Published on: April 13, 2024

ಹೆಪಟೈಟಿಸ್ ವರದಿ 2024

ಹೆಪಟೈಟಿಸ್ ವರದಿ 2024

ಸುದ್ದಿಯಲ್ಲಿ ಏಕಿದೆ? ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಬಿಡುಗಡೆ ಮಾಡಿದ ಜಾಗತಿಕ ಹೆಪಟೈಟಿಸ್ ವರದಿ 2024, ವೈರಲ್ ಹೆಪಟೈಟಿಸ್, ವಿಶೇಷವಾಗಿ ಹೆಪಟೈಟಿಸ್ ಬಿ ಮತ್ತು ಸಿ ಸೋಂಕುಗಳ ಹೊರೆಯನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವನ್ನು ಹೈಲೈಟ್ ಮಾಡಿದೆ.

ಮುಖ್ಯಾಂಶಗಳು

ಜಾಗತಿಕವಾಗಿ

  • ವೈರಲ್ ಹೆಪಟೈಟಿಸ್ 2022 ರಲ್ಲಿ ಜಾಗತಿಕವಾಗಿ 1.3 ಮಿಲಿಯನ್ ಸಾವುಗಳಿಗೆ ಕಾರಣವಾಯಿದೆ.
  • ಹೆಪಟೈಟಿಸ್ ಬಿ 83% ನಷ್ಟು ಸಾವುಗಳಿಗೆ ಕಾರಣವಾದರೆ, ಹೆಪಟೈಟಿಸ್ ಸಿ 17% ನಷ್ಟಿದೆ.
  • ಜಾಗತಿಕವಾಗಿ, 2022 ರಲ್ಲಿ ಅಂದಾಜು 304 ಮಿಲಿಯನ್ ಜನರು ಹೆಪಟೈಟಿಸ್ ಬಿ ಮತ್ತು ಸಿ ಯೊಂದಿಗೆ ವಾಸಿಸುತ್ತಿದ್ದಾರೆ.
  • WHO ಅಂದಾಜಿನ ಪ್ರಕಾರ 2022 ರಲ್ಲಿ 254 ಮಿಲಿಯನ್ ಜನರು ಹೆಪಟೈಟಿಸ್ ಬಿ ಮತ್ತು 50 ಮಿಲಿಯನ್ ಹೆಪಟೈಟಿಸ್ ಸಿ ಯೊಂದಿಗೆ ವಾಸಿಸುತ್ತಿದ್ದರು.
  • 12% ರಷ್ಟು ಹೊರೆಯು ಮಕ್ಕಳಲ್ಲಿದೆ, ವಿಶೇಷವಾಗಿ ಹೆಪಟೈಟಿಸ್ ಬಿ

ಭಾರತದಲ್ಲಿ ಹೆಪಟೈಟಿಸ್

  • ವೈರಲ್ ಹೆಪಟೈಟಿಸ್‌ನ ಅತಿ ಹೆಚ್ಚು ಹೊರೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ.
  • ಭಾರತದಲ್ಲಿ ಅಂದಾಜು 2.9 ಕೋಟಿ ಜನರು ಹೆಪಟೈಟಿಸ್ ಬಿ ಸೋಂಕಿನೊಂದಿಗೆ ಮತ್ತು 0.55 ಕೋಟಿ ಹೆಪಟೈಟಿಸ್ ಸಿ ಸೋಂಕಿನೊಂದಿಗೆ ವಾಸಿಸುತ್ತಿದ್ದಾರೆ.
  • 2022 ರಲ್ಲಿ ಭಾರತದಲ್ಲಿ 50,000 ಹೊಸ ಹೆಪಟೈಟಿಸ್ ಬಿ ಪ್ರಕರಣಗಳು ಮತ್ತು 1.4 ಲಕ್ಷ ಹೊಸ ಹೆಪಟೈಟಿಸ್ ಸಿ ಪ್ರಕರಣಗಳು ವರದಿಯಾಗಿವೆ.
  • ಈ ಸೋಂಕಿನಿಂದ 2022 ರಲ್ಲಿ ಭಾರತದಲ್ಲಿ 1.23 ಲಕ್ಷ ಜನರ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಹೇಗೆ ಹರಡುತ್ತದೆ

  • ಹೆಪಟೈಟಿಸ್ ಬಿ ಮತ್ತು ಸಿ ಎರಡೂ ಸೋಂಕುಗಳು ತಾಯಿಯಿಂದ ಮಗುವಿಗೆ ಹರಡುವಿಕೆ, ಅಸುರಕ್ಷಿತ ರಕ್ತ ವರ್ಗಾವಣೆಗಳು, ಸೋಂಕಿತ ರಕ್ತದ ಸಂಪರ್ಕ ಮತ್ತು ಮಾದಕವಸ್ತು ಬಳಕೆದಾರರಲ್ಲಿ ಸೂಜಿ-ಹಂಚಿಕೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಹರಡುತ್ತವೆ.
  • ಭಾರತದಲ್ಲಿ ಹೆಪಟೈಟಿಸ್ ಬಿ ಸೋಂಕು ಪ್ರಾಥಮಿಕವಾಗಿ ತಾಯಿಯಿಂದ ಮಗುವಿಗೆ ಹರಡುತ್ತದೆ.

ಹೆಪಟೈಟಿಸ್

  • ಹೆಪಟೈಟಿಸ್ ಯಕೃತ್ತಿನ (Liver) ಒಂದು ಸಾಂಕ್ರಾಮಿಕ ರೋಗ. ಹೆಪಟೈಟಿಸ್ ಎಂಬ ವೈರಸ್ಸಿನಿಂದ ರೋಗ ಬರುತ್ತದೆ.
  • ಹೆಪಟೈಟಿಸ್ ವೈರಸ್‌ನ ಐದು ಮುಖ್ಯ ವಿಧಗಳಿವೆ: ಎ, ಬಿ, ಸಿ, ಡಿ ಮತ್ತು ಇ, ಪ್ರತಿಯೊಂದೂ ವಿಭಿನ್ನ ಪ್ರಸರಣ ವಿಧಾನಗಳು, ತೀವ್ರತೆ, ರೋಗಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳನ್ನು ಹೊಂದಿದೆ.
  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ದೀರ್ಘಕಾಲದ ಕಾಯಿಲೆಗಳಾಗಿವೆ. ಹೆಪಟೈಟಿಸ್ ಬಿ ಹೆಪಟೈಟಿಸ್ ಸಿ ಗಿಂತ ಐದರಿಂದ ಹತ್ತು ಪಟ್ಟು ಗಂಭೀರವಾದ ಸಾಂಕ್ರಾಮಿಕ ರೋಗವಾಗಿದೆ.
  • ಬಿ ಮತ್ತು ಸಿ ವಿಧಗಳು ತೀವ್ರ ಮತ್ತು ದೀರ್ಘಕಾಲದ ಯಕೃತ್ತಿನ ಸಮಸ್ಯೆಯನ್ನು ಉಂಟು ಮಾಡಬಹುದು. ಇದು ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಕಾರಣದಿಂದ ಕ್ರಮೇಣ ಮಾರಣಾಂತಿಕವಾಗಬಹುದು.

ಹೆಪಟೈಟಿಸ್ ತಡೆಗಟ್ಟಲು ಭಾರತದ ಉಪಕ್ರಮಗಳು:

ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ.

ರಾಷ್ಟ್ರೀಯ ಆರೋಗ್ಯ ಅಭಿಯಾನ.

ಭಾರತದ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP).

ಹೆಪಟೈಟಿಸ್ ತಡೆಗಟ್ಟಲು ಜಾಗತಿಕ ಉಪಕ್ರಮಗಳು:

ವಿಶ್ವ ಹೆಪಟೈಟಿಸ್ ದಿನ(ಜುಲೈ 28)

WHO 2030 ರ ಹೊತ್ತಿಗೆ ಹೆಪಟೈಟಿಸ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು  ಹೊಂದಿದೆ