Published on: August 1, 2023
ಪಿಎಸ್ಎಲ್ವಿಸಿ- 56
ಪಿಎಸ್ಎಲ್ವಿಸಿ- 56
ಸುದ್ದಿಯಲ್ಲಿ ಏಕಿದೆ? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಾಣಿಜ್ಯ ಮಿಷನ್ನ ಪಿಎಸ್ಎಲ್ವಿ-ಸಿ 56/ಡಿಎಸ್- ಎಸ್ಎಆರ್ ರಾಕೆಟ್ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ. ಎಲ್ಲ ಏಳು ಉಪಗ್ರಹಗಳನ್ನು ನಿಖರವಾಗಿ ಅವುಗಳ ಉದ್ದೇಶಿತ ಕಕ್ಷೆಗೆ ಸೇರಿಸಿದೆ.
ಮುಖ್ಯಾಂಶಗಳು
- 360 ಕೆ.ಜಿ ತೂಕದ ಡಿಎಸ್-ಎಸ್‌ಎಆರ್ ಮತ್ತು ಉಳಿದ 6 ಉಪಗ್ರಹಗಳು ಸಿಂಗಾಪುರಕ್ಕೆ ಸೇರಿದ್ದವಾಗಿವೆ.
- ಸಿಂಗಾಪುರದ ಎಸ್‌ಟಿ ಇಂಜಿನಿಯರಿಂಗ್ ಸಂಸ್ಥೆಗಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಕಾರ್ಯಾಚರಣೆ ನಡೆಸಿದೆ.
- ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್ ಪ್ಯಾಡ್ನಿಂದ ಉಡ್ಡಯನ ನಡೆದಿದೆ.
ಡಿಎಸ್-ಎಸ್ಎಆರ್ ಉಪಗ್ರಹ
- ಡಿಎಸ್-ಎಸ್ಎಆರ್ ಉಪಗ್ರಹವನ್ನು ಸಿಂಗಪುರ ಸರ್ಕಾರದ ಅಡಿಯಲ್ಲಿ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್ಟಿಎ) ಮತ್ತು ಎಸ್ಟಿ ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ.
- ಡಿಎಸ್-ಎಸ್‌ಎಆರ್ ಎಲ್ಲಾ ಹವಾಗುಣದಲ್ಲಿ ಹಗಲು-ರಾತ್ರಿ ಸೇವೆ ಒದಗಿಸುತ್ತದೆ. ಪೂರ್ಣ ಧ್ರುವೀಯತೆಯಲ್ಲಿ 1m-ರೆಸಲ್ಯೂಶನ್‌ನಲ್ಲಿ ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.
- ಈ ರಾಕೆಟ್ಗೆ ಇಸ್ರೇಲ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್ಎಆರ್) ಅಳವಡಿಸಲಾಗಿದೆ.
- ಸಿಂಗಪುರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಏಜೆನ್ಸಿಗಳ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಎಸ್ಟಿ ಇಂಜಿನಿಯರಿಂಗ್ ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹುಮಾದರಿ ಮತ್ತು ಹೈರೆಸಲ್ಯೂಶನ್ ಚಿತ್ರಣ ಹಾಗೂ ಜಿಯೋ ಸ್ಪೇಷಿಯಲ್ ಸೇವೆಗಳಿಗಾಗಿ ಈ ಉಪಗ್ರಹವನ್ನು ಬಳಸುತ್ತದೆ.
ಉಳಿದ ಉಪಗ್ರಹಗಳ ವಿವರ
- 10 ಕೆಜಿಗಿಂತ ಕಡಿಮೆ ತೂಕವಿರುವ ಮೂರು ನ್ಯಾನೊಸ್ಯಾಟಲೈಟ್ಗಳು ಒಳಗೊಂಡಂತೆ ಇನ್ನೂ ಆರು ಉಪಗ್ರಹಗಳನ್ನು ಇದರ ಜೊತೆಗೆ ಕಕ್ಷೆ ತಲುಪಿಸಲಾಗಿದೆ.
- ವೆಲೊಕ್ಸ್–ಎಎಂ ಉಪಗ್ರಹವು ಸಂಯೋಜಕ ಉತ್ಪಾದನಾ ಸಾಮರ್ಥ್ಯ ಗಳನ್ನು ಪ್ರದರ್ಶಿಸುತ್ತದೆ, ಆರ್ಕೆಡ್ ಒಂದು ಪ್ರಾಯೋಗಿಕ ಉಪಗ್ರಹ, ಸ್ಕೂಬ್-II ತಂತ್ರಜ್ಞಾನ ಡಿಮಾನ್ಸ್ಟ್ರೇಟರ್ ಪೇಲೋಡ್, ನೂಲಯನ್, ತಡೆರಹಿತ IoT ಸಂಪರ್ಕವನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ, ಗ್ಯಾಲಾಸಿಯಾ-2 ಇದು ಬಾಹ್ಯಾಕಾಶ ಅಪ್ಲಿಕೇಶನ್ಗಳಿಗಾಗಿ ಮಲ್ಟಿಸ್ಪೆಕ್ಟ್ರ ಲ್ ಚಿತ್ರಣದಲ್ಲಿ ವಾಣಿಜ್ಯ ಉದ್ದೇ ಶಕ್ಕಾಗಿ ಬಳಸಲಾಗುತ್ತದೆ.