Published on: October 10, 2023
ಭಾರತೀಯ ವಾಯುಪಡೆಯು (ಐಎಎಫ್) ಹೊಸ ಪತಾಕೆ
ಭಾರತೀಯ ವಾಯುಪಡೆಯು (ಐಎಎಫ್) ಹೊಸ ಪತಾಕೆ
ಸುದ್ದಿಯಲ್ಲಿ ಎಲ್ಲಿದೆ? ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಭಾರತೀಯ ವಾಯುಪಡೆಯ 91ನೇ ದಿನಾಚರಣೆಯಲ್ಲಿ ಐಎಎಫ್ ಮುಖ್ಯಸ್ಥರು ವಾಯುಪಡೆಯ ಹೊಸ ಪತಾಕೆ ಬಿಡುಗಡೆಗೊಳಿಸಿದರು.
ಮುಖ್ಯಾಂಶಗಳು
- 72 ವರ್ಷಗಳ ಬಳಿಕ ಇಂಥದ್ದೊಂದು ಬದಲಾವಣೆಯನ್ನು ತಂದಿರುವ ಐಎಎಫ್, ತನ್ನ ಮೌಲ್ಯಗಳನ್ನು ಪ್ರತಿಫಲಿಸುವಂತೆ ಪತಾಕೆಯನ್ನು ವಿನ್ಯಾಸಗೊಳಿಸಲಾಗಿದೆ. ಅದರ ದ್ಯೋತಕವಾಗಿ ಪತಾಕೆ ಹಾರಾಡುವ ಜಾಗದಲ್ಲಿ (ಬಲಭಾಗದ ಮೂಲೆಯಲ್ಲಿ) ಐಎಎಫ್ನ ಲಾಂಛನವನ್ನು ಚಿತ್ರಿಸಲಾಗಿದೆ’. ಈ ಧ್ವಜದಲ್ಲಿ ಮೇಲಿನ ಎಡಭಾಗದಲ್ಲಿ ತ್ರಿವರ್ಣ ಧ್ವಜ ಹಾಗೂ ಬಲಭಾಗದಲ್ಲಿ ಐಎಎಫ್‌ನ ಲಾಂಛನ ಇದೆ.
- ಇಷ್ಟು ದಿನಗಳು ಬಳಕೆಯಲ್ಲಿದ್ದ ಐಎಎಫ್ ಧ್ವಜವನ್ನು 1950ರಲ್ಲಿ ಅಂಗೀಕರಿಸಲಾಗಿತ್ತು.
ವಿನ್ಯಾಸ ಹೊಸ ಪತಾಕೆಯು ನೀಲಿ ಬಣ್ಣದ್ದಾಗಿದ್ದು, ಅದು ತ್ರಿವರ್ಣ ಧ್ವಜ, ಐಎಎಫ್ ಲಾಂಛನ, ತ್ರಿವರ್ಣದ ವೃತ್ತಾಕಾರ ವಿನ್ಯಾಸವನ್ನು ಒಳಗೊಂಡಿದೆ.
ವಿಶೇಷತೆ : ಅಶೋಕ ಸ್ಥಂಭದ ಸಿಂಹಗಳು ಮತ್ತು ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಧ್ವಜದಲ್ಲಿದೆ
ಪ್ರಯಾಗ್ ರಾಜ್ ನಲ್ಲಿ ಆಚರಣೆ ಏಕೆ?
- ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಭಾರತೀಯ ವಾಯುಪಡೆಯ ಸೆಂಟ್ರಲ್ ಏರ್ ಕಮಾಂಡ್ ಇದೆ. ಈ ಕೇಂದ್ರವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. 1962 ರಲ್ಲಿ ನಡೆದ ಚೀನಾ ಯುದ್ಧ, 1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಸಮರಗಳಲ್ಲಿ ದೇಶವನ್ನು ರಕ್ಷಿಸಿದ ಹೆಗ್ಗಳಿಕೆ ಈ ಕೇಂದ್ರಕ್ಕೆ ಇದೆ. ಪ್ರಯಾಗ್ರಾಜನಲ್ಲಿ ಕೇಂದ್ರ ಸ್ಥಾಪನೆಯಾಗುವುದಕ್ಕಿಂತಲೂ ಮೊದಲು ಕೊಲ್ಕತ್ತಾ, ಶಿಲಾಂಗ್ ನಲ್ಲಿ ಕಾರ್ಯಾಚರಣೆ ನಡೆಸಿತ್ತು. ರಕ್ಷಣಾ ನಿರ್ಧಾರಗಳಿಂದ ಅದನ್ನು ಅಲಹಾಬಾದ್ ಗೆ ಸ್ಥಳಾಂತರಿಸಲಾಗಿ ಅಲ್ಲಿಂದಲೇ ಕಾರ್ಯವೇಸುಗುತ್ತಿದೆ.
ನಿಮಗಿದು ತಿಳಿದಿರಲಿ
- ವಾಯುಪಡೆ ದಿನಾಚರಣೆಯ ಪಥಸಂಚಲನವನ್ನು 2021ರ ವರೆಗೆ ದೆಹಲಿಯ ಹಿಂಡನ್ ವಾಯುನೆಲೆಯಲ್ಲಿ ನಡೆಸಲಾಗುತ್ತಿತ್ತು. 2022ರಲ್ಲಿ ಚಂಡೀಗಢದಲ್ಲಿ ನಡೆಸಲಾಯಿತು. ಈ ಬಾರಿ ಪ್ರಯಾಗರಾಜ್ನಲ್ಲಿ ನಡೆಸಲಾಯಿತು.
ಐಎಎಫ್ ದಿನಾಚರಣೆಯ ಇತಿಹಾಸ
- ಜಪಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಕಿಂಗ್‌ಡಂನ ರಾಯಲ್ ಏರ್ ಫೋರ್ಸ್ ಅನ್ನು ಬೆಂಬಲಿಸಲು ಭಾರತೀಯ ವಾಯುಪಡೆಯನ್ನು 1932 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಸ್ಥಾಪಿಸಲಾಯಿತು .
- ಜಪಾನಿನ ಸೈನ್ಯದ ಪ್ರಗತಿಯನ್ನು ಭಾರತಕ್ಕೆ ತಡೆಯಲು, ಬರ್ಮಾದಲ್ಲಿ ಜಪಾನಿನ ನೆಲೆಗಳನ್ನು ಗುರಿಯಾಗಿಸಲು IAF ಅನ್ನು ಬಳಸಲಾಯಿತು.
- ಭಾರತೀಯ ವಾಯುಪಡೆಯನ್ನು 1932ರ ಅಕ್ಟೋಬರ್ 8ರಂದು ಅಧಿಕೃತವಾಗಿ ಸ್ಥಾಪಿಸಲಾಯಿತು.
- ಎರಡನೆ ಮಹಾಯುದ್ಧದಲ್ಲಿ ಭಾರತೀಯ ಯೋಧರು ತೋರಿದ ವೃತ್ತಿಪರ ದಕ್ಷತೆ ಮತ್ತು ಸಾಹಸವನ್ನು ಪರಿಗಣಿಸಿ 1945ರಲ್ಲಿಬ್ರಿಟಿಷ್ ಆಡಳಿತವು ‘ರಾಯಲ್’ ಎಂಬ ಉಪಮೆ ನೀಡಿತು.
- ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ, ಭಾರತೀಯ ವಾಯುಪಡೆಗೆ ರಾಯಲ್ ಇಂಡಿಯನ್ ಏರ್‌ಫೋರ್ಸ್ (ಆರ್‌ಐಎಎಫ್) ಎಂದು ಹೆಸರಿಡಲಾಯಿತು. ಬಳಿಕ 1950ರಲ್ಲಿ ಭಾರತ ಗಣರಾಜ್ಯವಾದ ಬಳಿಕ ‘ರಾಯಲ್’ ಎಂಬ ಪದವನ್ನು ತೆಗೆದು ಹಾಕಲಾಯಿತು.
- ಭಾರತೀಯ ವಾಯುಪಡೆಯ ದಿನಾಚರಣೆಯನ್ನು ಪ್ರತಿವರ್ಷ ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ.
- ಭಾರತದ ರಾಷ್ಟ್ರಪತಿಗಳು ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ.
- ಪ್ರಧಾನ ಕಛೇರಿ:ನವದೆಹಲಿ
- ಭಾರತೀಯ ವಾಯುಪಡೆಯ ಧ್ಯೇಯವಾಕ್ಯ: ವೈಭವದಿಂದ ಆಕಾಶವನ್ನು ಸ್ಪರ್ಶಿಸಿ. ಇದನ್ನು ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದಿಂದತೆಗೆದುಕೊಳ್ಳಲಾಗಿದೆ.