Published on: October 15, 2023
ರಷ್ಯಾಗೆ ಐಒಸಿ ನಿಷೇಧ
ರಷ್ಯಾಗೆ ಐಒಸಿ ನಿಷೇಧ
ಸುದ್ದಿಯಲ್ಲಿ ಏಕಿದೆ? ಸದಸ್ಯ ರಾಷ್ಟ್ರ ಉಕ್ರೇನ್ನ ಮೇಲೆ ಆಕ್ರಮಣ ನಡೆಸಿದ್ದಕ್ಕೆ ರಷ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಅಮಾನತುಗೊಳಿಸಿದೆ.
ಮುಖ್ಯಾಂಶಗಳು
- ರಷ್ಯನ್ ಒಲಿಂಪಿಕ್ ಸಮಿತಿ ಕಾರ್ಯನಿರ್ವಹಿಸುವಂತಿಲ್ಲ ಜೊತೆಗೆ ಅದಕ್ಕೆ ಆರ್ಥಿಕ ನೆರವೂ ಸಿಗುವುದಿಲ್ಲ.
- ರಷ್ಯಾ ಪಾಸ್ಪೋರ್ಟ್ ಹೊಂದಿರುವ ಅಥ್ಲೀಟುಗಳಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಮಿಲಾನ್ನಲ್ಲಿ ನಡೆಯಲಿರುವ 2026ರ ಚಳಿಗಾಲದ ಒಲಿಂಪಿಕ್ಸ್ಗೆ ತಟಸ್ಥ ಅಥ್ಲೀಟುಗಳಾಗಿ ಭಾಗವಹಿಸಲು ಅವಕಾಶ ನೀಡುವ ಸಂಬಂಧ ಹಕ್ಕುಗಳನ್ನು ಐಒಸಿ ಕಾದಿರಿಸಿದೆ.
- ಉಕ್ರೈನ್ ಮೇಲಿನ ದಾಳಿಗೆ ಬೆಂಬಲ ಘೋಷಿಸಿರುವ ಬೆಲಾರಸ್ ವಿರುದ್ಧವೂ ಐಒಸಿ ಈ ಹಿಂದೆ ನಿರ್ಬಂಧ ಹೇರಿದೆ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ
- ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಸರ್ಕಾರೇತರ ಕ್ರೀಡಾ ಸಂಸ್ಥೆಯಾಗಿದೆ.
- ಅಧ್ಯಕ್ಷ: ಥಾಮಸ್ ಬಾಚ್
- ಪ್ರಧಾನ ಕಛೇರಿ: ಲೌಸನ್ನೆ, ಸ್ವಿಟ್ಜರ್ಲೆಂಡ್
- ಸ್ಥಾಪನೆ: 23 ಜೂನ್ 1894, ಪ್ಯಾರಿಸ್, ಫ್ರಾನ್ಸ್
- ಸ್ಥಾಪಕರು: ಪಿಯರೆ ಡಿ ಕೂಬರ್ಟಿನ್, ಡಿ. ಬಿಕೆಲಾಸ್
- ಅಧಿಕೃತ ಭಾಷೆ: ಫ್ರೆಂಚ್ (ಉಲ್ಲೇಖ ಭಾಷೆ), ಇಂಗ್ಲಿಷ್ ಮತ್ತು ಅಗತ್ಯವಿದ್ದಾಗ ಆತಿಥೇಯ ದೇಶದ ಭಾಷೆ