Published on: December 29, 2023

ಐಎನ್ಎಸ್ ಇಂಫಾಲ್

ಐಎನ್ಎಸ್ ಇಂಫಾಲ್

ಸುದ್ದಿಯಲ್ಲಿ ಏಕಿದೆ? ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಿರುವ, ಕ್ಷಿಪಣಿ ವಿಧ್ವಂಸಕ ಅತ್ಯಾಧುನಿಕ ಯುದ್ಧ ನೌಕೆ ‘ಐಎನ್ಎಸ್ ಇಂಫಾಲ್’ ಅನ್ನು ನೌಕಾಪಡೆಯ ಪಶ್ಚಿಮ ಕಮಾಂಡ್ ಕರ್ತವ್ಯಕ್ಕೆ ನಿಯೋಜಿಸಲಾಯಿತು.

ಮುಖ್ಯಾಂಶಗಳು

  • ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ
  • ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಈಶಾನ್ಯ ರಾಜ್ಯದ ನಗರವೊಂದರ ಹೆಸರು ಇಟ್ಟಿರುವುದು ಇದೇ ಮೊದಲು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಣಿಪುರದ ಜನರ ಕೊಡುಗೆ ಮತ್ತು ತ್ಯಾಗಗಳನ್ನು ಸ್ಮರಿಸಲು ಈ ಹೆಸರು ಇಡಲಾಗಿದೆ.
  • ‘ಇದೇ ವರ್ಷ ನವೆಂಬರ್ನಲ್ಲಿ ಇಂಫಾಲ್ ನೌಕೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸ್ವದೇಶಿ ನಿರ್ಮಿತ ಯುದ್ಧನೌಕೆಯನ್ನು ನಿಯೋಜನೆಗೂ ಮುನ್ನ ಈ ರೀತಿಯ ಪರೀಕ್ಷೆಗೆ ಒಳಪಡಿಸಿದ್ದು ಇದೇ ಮೊದಲು.
  • ಇದು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (MADLA) ಅಭಿವೃದ್ಧಿಪಡಿಸಿದ ನಾಲ್ಕು ಪ್ರಾಜೆಕ್ಟ್ 15B ಸ್ಟೆಲ್ತ್ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್‌ಗಳಲ್ಲಿ ಮೂರನೆಯದು.

ನೌಕೆಯ ವಿಶೇಷತೆಗಳು

  • ಪರಮಾಣು, ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳ ದಾಳಿ ಸೇರಿದಂತೆ ಯಾವುದೇ ಯುದ್ದದ ಪರಿಸ್ಥಿತಿಯಲ್ಲೂ ಹೋರಾಡುವ ರೀತಿಯಲ್ಲಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ
  • ನೆಲದಿಂದ ನೆಲಕ್ಕೆ ಮತ್ತು ನೆಲದಿಂದ ಆಗಸಕ್ಕೆ ಉಡಾವಣೆ ಮಾಡಬಲ್ಲ ಕ್ಷಿಪಣಿಗಳನ್ನು ಒಳಗೊಂಡಿರಲಿದೆ.
  • ಜಲಾಂತರ್ಗಾಮಿ ವಿರೋಧಿ ಯುದ್ಧ ಕಾರ್ಯಾಚರಣೆಗಳು: ದಕ್ಷ ಕಾರ್ಯಾಚರಣೆಗಳಿಗಾಗಿ ರಾಕೆಟ್ ಲಾಂಚರ್‌ಗಳು, ಟಾರ್ಪಿಡೊ ಲಾಂಚರ್‌ಗಳು ಮತ್ತು ಆಧುನಿಕ ಕಣ್ಗಾವಲು ರಾಡಾರ್ ವೈಶಿಷ್ಟ್ಯಗಳನ್ನು ಹೊಂದಿದೆ