Published on: April 27, 2024

ಚಿಪ್ಕೋ ಚಳವಳಿಯ 50 ನೇ ವಾರ್ಷಿಕೋತ್ಸವ

ಚಿಪ್ಕೋ ಚಳವಳಿಯ 50 ನೇ ವಾರ್ಷಿಕೋತ್ಸವ

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, 1973 ರ ಆರಂಭದಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ  ಪ್ರಾರಂಭವಾದ ಚಿಪ್ಕೋ ಚಳವಳಿಯು ತನ್ನ 50 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ.

ಮುಖ್ಯಾಂಶಗಳು

  • ಏಪ್ರಿಲ್ 24, 1973 ರಂದು, ಗಾಂಧೀವಾದಿ ಸಮಾಜ ಸೇವಕ ಚಂಡಿ ಪ್ರಸಾದ್ ಭಟ್ ಅವರು ಸೈಮಂಡ್ಸ್ (ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಕಂಪನಿ) ಮರಗಳನ್ನು ಕಡಿಯುವುದನ್ನು ತಡೆಯಲು ಉತ್ತರ ಪ್ರದೇಶದ (ಈಗ ಉತ್ತರಾಖಂಡ) ಗರ್ವಾಲ್ ವಿಭಾಗದಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿದರು.
  • ಚಳುವಳಿಯ ಉದ್ದೇಶ: ಸ್ಥಳೀಯರು ಮತ್ತು ವಿಶೇಷವಾಗಿ ಮಹಿಳೆಯರು ಮರಗಳನ್ನು ಕಡಿಯುವುದನ್ನು ತಡೆಯಲು ಮರಗಳನ್ನು ತಬ್ಬಿಕೊಂಡು ಪ್ರತಿಭಟಿಸಿದರು.
  • ಉತ್ತರಾಖಂಡದ ಚಿಪ್ಕೋ ಚಳವಳಿಯ ಇತರ ಪ್ರಮುಖ ನಾಯಕರು: ಸುಂದರ್ ಲಾಲ್ ಬಹುಗುಣ, ಗೌರಾ ದೇವಿ, ಉಖಾ ದೇವಿ, ಜುಟ್ಟಿ ದೇವಿ, ಬಾಲಾ ದೇವಿ ಮುಂತಾದವರು
  • ಚಂಡಿ ಪ್ರಸಾದ್ ಭಟ್ (ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಮತ್ತು ಪರಿಸರವಾದಿ) ದಶೋಲಿ ಗ್ರಾಮ ಸ್ವರಾಜ್ಯ ಮಂಡಲ (DGSM) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
  • ಸುಂದರ್‌ಲಾಲ್ ಬಹುಗುಣ: ಸುಂದರ್‌ಲಾಲ್ ಬಹುಗುಣ ಅವರನ್ನು ಚಿಪ್ಕೋ ಚಳವಳಿಯ ಮುಖ್ಯ ನಾಯಕ ಮತ್ತು ವಕ್ತಾರ ಎಂದು ಪರಿಗಣಿಸಲಾಗುತ್ತದೆ. ಅವರು ಗಾಂಧೀಜಿ ತತ್ವಗಳಿಂದ ಪ್ರೇರಿತರಾದ ಪರಿಸರ ಕಾರ್ಯಕರ್ತರಾಗಿದ್ದರು, ಅರಣ್ಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪ್ರತಿಪಾದಿಸಿದರು.
  • ಪರಿಸರ ವಿಜ್ಞಾನವೇ ಶಾಶ್ವತ ಆರ್ಥಿಕತೆ ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ಅಪ್ಪಿಕೋ ಆಂದೋಲನ:

  • ಚಿಪ್ಕೋ ಚಳವಳಿಯಿಂದ ಪ್ರೇರಿತವಾದ ಅಪ್ಪಿಕೋ ಚಳವಳಿ (‘ಅಪ್ಪಿಕೊ’ ಎಂದರೆ ತಬ್ಬಿಕೊಳ್ಳುವುದು), ಈ ಪ್ರದೇಶದ ಕಾಡುಗಳನ್ನು ರಕ್ಷಿಸಲು 1983 ರಲ್ಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಸಲ್ಕಣಿ ಅರಣ್ಯದಲ್ಲಿ ಪ್ರಾರಂಭಿಸಲಾಯಿತು.
  • ಅಪ್ಪಿಕೋ ಚಳುವಳಿಯ ನಾಯಕ: ಪಾಂಡುರಂಗ ಹೆಗ್ಡೆ
  • ಚಳುವಳಿಗೆ ಕಾರಣ: ನಿಸರ್ಗದತ್ತವಾದ ಕಾಡನ್ನು ಕಡಿದು ಒಂದೇ ಜಾತಿಯ ಸಾಗುವಾನಿ ನೆಡುತೋಪು ಮತ್ತು ಪ್ಲೈವುಡ್‌ ಕಾರ್ಖಾನೆಗಳಿಗೆ ನೀಡಿದ ಮರ ಕಡಿಯುವ ಪರವಾನಗಿ ವಿರುದ್ಧ ಜನರು ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
  • ರಾಜ್ಯ ಸರ್ಕಾರ ಈ ಜನಾಂದೋಲನಕ್ಕೆ ಮಣಿದು ಅರಣ್ಯ ನೀತಿಯಲ್ಲಿ ಬದಲಾವಣೆ ತಂದಿತ್ತು. ಸಾಲ್ಕಣಿಯಲ್ಲಿಅಪ್ಪಿಕೋ ಚಳವಳಿಯ 25 ನೇಯ ಹುಟ್ಟುಹಬ್ಬದಲ್ಲಿ ಭಾಗವಹಿಸಿದ ಸುಂದರಲಾಲ ಬಹುಗುಣ ಈ ದಿನವನ್ನು ಸಂಹ್ಯಾದ್ರಿ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದ್ದರು. ಈ ದಿನವನ್ನು ಕಳೆದ 15 ವರ್ಷಗಳಿಂದ ಸಂಹ್ಯಾದ್ರಿ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.