Published on: March 17, 2024
‘ವಿಶ್ವ ಸುಂದರಿ’ ಸ್ಪರ್ಧೆ 2023
‘ವಿಶ್ವ ಸುಂದರಿ’ ಸ್ಪರ್ಧೆ 2023
ಸುದ್ದಿಯಲ್ಲಿ ಏಕಿದೆ? ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 2023ನೇ ಸಾಲಿನ ‘ವಿಶ್ವ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಲೆಬನಾನನ ಯಾಸ್ಮಿನಾ ಜೈಟೌನ್ ರನ್ನರ್-ಅಪ್ ಆದರು.
ಮುಖ್ಯಾಂಶಗಳು
- ನಡೆದ ಸ್ಥಳ: ಭಾರತದ ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿರುವ ಜಿಯೊವರ್ಲ್ಡ್ ಕನ್ವೆನ್ಷನ್ ಸೆಂಟರ್
- ಆವೃತ್ತಿ: 71ನೇ ಆವೃತ್ತಿ
- ಭಾಗವಹಿಸಿದ ದೇಶಗಳು: 112 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು.
- ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.
- ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ಮಾಜಿ ವಿಶ್ವ ಸುಂದರಿ ಫಿಲಿಪ್ಪೀನ್ಸ್ ನ ಮೇಗನ್ ಯಂಗ್ ಅವರ ನೇತೃತ್ವದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
- 70ನೇ ಆವೃತ್ತಿಯ ಸ್ಪರ್ಧೆಯಲ್ಲಿ ಪೋಲೆಂಡ್ ನ ಕರೋಲಿನಾ ಬೈಲಾವ್ಸ್ಕಾ ಅವರು 2022ನೇ ಸಾಲಿನ ‘ವಿಶ್ವ ಸುಂದರಿ’ ಗೌರವಕ್ಕೆ ಪಾತ್ರರಾಗಿದ್ದರು.
ನಿಮಗಿದು ತಿಳಿದಿರಲಿ
- 28 ವರ್ಷಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾರತದಲ್ಲಿ ಕೊನೆಯದಾಗಿ 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ 46ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಆಗ ಗ್ರೀಸ್ನ ಐರಿನ್ ಸ್ಕ್ಲಿವಾ ಪ್ರಶಸ್ತಿಯನ್ನು ಗೆದ್ದಿದ್ದರು.
- ರೀಟಾ ಫರಿಯಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಅವರು 1966 ರಲ್ಲಿ ಪ್ರಶಸ್ತಿಯನ್ನು ಗೆದ್ದರು, ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯಾದ ಮಹಿಳೆ ಆಗಿದ್ದಾರೆ.
ಜೆಕ್ ರಿಪಬ್ಲಿಕ್
- ಇದು ಮಧ್ಯ ಯುರೋಪ್‌ನಲ್ಲಿ ಭೂಆವೃತ ದೇಶವಾಗಿದೆ.
- ಇದು ದಕ್ಷಿಣಕ್ಕೆ ಆಸ್ಟ್ರಿಯಾ, ಪಶ್ಚಿಮಕ್ಕೆ ಜರ್ಮನಿ, ಈಶಾನ್ಯಕ್ಕೆ ಪೋಲೆಂಡ್ ಮತ್ತು ಆಗ್ನೇಯಕ್ಕೆ ಸ್ಲೋವಾಕಿಯಾ ದೇಶಗಳಿಂದ ಸುತ್ತುವರೆದಿದೆ.
- ರಾಜಧಾನಿ: ಪ್ರೇಗ್
- ಅಧ್ಯಕ್ಷ : ಪೆಟ್ರ್ ಪಾವೆಲ್