Published on: October 15, 2023
ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶ
ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶ
ಸುದ್ದಿಯಲ್ಲಿ ಏಕಿದೆ? ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವೀರಾಂಗಣ ದುರ್ಗಾವತಿ ಎಂಬ ಹೊಸ ಹುಲಿ ಸಂರಕ್ಷಿತ ಪ್ರದೇಶವನ್ನು ಘೋಷಿಸಿದೆ.
ಮುಖ್ಯಾಂಶಗಳು
- ಟೈಗರ್ ಪ್ರಾಜೆಕ್ಟ್ 1973ರ ಅಡಿಯಲ್ಲಿ ಸ್ಥಾಪಿಸಲಾಗಿದೆ
- ಇದು ಮಧ್ಯಪ್ರದೇಶದಲ್ಲಿದೆ. ಇದು ಈ ರಾಜ್ಯದ ಏಳನೇ ಮತ್ತು ದೇಶದಲ್ಲಿ 54 ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
- ಇದು ಮಧ್ಯಪ್ರದೇಶದ ಸಾಗರ್, ದಾಮೋಹ್ ಮತ್ತು ನರಸಿಂಗ್‌ಪುರ ಜಿಲ್ಲೆಗಳಲ್ಲಿ ಹರಡಿದೆ .
- ಇದು ನೌರದೇಹಿ ವನ್ಯಜೀವಿ ಅಭಯಾರಣ್ಯ ಮತ್ತು ದುರ್ಗಾವತಿ ವನ್ಯಜೀವಿ ಅಭಯಾರಣ್ಯದೊಳಗಿನ ಪ್ರದೇಶಗಳನ್ನು ಒಳಗೊಳ್ಳುತ್ತದೆ.
- ಈ ಮೀಸಲು ಪ್ರದೇಶ ನರ್ಮದಾ ಮತ್ತು ಯಮುನಾ ನದಿಯ ಜಲಾನಯನ ಪ್ರದೇಶಗಳ ಅಡಿಯಲ್ಲಿ ಬರುತ್ತವೆ.
ನಿಮಗಿದು ತಿಳಿದಿರಲಿ
- ವಿಶ್ವದ ಶೇ . 70 ರಷ್ಟು ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ
- ಈ ವರ್ಷದ ಜುಲೈನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆ ಮಾಡಿದ ‘ಹುಲಿಗಳ ಸ್ಥಿತಿ: ಭಾರತದಲ್ಲಿ ಸಹ-ಪರಭಕ್ಷಕಗಳು ಮತ್ತು ಬೇಟೆ-2022’ ವರದಿಯ ಪ್ರಕಾರ, ಭಾರತದಲ್ಲಿ 3925 ಹುಲಿಗಳಿವೆ. ಮಧ್ಯಪ್ರದೇಶ (785) ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. , ನಂತರ ಕರ್ನಾಟಕ (563) ಮತ್ತು ಉತ್ತರಾಖಂಡ (560) ರಾಜ್ಯಗಳಿವೆ.