Published on: March 31, 2024

ಪರಿಷ್ಕ್ರತ MGNREGA ವೇತನ

ಪರಿಷ್ಕ್ರತ MGNREGA ವೇತನ

ಸುದ್ದಿಯಲ್ಲಿ ಏಕಿದೆ? ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ–ನರೇಗಾ)ಅಡಿಯಲ್ಲಿನ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.  2024-25 ರ ಆರ್ಥಿಕ ವರ್ಷಕ್ಕೆ MGNREGA ಕಾರ್ಮಿಕರ ವೇತನ ದರಗಳಲ್ಲಿ 3-10 ಶೇಕಡಾ ಹೆಚ್ಚಳವನ್ನು ಕೇಂದ್ರವು ಸೂಚಿಸಿದೆ.

ಮುಖ್ಯಾಂಶಗಳು

  • ಮಾದರಿ ನೀತಿ ಸಂಹಿತೆ ವಿಧಿಸಿರುವ ನಿರ್ಬಂಧಗಳನ್ನು ಪರಿಗಣಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಚುನಾವಣಾ ಆಯೋಗದಿಂದ ವಿಶೇಷ ಅನುಮತಿ ಪಡೆದುಕೊಂಡಿದೆ.
  • ಪರಿಷ್ಕೃತ ದರಗಳು 1ನೇ ಏಪ್ರಿಲ್ 2024 ರಿಂದ ಜಾರಿಗೆ ಬರಲಿವೆ.
  • ಕರ್ನಾಟಕದಲ್ಲಿ ಈ ಮೊದಲು ದಿನಕ್ಕೆ ₹ 316ರಷ್ಟಿದ್ದ ನರೇ ಗಾ ಕೂಲಿ ದರವು ಪರಿಷ್ಕರಣೆ ಬಳಿಕ ₹349ಕ್ಕೆ ಹೆಚ್ಚಿಸಲಾಗಿದೆ
  • ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನಲ್ಲಿ ಕೂಲಿ ಮೊತ್ತ ಅತ್ಯಂತ ಕಡಿಮೆ (₹ 234) ಇದೆ .
  • ಅಧಿಸೂಚನೆಯ ಪ್ರಕಾರ, ಗೋವಾದಲ್ಲಿ ಕೂಲಿ ದರವು ದೇಶದಲ್ಲಿಯೇ ಅತಿ ಹೆಚ್ಚು ಪರಿಷ್ಕರಣೆಯಾಗಿದೆ. ಅಂದರೆ ಅಲ್ಲಿನ ಕೂಲಿ ದರದಲ್ಲಿ ₹ 34 ಏರಿಕೆಯಾಗಿದ್ದು, ದಿನದ ಕೂಲಿ ₹ 356ಕ್ಕೆ ತಲುಪಿದೆ.
  • ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ (₹7) ಪರಿಷ್ಕರಣೆಯಾಗಿದ್ದು, ಎರಡೂ ರಾಜ್ಯಗಳಲ್ಲಿ ನರೇಗಾ ಕೂಲಿಯು ದಿನಕ್ಕೆ ₹ 237 ಆಗಿದೆ.
  • ಈ ಯೋಜನೆಯಡಿ ದೇಶದಲ್ಲಿಯೇ ಅತಿ ಹೆಚ್ಚು ಕೂಲಿ ದರ ಹೊಂದಿರುವ ರಾಜ್ಯಗಳ ಪೈಕಿ ಹರಿಯಾಣ (ದಿನಕ್ಕೆ ₹374) ಮೊದಲ ಸ್ಥಾನದಲ್ಲಿದ್ದರೂ, ಅಲ್ಲಿ ಕೂಲಿ ದರದಲ್ಲಿ ಕೇವಲ ಶೇ 4ರಷ್ಟನ್ನು ಏರಿಕೆ ಮಾಡಲಾಗಿದೆ.

 MGNREGA ಯೋಜನೆ

  • ಪ್ರಾರಂಭ: 2005
  • ವಿಶ್ವದ ಅತಿದೊಡ್ಡ ಕೆಲಸದ ಖಾತರಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದು ಕಾನೂನುಬದ್ಧ ಕನಿಷ್ಠ ವೇತನದಲ್ಲಿ ಸಾರ್ವಜನಿಕ ಕೆಲಸಕ್ಕೆ ಸಂಬಂಧಿಸಿದ ಕೌಶಲ್ಯರಹಿತ ಕೆಲಸ ಮಾಡಲು ಸಿದ್ಧರಿರುವ ಯಾವುದೇ ಗ್ರಾಮೀಣ ಮನೆಯ ವಯಸ್ಕ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ನೂರು ದಿನಗಳ ಉದ್ಯೋಗಕ್ಕೆ ಕಾನೂನು ಖಾತರಿ ನೀಡುತ್ತದೆ.

ವೈಶಿಷ್ಟ್ಯಗಳು:

  • ಯಾವುದೇ ಗ್ರಾಮೀಣ ವಯಸ್ಕರು ಕೆಲಸಕ್ಕೆ ವಿನಂತಿಸಬಹುದು ಮತ್ತು ಅದನ್ನು 15 ದಿನಗಳಲ್ಲಿ ಸ್ವೀಕರಿಸಬೇಕು ಎಂದು ಖಚಿತಪಡಿಸುತ್ತದೆ. ಈ ಬದ್ಧತೆಯನ್ನು ಪೂರೈಸದಿದ್ದರೆ, “ನಿರುದ್ಯೋಗ ಭತ್ಯೆ” ಒದಗಿಸಬೇಕು.
  • ಕನಿಷ್ಠ ಮೂರನೇ ಒಂದು ಭಾಗದಷ್ಟು ಫಲಾನುಭವಿಗಳು ನೋಂದಾಯಿಸಿದ ಮತ್ತು ಕೆಲಸಕ್ಕಾಗಿ ವಿನಂತಿಸಿದ ಮಹಿಳೆಯರಾಗಿರಬೇಕು ಎಂಬ ರೀತಿಯಲ್ಲಿ ಮಹಿಳೆಯರಿಗೆ ಆದ್ಯತೆಯನ್ನು ನೀಡಬೇಕು.
  • MGNREGA ಯ ವಿಭಾಗ 17 MGNREGA ಅಡಿಯಲ್ಲಿ ಕಾರ್ಯಗತಗೊಳಿಸಲಾದ ಎಲ್ಲಾ ಕೆಲಸಗಳ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸಿದೆ.
  • ಅನುಷ್ಠಾನ ಸಂಸ್ಥೆ: ಗ್ರಾಮೀಣಾಭಿವೃದ್ಧಿ ಸಚಿವಾಲಯ (MRD), ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ಯೋಜನೆಯ ಸಂಪೂರ್ಣ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತಿದೆ.
  • ಉದ್ದೇಶ: ಗ್ರಾಮೀಣ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪ್ರಾಥಮಿಕವಾಗಿ ಅರೆ ಅಥವಾ ಕೌಶಲ್ಯರಹಿತ ಕೆಲಸ ಮಾಡುವ ಗ್ರಾಮೀಣ ಜನರ ಖರೀದಿ ಸಾಮರ್ಥ್ಯವನ್ನು ಸುಧಾರಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಪರಿಚಯಿಸಲಾಗಿದೆ. ಇದು ದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.

ನಿಮಗಿದು ತಿಳಿದಿರಲಿ

  • ಗ್ರಾಮೀಣ ಭಾಗದ ಜನರು ಬರಗಾಲದಲ್ಲಿ ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವ ಸದುದ್ದೇಶದಿದ ಸರ್ಕಾರವೇ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಯಾನ ನಡೆಸುತ್ತಿದೆ.
  • ಪ್ರಸ್ತುತ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ವೇತನವನ್ನು ಗ್ರಾಮೀಣ ಪ್ರದೇಶಗಳಲ್ಲಿನ ಹಣದುಬ್ಬರವನ್ನು ಪ್ರತಿಬಿಂಬಿಸುವ CPI-AL (ಗ್ರಾಹಕ ಬೆಲೆ ಸೂಚ್ಯಂಕ- ಕೃಷಿ ಕಾರ್ಮಿಕ) ಬದಲಾವಣೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.