರಗಳಾಗಿ’ ಈ ಆರ್ಥಿಕ ವರ್ಷದಲ್ಲಿಸಿದ್ಧವಾಗಲಿವೆ
- ದಾವಣಗೆರೆ, ಧಾರವಾಡ, ಹಾಸನ, ಹಾವೇರಿ ಜಿಲ್ಲೆಗಳಲ್ಲಿ ತಲಾ ಐದು, ಚಿತ್ರದುರ್ಗ , ಗದಗದಲ್ಲಿ ತಲಾ ನಾಲ್ಕು, ಕಲಬುರಗಿ, ಉಡುಪಿ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಎರಡು ಕೆರೆಗಳು ಸೇರಿದಂತೆ ಉಳಿದ 22 ಜಿಲ್ಲೆಗಳಲ್ಲಿ ತಲಾಮೂರು ಕೆರೆಗಳನ್ನು ‘ಹಸಿರು ಸರೋವರ’ವನ್ನಾಗಿಸಲು ನಿರ್ಧರಿಸಲಾಗಿದೆ.
ಏನಿದು ಅಭಿಯಾನ?
- ಹಿಂದೆ ಅನುಸರಿಸುತ್ತಿದ್ದ ಕೆರೆ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ ವಿಧಾನವನ್ನೇ ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಳವಡಿಸಿಕೊಳ್ಳುತ್ತಿದೆ.
- ಕೆರೆಗಳನ್ನು ಕೆರೆಗಳನ್ನಾಗಿಯೇ ಉಳಿಸಿಕೊಂಡು, ಅತ್ಯಾಧುನಿಕ ಸೌಕರ್ಯಗಳಿಂದ ದೂರ ಉಳಿಸಿ, ಕಡಿಮೆ ವೆಚ್ಚದಲ್ಲಿಪರಿಸರ ಸ್ನೇಹಿ ತಾಣವನ್ನಾಗಿಸುವ ಯೋಜನೆ ಆರಂಭವಾಗಿದೆ.
- ರಾಜ್ಯದ 31 ಜಿಲ್ಲೆಗಳಲ್ಲಿ 100 ಕೆರೆಗಳು ‘ಹಸಿರು ಸರೋವರ’ವಾಗುವ ಕಾರ್ಯ ಆಗಸ್ಟ್ನಿಂದ ಆರಂಭವಾಗಲಿದೆ.
- ಪ್ರತಿ ತಾಲ್ಲೂಕು ಮಟ್ಟದಲ್ಲಿ ರಾಷ್ಟ್ರೀಯ ಜೀವನೋಪಾಯ ಸಂಸ್ಥೆಯಿಂದ (ಎನ್ಅರ್ಎಲ್ಎಂ) ರಚಿತವಾಗಿರವ ಗ್ರಾಮ ಪಂಚಾಯಿತಿ ಮಟ್ಟದ ಸ್ವ–ಸಹಾಯ ಸಂಘಗಳ ಒಕ್ಕೂಟದ ನರ್ಸರಿಗಳಿಂದ ಸಸಿಗಳನ್ನು ನಾಟಿ ಮಾಡಲು ಸೂಚಿಸಲಾಗಿದೆ.
- ಕೆರೆಯ ಏರಿಯನ್ನು ಕಡಿಮೆ ಕಲ್ಲುಬಳಸಿ ಮಣ್ಣಿನಿಂದ ಸದೃಢಗೊಳಿಸಲಾಗುತ್ತದೆ.
ಅಭಿಯಾನದ ಉದ್ದೇಶ
- ಕೆರೆಗಳಿಗೆ ಕೋಟ್ಯಂತರ ವೆಚ್ಚ ಮಾಡುವುದರ ಹೊರತಾಗಿ, ಕೆರೆಗಳನ್ನು ನೈಸರ್ಗಿಕವಾಗಿಯೇ ಉಳಿಸಿ, ಕಾಂಕ್ರೀಟ್ ಬಳಸದೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದು.
- ಅನುಷ್ಠಾನ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಎಂನರೇಗಾ) ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಜೈವಿಕ ಬೇಲಿ
- ಕೆರೆಯ ಸುತ್ತ ಜೈವಿಕ ಬೇಲಿಯನ್ನು ನಿರ್ಮಿಸಲಾಗುತ್ತದೆ. ಎತ್ತರ ಹಾಗೂ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸಿಗಳನ್ನು ಎರಡು ಸಾಲಿನಲ್ಲಿ ನೆಡಲಾಗುತ್ತದೆ.
- ಹಿಂದಿನ ಕಾಲದಲ್ಲಿ ಬೇಲಿಯಾಗಿ ಬೆಳೆಸುತ್ತಿದ್ದ ಕತ್ತಾಳೆಯಂತಹ ಮುಳ್ಳಿನ ಗಿಡಗಳನ್ನು, ಎರಡು ಸಾಲಿನ ಮರಗಳ ನಡುವೆ ಬೆಳೆ ಸಲಾಗುತ್ತದೆ.
- ಇಳಿಜಾರಿನಲ್ಲಿ ಮಣ್ಣಿನ ಸವೆತ ತಡೆಯಲು ವಡೆಲಿಯಾದಂತಹ ಸಸಿಗಳನ್ನು ನೆಡಲಾಗುತ್ತದೆ.
- ಕೆರೆಯ ದಂಡೆಯಲ್ಲಿ ‘ಇಂಟರ್ಲಾಕಿಂಗ್ ಪೇವರ್ಸ್’ ಅಳವಡಿಸುವಂತಿಲ್ಲ.
ಅನುಷ್ಠಾನ ವಿಧಾನ
- ಕೆರೆಯ ಒಳಾಂಗಣದ ಇಳಿಜಾರಿನಲ್ಲಿ ವಡೆಲಿಯಾದಂತಹ ಸ್ಥಳೀಯವಾಗಿ ಲಭ್ಯವಿರುವ ಸಸಿಗಳ ನಾಟಿ
- ಒಳಹರಿವು, ಹೊರಹರಿವು ಪ್ರದೇಶದ ಅಭಿವೃದ್ಧಿ
- ಹೂಳು ತಡೆಯಲು ಹೊಂಡಗಳ ನಿರ್ಮಾಣ
- ವೈಜ್ಞಾನಿಕವಾಗಿ ಹೂಳು ತೆರವು, ಕೆರೆಯ ಸುತ್ತಜೈವಿಕ ಬೇಲಿ ಕೋಟಿ ವೃಕ್ಷ ಅಭಿಯಾನದಡಿ ಆಲ, ಅರಳಿ, ಬೇವು ಮುಂತಾದ ಗಿಡಗಳ ನಾಟಿ
- ಜಾನುವಾರುಗಳಿಗೆ ನೀರು ಕುಡಿಯಲು ಇಳಿಜಾರು ಪ್ರದೇಶ
ಅನುಕೂಲಗಳು
- ಕಡಿಮೆ ವೆಚ್ಚದಲ್ಲಿ ಕೆರೆಗಳ ಪುನಶ್ಚೇತನ
- ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ವೃದ್ಧಿ
- ಅತಿಕ್ರಮಣ ತಡೆಗಟ್ಟುವುದು
- ನೈಸರ್ಗಿಕವಾಗಿ ಸೌಂದರ್ಯ ಹೆಚ್ಚಳ
- ಜೀವವೈವಿಧ್ಯದ ಸಂರಕ್ಷಣೆಯೊಂದಿಗೆ ಅಂತರ್ಜಲ ಮಟ್ಟ ವೃದ್ಧಿಸಲು ಒತ್ತುನೀಡಲು ಯೋಜಿಸಲಾಗಿದೆ.