Published on: August 2, 2021
ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ ಭದ್ರತಾ ಮಂಡಳಿ
ಸುದ್ಧಿಯಲ್ಲಿ ಏಕಿದೆ ? ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತವು ಭದ್ರತಾ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸುತ್ತಿರುವ ಭಾರತದ ಮೊದಲ ಪ್ರಧಾನಿ ಎನಿಸಲಿದ್ದಾರೆ ನರೇಂದ್ರ ಮೋದಿ.
- ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ರಾಜಕೀಯ ನಾಯಕರೊಬ್ಬರು ವಿಶ್ವಸಂಸ್ಥೆಯ ಅಂಗ ಸಂಸ್ಥೆಯೊಂದರ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದ್ದಾರೆ.
- ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಹಿಂದೆ 1992ರಲ್ಲಿ ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಕೂಡ ಭದ್ರತಾ ಮಂಡಳಿಯ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ, ಅಧ್ಯಕ್ಷತೆ ವಹಿಸಿರಲಿಲ್ಲ.
- ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷನಾಗುವ ಅವಕಾಶ ಇದುವರೆಗೆ 10 ಬಾರಿ ಸಿಕ್ಕಿದೆ. ಜೂನ್ 1950, ಸೆಪ್ಟೆಂಬರ್ 1967, ಡಿಸೆಂಬರ್ 1972, ಅಕ್ಟೋಬರ್ 1977, ಫೆಬ್ರವರಿ 1985, ಅಕ್ಟೋಬರ್ 1991, ಡಿಸೆಂಬರ್ 1992, ಆಗಸ್ಟ್ 2011, ನವೆಂಬರ್ 2012 ರಲ್ಲಿ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿತ್ತು.
- ಇದೀಗ 10ನೇ ಬಾರಿಗೆ ಅಧ್ಯಕ್ಷ ಸ್ಥಾನದಲ್ಲಿದೆ. ಆಗಸ್ಟ್ 1 ರಂದು ಭಾನುವಾರ ಭದ್ರತಾ ಮಂಡಳಿಯ ಅಧ್ಯಕ್ಷ ರಾಷ್ಟ್ರವಾಗಿ ಅಧಿಕಾರ ಸ್ವೀಕರಿಸಲಿದೆ. ಅಧ್ಯಕ್ಷ ಸ್ಥಾನದ ಅವಧಿ ಒಂದು ತಿಂಗಳು ಮಾತ್ರ.