Published on: September 21, 2023
ಜಗತ್ತಿನ ಅತಿದೊಡ್ಡ ಸಭಾಂಗಣ ‘ಯಶೋಭೂಮಿ’
ಜಗತ್ತಿನ ಅತಿದೊಡ್ಡ ಸಭಾಂಗಣ ‘ಯಶೋಭೂಮಿ’
ಸುದ್ದಿಯಲ್ಲಿ ಏಕಿದೆ? ದಿಲ್ಲಿಯ ದ್ವಾರಕಾದಲ್ಲಿ ನಿರ್ಮಾಣ ಮಾಡಲಾಗಿರುವ ‘ಯಶೋಭೂಮಿ (ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಮತ್ತು ಎಕ್ಸ್‌ಪೋ ಸೆಂಟರ್)’ ಯನ್ನು ಲೋಕಾರ್ಪಣೆಗೊಳಿಸಲಾಗಿದೆ.
ಮುಖ್ಯಾಂಶಗಳು
- ದಿಲ್ಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಮಾದರಿಯ ಆಧುನಿಕ ಸಮಾವೇಶ ಮತ್ತು ವಸ್ತು ಪ್ರದರ್ಶನ ಕೇಂದ್ರವಾಗಿದೆ.
- ಪರಿಕಲ್ಪನೆ: ‘ಸುಸ್ಥಿರತೆಗೆ ಯಶೋಭೂಮಿ’ ಎಂಬ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಕೇಂದ್ರದಲ್ಲಿ ತ್ಯಾಜ್ಯ ನೀರಿನ ಆಧುನಿಕ ಸಂಸ್ಕರಣಾ ವ್ಯವಸ್ಥೆ, ಮಳೆ ನೀರು ಕೊಯ್ಲು ವ್ಯವಸ್ಥೆ ಹೊದಿದ್ದು, ‘ಇಂಡಿಯನ್ ಗ್ರೀನ್ ಬಿಲ್ಡಿಂಗ್’ನಿಂದ (ಐಎಆಇ) ಪ್ರಮಾಣ ಪತ್ರ ಪಡೆದುಕೊಂಡಿದೆ.
- ವಿಸ್ತಾರ: 8.9 ಲಕ್ಷ ಚದರ ಮೀಟರ್
- ಸಾಮರ್ಥ್ಯ: ವಸ್ತು ಪ್ರದರ್ಶನ ಕೇಂದ್ರದಲ್ಲಿ ಏಕ ಕಾಲಕ್ಕೆ 11 ಸಾವಿರ ಪ್ರತಿನಿಧಿಗಳು ಸೇರುವ ಸಾಮರ್ಥ್ಯವಿದೆ.
- 13 ಸಭಾ ಕೊಠಡಿಗಳು, 15 ಸಮಾವೇಶ ಕೇಂದ್ರಗಳಿವೆ. 1.07 ಲಕ್ಷ ಚ.ಮೀಟರ್ ವ್ಯಾಪ್ತಿಯ ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ ಹೊಂದಿದೆ.
ಉದ್ದೇಶ : ದೇಶದಲ್ಲಿ ಮಹತ್ವದ ಸಭೆ, ಸಮ್ಮೇ ಳನ ಮತ್ತು ಪ್ರದರ್ಶನಗಳನ್ನು ಆಯೋಜಿಸಲು ವಿಶ್ವದರ್ಜೆಯ ಮೂಲಸೌಕರ್ಯವನ್ನು ಸೃಷ್ಟಿಸುವುದು