Published on: October 15, 2023
2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ
2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ
ಸುದ್ದಿಯಲ್ಲಿ ಏಕಿದೆ? ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ಕ್ಲಾಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಮುಖ್ಯಾಂಶಗಳು
- ಆರ್ಥಿಕ ಕ್ಷೇತ್ರದ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಕ್ಲಾಡಿಯಾ ಗೋಲ್ಡಿನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
- ಅವರು ಶತಮಾನಗಳಿಂದ ಮಹಿಳೆಯರ ಗಳಿಕೆ ಮತ್ತು ಅವರು ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆಯ ಮೊದಲ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ. ಅವರ ಸಂಶೋಧನೆಯು ಲಿಂಗ ಅಂತರದ ಮೂಲ, ಬದಲಾವಣೆಯ ಕಾರಣಗಳನ್ನು ಬಹಿರಂಗಪಡಿಸುತ್ತದೆ.
ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ
- 1968 ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿತು.
- ಇದನ್ನು ಅಧಿಕೃತವಾಗಿ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥವಾಗಿ ಅರ್ಥಶಾಸ್ತ್ರದಲ್ಲಿ ಸ್ವೆರಿಜಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ.
- ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯು ಮೂಲ ನೊಬೆಲ್ ಪ್ರಶಸ್ತಿಗಳಲ್ಲಿ ಒಂದಲ್ಲ.
- ಅರ್ಥಶಾಸ್ತ್ರಕ್ಕೆ 1969 ರಿಂದ 2022 ರವರೆಗೆ ಒಟ್ಟು 54 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ.
- ಇನ್ನು ಮಹಿಳೆಯರ ಪೈಕಿ ಇಬ್ಬರು ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು. 2009ರಲ್ಲಿ ಎಲಿನಾರ್ ಓಸ್ಟ್ರೋಮ್. 2019ರಲ್ಲಿ ಎಸ್ತರ್ ಡುಫ್ಲೋ. ಇದೀಗ ಈ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆ ಎಂಬ ಗೌರವಕ್ಕೆ ಕ್ಲಾಡಿಯಾ ಗೋಲ್ಡಿನ್ ಪಾತ್ರರಾಗಿದ್ದಾರೆ.
- ಕಳೆದ ವರ್ಷದ ಅರ್ಥಶಾಸ್ತ್ರದ ಪ್ರಶಸ್ತಿಯನ್ನು ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ಗೆ ನೀಡಲಾಗಿತ್ತು. ಬ್ಯಾಂಕ್ ವೈಫಲ್ಯಗಳು ಮತ್ತು 2007-2008 ರ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಅಧ್ಯಯನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
ನಿಮಗಿದು ತಿಳಿದಿರಲಿ
- 1969 ರಲ್ಲಿ ರಾಗ್ನರ್ ಫ್ರಿಶ್ ಮತ್ತು ಜಾನ್ ಟಿನ್ಬರ್ಗೆನ್ ಅವರಿಗೆ ಅರ್ಥಶಾಸ್ತ್ರದಲ್ಲಿ ಮೊದಲ ನೊಬೆಲ್ ಬಹುಮಾನವನ್ನು ನೀಡಲಾಯಿತು.
- ನವೆಂಬರ್ 1933 ರಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಜನಿಸಿದ್ದ ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರಕ್ಕೆ (welfare economics) ನೀಡಿದ ಕೊಡುಗೆಗಾಗಿ ಅವರಿಗೆ 1998 ರಲ್ಲಿ ಆರ್ಥಿಕ ವಿಜ್ಞಾನದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿತ್ತು.