Published on: September 5, 2023
ಚುಟುಕು ಸಮಾಚಾರ : 4 ಸೆಪ್ಟೆಂಬರ್ 2023
ಚುಟುಕು ಸಮಾಚಾರ : 4 ಸೆಪ್ಟೆಂಬರ್ 2023
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಅಂಚೆ ಇಲಾಖೆ ಮುಂದಾಗಿದೆ.ಇದರ ಮೊದಲ ಭಾಗವಾಗಿ ಶಿರಸಿ ಅಂಚೆ ವಿಭಾಗವು ಮೂರು ದಿನಗಳ ಕಾಲ “ಡಾಕ್ ಜನ ಸಂಪರ್ಕ ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಅಭಿಯಾನದಲ್ಲಿ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳು ಮತ್ತು ಅಂಚೆ ಜೀವ ವಿಮಾ ಸೌಲಭ್ಯಗಳು/ ಅಪಘಾತ ವಿಮಾ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಸಲಾಯಿತು.
- ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಬುಡಕಟ್ಟು ಜನಾಂಗದ ಮಕ್ಕಳಿಗೆ ಅನುಕೂಲವಾಗಲು ದೇಶಾದ್ಯಂತ 740 ವಸತಿ ಶಾಲೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ತರಬೇತಿ ನೀಡಲು ಬೆಂಗಳೂರು ಮೂಲದ ಎಐ ನೇತೃತ್ವದ ಎಡ್ಟೆಕ್ ವೇದಿಕೆ EMBIBE ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
- ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಸಿಂಗಾಪುರದ 9ನೇ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
- ಚಂದ್ರಯಾನ-3 ಮಿಷನ್ ನ ಪ್ರಗ್ಯಾನ್ ರೋವರ್ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಪ್ರಗ್ಯಾನ್ ರೋವರ್ ಅನ್ನು ಸ್ಲೀಪ್ ಮೋಡ್ನಲ್ಲಿ ಇರಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಅದರ ಪೇಲೋಡ್ಗಳಾದ APXS ಮತ್ತು LIBS ಎರಡನ್ನೂ ಸ್ಥಗಿತಗೊಳಿಸಲಾಗಿದೆ. ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಸೂರ್ಯಾಸ್ತದ ನಂತರ ಸ್ಲೀಪ್ ಮೋಡ್ಗೆ ಕಳುಹಿಸಲಾಗಿದೆ. ಚಂದ್ರಯಾನ-3 14 ದಿನಗಳು ಮಿಷನ್ ಆಗಿತ್ತು. ಏಕೆಂದರೆ ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ. ರೋವರ್ ಲ್ಯಾಂಡರ್ ಅನ್ನು ಸೂರ್ಯನಿಂದ ಪಡೆಯುವ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಚಂದ್ರನ ಮೇಲೆ ರಾತ್ರಿಯಾದಾಗ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವು ಸ್ಲೀಪ್ ಮೋಡ್ನಲ್ಲಿರುತ್ತದೆ. ಆದರೆ, ಅಲ್ಲಿನ ತೀವ್ರ ಚಳಿಯಿಂದಾಗಿ ಸೆಪ್ಟೆಂಬರ್ 22ರವರೆಗೆ ಉಪಕರಣ ಸುರಕ್ಷಿತವಾಗಿದ್ದರೆ ಮತ್ತೆ ಸೌರಶಕ್ತಿಯಿಂದ ಕೆಲಸ ಆರಂಭಿಸಬಹುದು.
- ಒಮಾನ್ನ ಸಲಾಲದಲ್ಲಿ ನಡೆದ ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಫೈನಲ್ನಲ್ಲಿ ಪಾಕ್ ತಂಡವನ್ನು ಭಾರತ 2-0 ಅಂತರದಿಂದ ಸೋಲಿಸಿತು. ಇದರೊಂದಿಗೆ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.