Published on: March 13, 2024

ಲೋಕಪಾಲ ಮುಖ್ಯಸ್ಥ

ಲೋಕಪಾಲ ಮುಖ್ಯಸ್ಥ

ಸುದ್ದಿಯಲ್ಲಿ ಏಕಿದೆ? ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ಎ ಎಂ ಖಾನ್ವಿಲ್ಕರ್(ಅಜಯ್ ಮಾಣಿಕರಾವ್ ಖಾನ್ವಿಲ್ಕರ್) ಅವರು ಲೋಕಪಾಲ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಲೋಕಪಾಲ ಮುಖ್ಯಸ್ಥರಿಗೆ ಪ್ರಮಾಣ ವಚನ ಬೋಧಿಸಿದರು.

ಮುಖ್ಯಾಂಶಗಳು

  • 66 ವರ್ಷದ ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಮೇ 13, 2016 ರಿಂದ ಜುಲೈ 29, 2022 ರವರೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
  • ಮೇ 27, 2022 ರಂದು ಪಿನಾಕಿ ಚಂದ್ರ ಘೋಸ್ ಅವರ ನಿವೃತ್ತಿಯ ನಂತರ ಖಾಲಿಯಾದ ಹುದ್ದೆಗೆ ಸುಮಾರು ಎರಡು ವರ್ಷಗಳ ನಂತರ ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರನ್ನು ಭ್ರಷ್ಟಾಚಾರ ವಿರೋಧಿ ಲೋಕಪಾಲ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಲೋಕಪಾಲ್

ಲೋಕಪಾಲ್ ಎಂಬುದು ಭ್ರಷ್ಟಾಚಾರ-ವಿರೋಧಿ ಪ್ರಾಧಿಕಾರ ಆಗಿದೆ.

ಸ್ಥಾಪನೆ: 19 ಮಾರ್ಚ್ 2019

ಅಧಿಕಾರ ವ್ಯಾಪ್ತಿ: ಭಾರತ ಸರ್ಕಾರ

ಪ್ರಧಾನ ಕಛೇರಿ: ನವದೆಹಲಿ, ಭಾರತ

ಧ್ಯೇಯವಾಕ್ಯ: ‘ಮಾ ಗೃಧಃ ಕಸ್ಯಸ್ವಿದ್ಧನಮ್’ ಎಂದರೆ: “ಯಾರ ಸಂಪತ್ತಿಗೂ ದುರಾಸೆ ಪಡಬೇಡ