Published on: September 2, 2023

ಭಾರತದ ಹೊಸ ಯುದ್ಧನೌಕೆ ‘ಮಹೇಂದ್ರಗಿರಿ’

ಭಾರತದ ಹೊಸ ಯುದ್ಧನೌಕೆ ‘ಮಹೇಂದ್ರಗಿರಿ’

ಸುದ್ದಿಯಲ್ಲಿ ಏಕಿದೆ? ಉಪ ರಾಷ್ಟ್ರಪತಿ ಜಗದೀಪ್  ಧನಕರ್ ಅವರ ಪತ್ನಿ ಸುದೇಶ್  ಧನಕರ್ ಅವರು ಮುಂಬಯಿನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ಭಾರತೀಯ ನೌಕಾಪಡೆಯ ಹೊಸ ಯುದ್ಧನೌಕೆ ‘ಮಹೇಂದ್ರಗಿರಿ’ಯನ್ನು ಲೋಕಾರ್ಪಣೆಗೊಳಿಸಿದರು.

ಮುಖ್ಯಾಂಶಗಳು

  • ಭಾರತೀಯ ನೌಕಾಪಡೆಗೆ ಪ್ರಾಜೆಕ್ಟ್ 17 ಆಲ್ಫಾ ಸರಣಿಯ 7ನೇ ಯುದ್ಧನೌಕೆ “ಐಎನ್ಎಸ್ ಯುದ್ಧನೌಕೆಯಾಗಿದೆ.
  • 17 ಆಲ್ಫಾ ಸರಣಿಯಯುದ್ಧಗಳಲ್ಲಿ ನಾಲ್ಕು ಯುದ್ಧನೌಕೆಗಳನ್ನು ಮಜಗಾನ್ ಡಾಕ್‌ನಲ್ಲಿ ಮತ್ತು ಉಳಿದವುಗಳನ್ನು ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ (GRSE) ಕೋಲ್ಕತ್ತಾದಲ್ಲಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಯುದ್ಧನೌಕೆಗಳು 6,670 ಟನ್‌ಗಳಷ್ಟು ಡಿಸ್‌ಪ್ಲೇಸ್‌ಮೆಂಟ್ ಹೊಂದಿವೆ.
  • ಪ್ರಾಜೆಕ್ಟ್ 17A ಹಡಗುಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ಆಂತರಿಕವಾಗಿ ವಿನ್ಯಾಸಗೊಳಿಸಿದೆ.

ಯುದ್ಧನೌಕೆಯ ವಿವರ

  • ಉದ್ದ : 149 ಮೀಟರ್
  • ಅಗಲ : 17.8 ಮೀಟರ್
  • ವೇಗ: 28 ನಾಟ್‌ಗಳ ಗರಿಷ್ಠ ವೇಗವನ್ನು ಹೊಂದಿರುತ್ತದೆ
  • ಮಹೇಂದ್ರಗಿರಿಯು ತಾಂತ್ರಿಕವಾಗಿ ಮುಂದುವರಿದ ಯುದ್ಧನೌಕೆಯಾಗಿದೆ ಮತ್ತು ತನ್ನ ಶ್ರೀಮಂತ ನೌಕಾ ಪರಂಪರೆಯನ್ನು ಅಳವಡಿಸಿಕೊಳ್ಳುವ ಭಾರತದ ಸಂಕಲ್ಪದ ಸಂಕೇತವಾಗಿದೆ.
  • ಈ ಯುದ್ಧನೌಕೆಗೆ ಒಡಿಶಾದ ಪೂರ್ವ ಘಟ್ಟಗಳಲ್ಲಿರುವ ಮಹೇಂದ್ರಗಿರಿ ಪರ್ವತದ ಹೆಸರನ್ನು ಇಡಲಾಗಿದೆ

ಮಹೇಂದ್ರಗಿರಿ ಪರ್ವತ

ಭಾರತದ ಒಡಿಶಾದ ಗಜಪತಿ ಜಿಲ್ಲೆಯ ರಾಯಗಡ ತಾಲ್ಲೂಕಿನಲ್ಲಿರುವ ಒಂದು ಪರ್ವತ. ಇದು ಪೂರ್ವ ಘಟ್ಟಗಳ ನಡುವೆ 1,501 ಮೀಟರ್ ಎತ್ತರದಲ್ಲಿದೆ. ಇದು ಒಡಿಶಾದ ಎರಡನೇ ಜೀವವೈವಿಧ್ಯ ಪರಂಪರೆಯ ತಾಣವಾಗಿದೆ. ಇದನ್ನು ಭಾರತದ ಏಳು ಕುಲ ಪರ್ವತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.