Published on: August 2, 2021
ಲುನಾರ್ ರೋವಿಂಗ್ ವೆಹಿಕಲ್(LRV)
ಲುನಾರ್ ರೋವಿಂಗ್ ವೆಹಿಕಲ್(LRV)
ಸುದ್ಧಿಯಲ್ಲಿ ಏಕಿದೆ ? ಚಂದ್ರನ ಮೇಲೆ ರೋವರ್ ಓಡಿಸಿರುವುದಕ್ಕೆ 50 ವರುಷ ತುಂಬಿದೆ. 1971ರ ಅಪೋಲೊ 15 ಮೂನ್ ಮಿಷನ್ನಲ್ಲಿ ಮೊದಲ ಬಾರಿಗೆ ಚಂದ್ರನ ನೆಲಕ್ಕೆ ಲುನಾರ್ ರೋವಿಂಗ್ ವೆಹಿಕಲ್ (LRV)) ಎಂಬ ಯಂತ್ರ ಚಾಲಿತ ಕಾರನ್ನು ಕೊಂಡೊಯ್ಯಲಾಯಿತು.
- ಅಪಲೊ 15 ಗಗನಯಾತ್ರಿಗಳಾದ ಡೆವಿಡ್ ಸ್ಕಾಟ್ ಹಾಗೂ ಜೇಮ್ಸ್ ಇರ್ವಿನ್ ಈ ಕಾರನ್ನು ಚಂದ್ರನ ನೆಲೆ ಮೇಲೆ ಓಡಿಸಿ ಇತಿಹಾಸ ಬರೆದಿದ್ದರು.
ಏನಿದು ಲುನಾರ್ ರೋವಿಂಗ್ ವೆಹಿಕಲ್?
- ಚಂದ್ರನ ಮೇಲೆ ಗುರುತ್ವಾಕರ್ಷಣೆ ಬಲ ಕಡಿಮೆ ಇರುವುದರಿಂದ ಮಾನವನ ಓಡಾಟ ತುಸು ಕಷ್ಟ. ಹೀಗಾಗಿ ಈ ಹಿಂದಿನ ಮೂನ್ ಮಿಷನ್ನಲ್ಲಿ ಗಗನಯಾತ್ರಿಗಳು ನಡೆದುಕೊಂಡು ಚಂದ್ರನ ನೆಲದ ಮದರಿಗಳನ್ನು ಸಂಗ್ರಹಿಸಬೇಕಿತ್ತು. ಇದು ಕಷ್ಟಕರ ಕೆಲಸವಾದ್ದರಿಂದ ಚಂದ್ರನ ನೆಲದ ಮೇಲೆ ಯಂತ್ರ ಚಾಲಿತ ಕಾರನ್ನು ಓಡಿಸಲು ನಾಸಾ ಯೋಜನೆ ಸಿದ್ಧಪಡಿಸಿತು.
- ಅದರಂತೆ ನಾಸಾದ ರಾನ್ ಕ್ರೀಲ್ ಥರ್ಮಲ್ ಕಂಟ್ರೋಲ್ ಎಂಜಿನಿಯರ್ ಲುನಾರ್ ರೋವಿಂಗ್ ವೆಹಿಕಲ್(LRV) ನಿರ್ಮಾಣಕ್ಕೆ ಮುಂದಡಿ ಇಟ್ಟರು. ಕ್ರೀಲ್ ಅವರ ಯೋಜನೆಯಂತೆ ಸಾಂಪ್ರದಾಯಿಕ ಸ್ಟೀರಿಂಗ್ ವೀಲ್ ಮತ್ತು ಪೆಡಲ್ಗಳ ಬಳಕೆಯ ಓಪನ್ ಏರ್ ವಿನ್ಯಾಸದ ಕಾರನ್ನು ಸಿದ್ದಪಡಿಸಲಾಯಿತು.
- ಈ ಕಾರಿನ ಸಹಾಯದಿಂದ ಅಪೋಲೊ 15 ಗಗನಯಾತ್ರಿಗಳಾದ ಡೇವಿಡ್ ಸ್ಕಾಟ್ ಮತ್ತು ಜೇಮ್ಸ್ ಇರ್ವಿನ್, ಚಂದ್ರನ ಮೇಲೆ 5 ಮೈಲುಗಳನ್ನು ಕ್ರಮಿಸಿ 170 ಪೌಂಡ್ಗಳ ಮಾದರಿಗಳನ್ನು ಸಂಗ್ರಹಿಸಿದ್ದರು.
LRV ಎದುರಿಸಿದ ಸವಾಲುಗಳೇನು?
- ಚಂದ್ರನ ಮೇಲೆ ಮಾನವ ನಿರ್ಮಿತ ವಾಹನವನ್ನು ಓಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಚಂದ್ರನ ಧೂಳು ಸೌರ ವಿಕಿರಣವನ್ನು ಹೀರಿಕೊಳ್ಳುತ್ತದೆ. ಚಂದ್ರನ ಮೇಲೆ ಗಾಳಿ ಅಥವಾ ನೀರಿನ ಲಭ್ಯತೆ ಇಲ್ಲ. ಹೀಗಾಗಿ ಧೂಳು ತೀಕ್ಷ್ಣವಾದ ಗಾಜಿನಂತಹ ಗುಣವನ್ನು ಹೊಂದಿರುತ್ತದೆ.
- ಇದು ಗಗನಯಾತ್ರಿಗಳ ಸ್ಪೇಸ್ ಸೂಟ್ಗಳಿಗೂ ಹಾನಿ ಮಾಡಬಲ್ಲದು. ಅಲ್ಲದೇ ಎಲ್ಆರ್ವಿ ವಾಹನದ ಚಕ್ರಗಳಿಗೂ ಹಾನಿ ಮಾಡಬಹುದಾಗಿತ್ತು. ವಾಹನ ಚಾಲನೆ ಸಮಯದಲ್ಲಿ ಧೂಳು ಕವಚದ ರೇಡಿಯೇಟರ್ಗಳನ್ನು ಆವರಿಸುತ್ತಿದುರಿಂದ ಧೂಳನ್ನು ಒರೆಸಲು ವಿಶೇಷ ಬ್ರಷ್ಗಳನ್ನು ಬಳಸಲಾಗುತ್ತಿತ್ತು.
- ಇಷ್ಟೇ ಅಲ್ಲದೇ ಎಲ್ಆರ್ವಿಯಲ್ಲಿ ಬಳಸಲಾಗಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಘನೀಕರಿಸುವ ಮತ್ತು ಅಧಿಕ ಬಿಸಿಯಾಗದಂತೆ ನೋಡಿಕೊಳ್ಳುವ ಸವಾಲು ಕೂಡ ಎದುರಿಸಬೇಕಾಯಿತು. ಆದರೆ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ನಾಸಾ, ಕೊನೆಗೂ ಚಂದ್ರನ ಮೇಲೆ ತನ್ನ ಕಾರನ್ನು ಓಡಿಸುವಲ್ಲಿ ಯಶಸ್ವಿಯಾಯಿತು.
ಭವಿಷ್ಯದ ಯೋಜನೆಗಳಲ್ಲೂ ಎಲ್ಆರ್ವಿ ಬಳಕೆ!
- ಹಿಂದಿನ ಮೂನ್ ಮಿಷನ್ಗಳಲ್ಲಿ ಎಲ್ಆರ್ವಿ ನೀಡಿದ ಕೊಡುಗೆಯನ್ನು ಪರಿಗಣಿಸಿರುವ ನಾಸಾ, 2023ರಲ್ಲಿ ಕೈಗೊಳ್ಳಲಿರುವ ಮೂನ್ ಮಿಷನ್ನಲ್ಲೂ ಯಂತ್ರ ಚಾಲಿತ ವಾಹನವನ್ನು ಬಳಕೆ ಮಾಡಲಿದೆ. VIPER ಹೆಸರಿನ ಈ ವಾಹನವನ್ನು ARTEMIS2 ಯೋಜನೆಯಲ್ಲಿ ಬಳಕೆ ಮಾಡಲಾಗುವುದು ಎಂದು ನಾಸಾ ಹೇಳಿದೆ