Published on: September 27, 2023
ಏಷ್ಯನ್ ಕ್ರೀಡಾಕೂಟ 2023
ಏಷ್ಯನ್ ಕ್ರೀಡಾಕೂಟ 2023
ಸುದ್ದಿಯಲ್ಲಿ ಏಕಿದೆ? 19 ನೇ ಏಷ್ಯನ್ ಗೇಮ್ಸ್ 2023 ಸೆಪ್ಟೆಂಬರ್ 23 ರಿಂದ 8 ಅಕ್ಟೋಬರ್ 2023 ರವರೆಗೆ ನಡೆಯಲಿದೆ. ಏಷ್ಯನ್ ಗೇಮ್ಸ್ 2023 40 ಕ್ರೀಡೆಗಳ ವೈವಿಧ್ಯಮಯ ಶ್ರೇಣಿಯನ್ನು ಹೊಂದಿರುತ್ತದೆ, ಇದು 61 ವಿಭಾಗಗಳ ಭವ್ಯವಾದ ಪ್ರದರ್ಶನವಾಗಿದೆ. ಏಷ್ಯನ್ ಕ್ರೀಡಾಕೂಟ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ.
ಮುಖ್ಯಾಂಶಗಳು
- ಆಧುನಿಕ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳೊಂದಿಗೆ ಏಷ್ಯನ್ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ.
- ಆವೃತ್ತಿ: 19
- ಆತಿಥೇಯ ದೇಶ : ಚೀನಾ
- ಘೋಷವಾಕ್ಯ :‘ಹೃದಯದಿಂದ ಹೃದಯದ ಭವಿಷ್ಯ’
- ಭಾರತವು ಎರಡು ಸಲ (1951 ಮತ್ತು 1982) ಆತಿಥ್ಯ ವಹಿಸಿದ್ದು, ಎರಡೂ ಕೂಟಗಳು ನವದೆಹಲಿಯಲ್ಲಿ ಆಯೋಜನೆಯಾಗಿವೆ.
- 20 ನೇ ಆವೃತ್ತಿಯು 2026ರಲ್ಲಿ ಜಪಾನ ದೇಶದಲ್ಲಿ ನಡೆಯಲಿದೆ
- 18 ನೇ ಆವೃತ್ತಿಯು 2018ರಲ್ಲಿ ಇಂಡೋನೇಷಿಯಾದಲ್ಲಿ ನಡೆದಿತ್ತು
ಹಿನ್ನೆಲೆ
- 1951 ರಲ್ಲಿ ನಡೆದಿದ್ದ ಮೊದಲ ಕೂಟಕ್ಕೆ ನವದೆಹಲಿ ಆತಿಥ್ಯ ವಹಿಸಿತ್ತು. ಅದಕ್ಕೂ ಮುನ್ನ ‘ಫಾರ್ ಈಸ್ಟರ್ನ್ ಚಾಂಪಿಯನ್ಷಿಪ್ ಗೇಮ್ಸ್’ ಎಂಬ ಹೆಸರಿನಲ್ಲಿ ಕ್ರೀಡಾಕೂಟ ಆಯೋಜನೆಯಾಗುತ್ತಿತ್ತು.
- 1913 ರಲ್ಲಿ ಆರಂಭವಾದ ಈ ಕ್ರೀಡಾಕೂಟ 1934ರಲ್ಲಿ ಮೊಟಕುಗೊಂಡಿತು. ಎರಡನೇ ವಿಶ್ವಯುದ್ಧದ ಬಳಿಕ ಏಷ್ಯಾದ ಹಲವು ದೇಶಗಳು ಸ್ವತಂತ್ರಗೊಂಡವು.
- ಫಾರ್ ಈಸ್ಟರ್ನ್ ಗೇಮ್ಸ್ ಮತ್ತೆ ಆರಂಭಿಸಲು ಚೀನಾ, ಫಿಲಿಪ್ಪೀನ್ಸ್ ಉತ್ಸುಕತೆ ತೋರಿದವು. 1948ರ ಲಂಡನ್ ಒಲಿಂಪಿಕ್ಸ್ನಲ್ಲಿ ಈ ಬಗ್ಗೆ ಚರ್ಚೆಗಳು ನಡೆದವು. ಆದರೆ ಫಾರ್ ಈಸ್ಟರ್ನ್ ಗೇಮ್ಸ್ ಬದಲು, ಒಲಿಂಪಿಕ್ಸ್ನಂತೆಯೇ ಏಷ್ಯಾದ ದೇಶಗಳಿಗಾಗಿ ಕ್ರೀಡಾಕೂಟ ಆಯೋಜಿಸುವ ಚಿಂತನೆ ಈ ವೇಳೆ ಮೂಡಿತು. 1949 ರಲ್ಲಿಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಸ್ವಿತ್ವಕ್ಕೆ ಬಂತು. 1951 ರಲ್ಲಿ ನವದೆಹಲಿಯಲ್ಲಿ ಮೊದಲ ಏಷ್ಯನ್ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಯಿತು. ಮೊದಲ ಏಷ್ಯನ್ ಗೇಮ್ಸ್ನಲ್ಲಿ 11 ದೇಶಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 2006ರ ಕೂಟದಿಂದ ಇಲ್ಲಿಯವರೆಗೆ 45 ದೇಶಗಳು ಈ ಕೂಟದಲ್ಲಿ ಭಾಗವಹಿಸುತ್ತಿವೆ.