Published on: January 1, 2024
ಎಕ್ಸ್‌ಪೋಸ್ಯಾಟ್
ಎಕ್ಸ್‌ಪೋಸ್ಯಾಟ್
ಸುದ್ದಿಯಲ್ಲಿ ಏಕಿದೆ? ಕಪ್ಪು ಕುಳಿಗಳ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾಯ ಸಂಸ್ಥೆ ಹೊಸ ವರ್ಷದ ಮೊದಲ ದಿನವೇ ಎಕ್ಸ್‌ಪೋಸ್ಯಾಟ್ (XPoSat) ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.
ಮುಖ್ಯಾಂಶಗಳು
- XPoSAT ನ ಯಶಸ್ವಿ ಉಡಾವಣೆಯು ಭಾರತವನ್ನು ಗಣ್ಯ ವರ್ಗಕ್ಕೆ ಸೇರಿಸಿದೆ, ಏಕೆಂದರೆ ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು ಮುಂತಾದ ಖಗೋಳ ಮೂಲಗಳನ್ನು ಅಧ್ಯಯನ ಮಾಡಲು ವೀಕ್ಷಣಾಲಯವನ್ನು ಕಳುಹಿಸುವ ಎರಡನೇ ರಾಷ್ಟ್ರವಾಗಿದೆ.
- ಉಡಾವಣಾ ವಾಹಕ: PSLV ಸಿ58
- ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.
- ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ (X-Ray Polarimeter Satellite) ಉಪಗ್ರಹ ಎಕ್ಸ್‌ಪೋಸ್ಯಾಟ್ (XPoSat) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದರ ಜೊತೆಗೆ ಪಿಎಸ್‌ಎಲ್‌ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ.
- ಈ ಉಪಗ್ರಹಗಳನ್ನು ಸ್ಟಾರ್ಟ್‌ಅಪ್ಸ್ ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿವೆ.
ಪೇಲೋಡ್: POLIX (ಎಕ್ಸ್-ರೇಗಳಲ್ಲಿ ಪೋಲಾರಿಮೀಟರ್ ಉಪಕರಣ) ಮತ್ತು XSPECT (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಪೇಲೋಡ್‌ಗಳಾಗಿವೆ.
POLIX ಅನ್ನು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದೆ.
ಎಕ್ಸ್‌ಸ್ಪೆಕ್ಟ್ ಅನ್ನು ಬೆಂಗಳೂರಿನ ಯುಆರ್‌ಎಸ್‌ಸಿಯ ಬಾಹ್ಯಾಕಾಶ ಖಗೋಳವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ.
ಉದ್ದೇಶ
ಪಲ್ಸಾರ, ಕಪ್ಪು ಕುಳಿ, ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‍ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಸೂಪರ್‍ನೋವಾ ಅವಶೇಷಗಳ ಅಧ್ಯಯನ ನಡೆಸಲಿದೆ. ಈ ಮಿಷನ್ ಕನಿಷ್ಠ ಐದು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ.