Published on: April 16, 2024
ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿ
ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿ
ಸುದ್ದಿಯಲ್ಲಿ ಏಕಿದೆ? ಭಾರತೀಯ ಸೇನೆಯ ಶುತ್ರುಪಾಳಯದ ಟ್ಯಾಂಕರ್ ಗಳನ್ನು ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಯುದ್ಧಭೂಮಿಯಲ್ಲಿ ಯೋಧರು ಸುಲಭವಾಗಿ ಈ ಕ್ಷಿಪಣಿ (ಎಮ್ಪಿಎಟಿಜಿಎಮ್) ಯನ್ನು ಹೊತ್ತೊಯ್ಯಬಹುದಾಗಿದ್ದು, ಟ್ರೈಪಾಡ್ ಉಡಾವಣಾ ವ್ಯವಸ್ಥೆಯ ಸಹಾಯದಿಂದ ಉಡಾವಣೆ ಮಾಡಬಹುದಾಗಿದೆ.
ಮುಖ್ಯಾಂಶಗಳು
- ಶಸ್ತ್ರ ವ್ಯವಸ್ಥೆಯನ್ನು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ದೇಶೀಯವಾಗಿ ವಿನ್ಯಾಸಗೊಳಿಸಿದೆ
- ಅದರ ಉನ್ನತ ಶ್ರೇಷ್ಠತೆಯನ್ನು ಸಾಬೀತುಪಡಿಸುವ ಉದ್ದೇಶದಿಂದ ಹಲವಾರು ಬಾರಿ ಮೌಲ್ಯಮಾಪನ ಮಾಡಲಾಗಿದೆ.
- ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ವಾರ್ಹೆಡ್ ಫ್ಲೈಟ್ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
- ಸುಧಾರಿತ ತಂತ್ರಜ್ಞಾನ ಆಧಾರಿತ ರಕ್ಷಣಾ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಸ್ವಾವಲಂಬನೆ(ಆತ್ಮ ನಿರ್ಭರ ಭಾರತ)ಯನ್ನು ಸಾಧಿಸುವ ಪ್ರಮುಖ ಹೆಜ್ಜೆಯಾಗಿದೆ.
ಉದ್ದೇಶ
- ಹಗಲು/ರಾತ್ರಿ ಮತ್ತು ಉನ್ನತ ದಾಳಿಯ ಸಾಮರ್ಥ್ಯಗಳೊಂದಿಗೆ ಸಜ್ಜುಗೊಂಡಿರುವ, ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ವ್ಯವಸ್ಥೆಯು ಡ್ಯುಯಲ್-ಮೋಡ್ ಸೀಕರ್ ಕಾರ್ಯವನ್ನು ಹೊಂದಿದೆ, ಟ್ಯಾಂಕ್ ಯುದ್ಧದ ಸಂದರ್ಭಗಳಲ್ಲಿ ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.