Published on: March 11, 2024
ಚುಟುಕು ಸಮಾಚಾರ : 11 ಮಾರ್ಚ್ 2024
ಚುಟುಕು ಸಮಾಚಾರ : 11 ಮಾರ್ಚ್ 2024
- ಸೃಜನಶೀಲ ವಸ್ತು ವಿಷಯದಲ್ಲಿ ಛಾಪು ಮೂಡಿಸಿದವರಿಗೆ ಇದೇ ಮೊದಲ ಬಾರಿಗೆ ‘ನ್ಯಾಷನಲ್ ಕ್ರಿಯೇಟರ್ಸ್’ ಪ್ರಶಸ್ತಿಗಳನ್ನು ನವದೆಹಲಿಯ ಭಾರತ ಮಂಟಪಮನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಪ್ರದಾನ ಮಾಡಿದರು. ಕಥೆ ಹೇಳುವವರು ಗ್ರೀನ್ ಚಾಂಪಿಯನ್ ಸಾಮಾಜಿಕ ಬದಲಾವಣೆ ಸಾಂಸ್ಕೃತಿಕ ರಾಯಭಾರಿ ತಂತ್ರಜ್ಞಾನ ಪಾರಂಪರಿಕ ವಸ್ತ್ರ ವಿನ್ಯಾಸ ಆಹಾರ ಸೇರಿದಂತೆ 20 ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಯಿತು
- ಕೇಂದ್ರದ ಸಚಿವ ಸಂಪುಟ ಸಭೆಯು ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಿಷನ್ಗಾಗಿ ₹10,372 ಕೋಟಿ ಒದಗಿಸಲು ಅನುಮೋದನೆ ನೀಡಿದೆ. ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಯೋಜನೆ ಅನುಷ್ಠಾನ: ಡಿಜಿಟಲ್ ಇಂಡಿಯಾ ಕಾರ್ಪೋರೇಷನ್ನ(ಡಿಐಸಿ) ಅಂಗ ಸಂಸ್ಥೆಯಾಗಿರುವ ‘ಇಂಡಿಯಾ ಎಐ ಇಂಡಿಪೆಂಡೆಂಟ್ ಡಿಜಿಜನ್’ (ಐಬಿಡಿ)ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಐದು ವರ್ಷಗಳ ಅವಧಿಯ ಈ ಯೋಜನೆಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವ ವಿಧಾನದಲ್ಲಿ ಅನುಷ್ಠಾನಗೊಳಿಸಲಾಗುವುದು.
- ಭಾರತೀಯ ನೌಕಾಪಡೆ ಕಡಲ ಗಡಿ ರಕ್ಷಣೆಯಲ್ಲಿ ನೂತನ ನೌಕಾನೆಲೆಯಾದ ‘ಐಎನ್ಎಸ್ ಜಟಾಯು’ ಗೆ ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ಕಾರ್ಯಾರಂಭಿಸಲಾಯಿತು.ಇದೇ ಸಂದರ್ಭದಲ್ಲಿ, ‘ಐಎನ್ಎಸ್ ಜಟಾಯು’ವಿನ ಮೊದಲ ಕಮಾಂಡಿಂಗ್ ಆಫೀಸರ್ ಆಗಿ ನೇಮಕವಾಗಿರುವ ಕಮಾಂಡರ್ ವ್ರತ ಬಘೇಲ್ ಅಧಿಕಾರ ವಹಿಸಿಕೊಂಡರು. INS ಜಟಾಯು ಲಕ್ಷದ್ವೀಪದಲ್ಲಿ ದೇಶದ ಎರಡನೇ ನೌಕಾ ನೆಲೆಯಾಗಲಿದೆ. ಈ ದ್ವೀಪಗಳಲ್ಲಿ ನೌಕಾಪಡೆಯ ಮೊದಲ ನೌಕಾನೆಲೆ, ಕವರಟ್ಟಿಯಲ್ಲಿ INS ದ್ವೀಪರಕ್ಷಕ ಅನ್ನು 2012 ರಲ್ಲಿ ಕಾರ್ಯಾರಂಭ ಮಾಡಲಾಗಿತ್ತು.
- ಅಣೆಕಟ್ಟುಗಳ ಸುರಕ್ಷತೆಗೆ ಕೆಲಸ ಮಾಡುವ ಕೇಂದ್ರವೊಂದನ್ನು ಆರಂಭಿಸಲು (‘ಅಣೆಕಟ್ಟುಗಳ ಉತ್ಕೃಷ್ಟತೆಗಾಗಿನ ಅಂತರರಾಷ್ಟ್ರೀಯ ಕೇಂದ್ರ – ಐಸಿಇಡಿ) ಕೇಂದ್ರ ಜಲ ಆಯೋಗವು (ಸಿಡಬ್ಲ್ಯು ಸಿ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದವು ಹತ್ತು ವರ್ಷಗಳ ಅವಧಿಗೆ ಜಾರಿಯಲ್ಲಿ ಇರುತ್ತದೆ. ICED, IISc ಬೆಂಗಳೂರು ಅಣೆಕಟ್ಟು ಸುರಕ್ಷತೆಯ ಪ್ರದೇಶದಲ್ಲಿ ಎರಡನೇ ಅಂತರರಾಷ್ಟ್ರೀಯ ಕೇಂದ್ರವಾಗಿದೆ. ಫೆಬ್ರವರಿ 2023 ರಲ್ಲಿ IIT ರೂರ್ಕಿಯಲ್ಲಿ ಮೊದಲ ICED ಅನ್ನು ಸಾಂಸ್ಥಿಕಗೊಳಿಸಲಾಗಿದೆ.
- ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ದೇಶದ ಮೊದಲ ನೀರಿನೊಳಗಿನ ಸುರಂಗ ಮಾರ್ಗದ ಮೆಟ್ರೊ ರೈಲು ಸಂಚಾರಕ್ಕೆ ಪ್ರಧಾನಿ ಅವರು ಚಾಲನೆ ನಿಡಿದರು. ಸಂಪರ್ಕ: ಕೋಲ್ಕತ್ತ ಮೆಟ್ರೊದ ಎಸ್ಪ್ಲನೇಡ್–ಹೌರಾ ಮೈದಾನ ಸೆಕ್ಷನ್ನಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಹೂಗ್ಲಿ ನದಿಯಲ್ಲಿ, ನೆಲಮಟ್ಟದಿಂ ದ 32 ಮೀಟರ್ ಆಳದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಉದ್ದ:8 ಕಿ.ಮೀ. , ಯೋಜನಾ ವೆಚ್ಚ: ಪೂರ್ವ – ಪಶ್ಚಿಮ ಕಾರಿಡಾರ್ನ ಭಾಗವಾಗಿರುವ ಜಪಾನ್ ಇಂಟರ್ನ್ಯಾಶನಲ್ ಕೋಆಪರೇಷನ್ ಏಜೆನ್ಸಿ (ಜೆಐಸಿಎ) ಯಿಂದ ಸಾಲದ ಮೂಲಕ ಧನಸಹಾಯ ಪಡೆದ ಈ ಯೋಜನೆಯು ಒಟ್ಟು ವೆಚ್ಚ 4,965 ಕೋಟಿ ರೂ. ಆಗಿದೆ.