Published on: January 14, 2024

ಸೇವಾರಿ-ನವ ಶೇವಾ ಅಟಲ್ ಸೇತು

ಸೇವಾರಿ-ನವ ಶೇವಾ ಅಟಲ್ ಸೇತು

ಸುದ್ದಿಯಲ್ಲಿ ಏಕಿದೆ? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ ಸೇವಾರಿ-ನವ ಶೇವಾ ಅಟಲ್ ಸೇತು ಅಥವಾ ಮುಂಬೈ ಟ್ರಾನ್ಸ್ ಹಾಬರ್ ಲಿಂಕ್ (MTHL) ಅನ್ನು ಅನ್ನು ಪ್ರಧಾನಿ ಅವರು ಮುಂಬೈನಲ್ಲಿ ಉದ್ಘಾಟಿಸಿದರು.

ಮುಖ್ಯಾಂಶಗಳು

  • 2016ರ ಡಿಸೆಂಬರ್ ತಿಂಗಳಿನಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
  • ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.
  • ಅಟಲ್ ಸೇತು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, 16.5 ಕಿಮೀ ಸಮುದ್ರದ ಮೇಲೆ ಹಾಗೂ 5.5 ಕಿಮೀ ಭೂಮಿಯ ಮೇಲೆ ನಿರ್ಮಿಸಲಾಗಿದೆ.
  • ಈ ಸೇತುವೆಯು ಮುಂಬೈನ ಸೆವ್ರಿಯಿಂದ ಪ್ರಾರಂಭವಾಗಿ ಮತ್ತು ರಾಯಗಡ್ ಜಿಲ್ಲೆಯ ಉರಾನ್ ತಾಲೂಕಿನ ನವಾ ಶೇವಾದಲ್ಲಿ ಕೊನೆಗೊಳ್ಳುತ್ತದೆ.
  • ಯೋಜನೆಯು ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯಿಂದ (JICA) ಧನಸಹಾಯವನ್ನು ಒಅಡೆದಿದೆ, ಇದು ಒಟ್ಟು ಯೋಜನಾ ವೆಚ್ಚದ 80% ಅನ್ನು ಒಳಗೊಂಡಿದೆ, ಉಳಿದ ಭಾಗವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಹಂಚಲಾಗುತ್ತದೆ.

ಉದ್ದೇಶ

  • ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ತಗ್ಗಿಸುತ್ತದೆ.
  • ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.
  • ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಮತ್ತು JICA ನಡೆಸಿದ ಅಧ್ಯಯನದ ಪ್ರಕಾರ, MTHL ಸೆವ್ರಿ ಮತ್ತು ಚಿರ್ಲೆ ನಡುವಿನ ಸರಾಸರಿ ಪ್ರಯಾಣದ ಸಮಯವನ್ನು ಪ್ರಸ್ತುತ 61 ನಿಮಿಷಗಳಿಂದ 16 ನಿಮಿಷಗಳಿಗೆ ಕಡಿಮೆಗೊಳಿಸುತ್ತದೆ.

ನಿಮಗಿದು ತಿಳಿದಿರಲಿ

ಈ ಹಿಂದೆ ಡಾ. ಭೂಪೇನ್ ಹಜಾರಿಕಾ ಸೇತುವೆಯು ಅಸ್ಸಾಂನಲ್ಲಿರುವ 9.15 ಕಿಮೀ ಉದ್ದದ ಬ್ರಹ್ಮಪುತ್ರ ನದಿಯ ಮೇಲಿನ ಸೇತುವೆ ಭಾರತದ ಅತಿ ಉದ್ದದ ಸೇತುವೆಯಾಗಿತ್ತು.