Published on: April 27, 2024
ಚುಟುಕು ಸಮಾಚಾರ : 26 ಏಪ್ರಿಲ್ 2024
ಚುಟುಕು ಸಮಾಚಾರ : 26 ಏಪ್ರಿಲ್ 2024
- ಕರ್ನಾಟಕ ಶಿಕ್ಷಣ ಕಾಯ್ದೆ –1983ರ ಕಲಂ 3ರ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಅಂದರೆ; ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡಬೇಕು’ ಎಂಬ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ. ‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂರ್ಣಪಾಠ ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು.
- ಜಾಗತಿಕವಾಗಿ ಮಿಲಿಟರಿ ಅಗತ್ಯಗಳಿಗಾಗಿ ಅತಿ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುವ ದೇಶಗಳ ಸಾಲಿನಲ್ಲಿ ಭಾರತವು ನಾಲ್ಕನೆಯ ಸ್ಥಾನದಲ್ಲಿ ಇದೆ ಎಂದು ‘ಸ್ಟಾಕ್ ಹೋಂ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ (ಎಸ್ಐಪಿಆರ್ಐ) ತನ್ನ ವೆಬ್ಸೈಟ್ನಲ್ಲಿ ವರದಿಯನ್ನು ಪ್ರಕಟಿಸಿದೆ. ಅಮೆರಿಕ, ಚೀನಾ ಮತ್ತು ರಷ್ಯಾ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇವೆ. ಎಸ್ಐಪಿಆರ್ಐ ಸಂಸ್ಥೆಯು ಉಕ್ರೇನನಲ್ಲಿ ನಡೆಯುತ್ತಿರುವ ಯುದ್ಧ, ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಓಷಿಯಾನಿಯ ಪ್ರದೇಶದಲ್ಲಿ ಸಂಘರ್ಷ ಹೆಚ್ಚುತ್ತಿರುವುದು ಮಿಲಿಟರಿ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
- ಇತ್ತೀಚೆಗೆ, 1973 ರ ಆರಂಭದಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪ್ರಾರಂಭವಾದ ಚಿಪ್ಕೋ ಚಳವಳಿಯು ತನ್ನ 50 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಏಪ್ರಿಲ್ 24, 1973 ರಂದು, ಗಾಂಧೀವಾದಿ ಸಮಾಜ ಸೇವಕ ಚಂಡಿ ಪ್ರಸಾದ್ ಭಟ್ ಅವರು ಸೈಮಂಡ್ಸ್ (ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಕಂಪನಿ) ಮರಗಳನ್ನು ಕಡಿಯುವುದನ್ನು ತಡೆಯಲು ಉತ್ತರ ಪ್ರದೇಶದ (ಈಗ ಉತ್ತರಾಖಂಡ) ಗರ್ವಾಲ್ ವಿಭಾಗದಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿದರು.
- ಕೋಟಕ್ ಮಹೀಂದ್ರಾ ಬ್ಯಾಂಕ್ ಗೆ ಆಬಿಐ ನಿರ್ಬಂಧ: ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಆನ್ಲೈ ನ್ ಮತ್ತು ಮೊಬೈಲ್ ಬ್ಯಾಂಕಿಂಗ್ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಬಂಧ ಹೇರಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸುವಂತೆ ಪದೇ ಪದೇ ಸೂಚಿಸಿದರೂ ಅದನ್ನು ಪಾಲಿಸದಿರುವುದು ಆರ್ಬಿಐನ ಈಗಿನ ಕ್ರಮಕ್ಕೆ ಕಾರಣ. ಕ್ರೆಡಿಟ್ ಕಾರ್ಡನ್ನು ಕೂಡ ಹೊಸದಾಗಿ ನೀಡುವಂತಿಲ್ಲ. ಈಗ ಅಸ್ತಿತ್ವದಲ್ಲಿರುವ ಆನ್ಲೈನ್ ಗ್ರಾಹಕರಿಗೆ ಈ ಕ್ರಮವು ಅನ್ವಯಿಸುವುದಿಲ್ಲ. ಈಗಾಗಲೇ, ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸೇವೆಯನ್ನು ಮುಂದುವರಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.
- ಬುಲೆಟ್ ಪ್ರೂಫ್ ಜಾಕೆಟ್: ದೇಶದ ಅತ್ಯಂತ ಹಗುರ, ಸುರಕ್ಷಿತ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದ DRDO ಬುಲೆಟ್ ಪ್ರೂಫ್ ಜಾಕೆಟ್ ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿಗಾಗಿ ಕಠಿಣ ಸಂದರ್ಭಗಳಲ್ಲಿ ಬಳಸಲು ಸುರಕ್ಷಿತ ಮತ್ತು ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯು (ಡಿಆರ್ಡಿಒ) ಅಭಿವೃದ್ಧಿ ಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಹೊಸ ವಿನ್ಯಾಸದಿಂದ ಕೂಡಿರುವ ಈ ಜಾಕೆಟ್ ದೇಶದಲ್ಲಿಯೇ ಅತ್ಯಂತ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಆಗಿದೆ. ಈ ಜಾಕೆಟ್ನ ಮುಂಭಾಗದ ಹಾರ್ಡ್ ಆರ್ಮರ್ ಪ್ಯಾನೆಲ್ (ಎಚ್ಎಪಿ) ಅನ್ನು ಪಾಲಿಮರ್ ಬ್ಯಾಕಿಂಗನೊಂದಿಗೆ ಏಕಶಿಲೆಯ ಸೆರಾಮಿಕ್ ಪ್ಲೇಟ್ದ ವಿನ್ಯಾಸಗೊಳಿಸಲಾಗಿದೆ. ಇದು ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ ಜಾಕೆಟನಲ್ಲಿ ಇರುವ ಬಿಗಿ ನೇಯ್ಗೆಯು ಗುಂಡು ಒಳಗೆ ನುಗ್ಗದಂತೆ ನೋಡಿಕೊಳ್ಳುತ್ತದೆ.
- WARN ತಂತ್ರಾಂಶ: ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಸಾಮಾನ್ಯ ಹೃದಯ ಬಡಿತ ಹಾಗೂ ಅನಿಯಂತ್ರಿತ ಹೃದಯ ಬಡಿತದ ನಡುವಿನ ವ್ಯತ್ಯಾಸವನ್ನು ಈ ತಂತ್ರಾಂಶವು ಶೇ 80ರಷ್ಟು ನಿಖರವಾಗಿ ಪತ್ತೆ ಮಾಡಲಿದೆ. ಹೃದಯ ಮೇಲ್ಭಾಗದಲ್ಲಿ ಉಂಟಾಗುವ ಅನಿಯಂತ್ರಿತ ಬಡಿತವು ನಂತರ ಕೆಳಭಾಗವಾದ ವೆಂಟ್ರಿಕಲ್ಸ್ನಲ್ಲೂ ಕಂಡುಬರುತ್ತದೆ. ಇದನ್ನು ಈ ಸಾಧನ ಸರಿಯಾಗಿ ಗ್ರಹಿಸಲಿದೆ’ ಎಂದು ಲ್ಯಾಕ್ಸಾಂಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ‘ಈ ತಂತ್ರಾಂಶವನ್ನು ಸ್ಮಾರ್ಟ್ ಫೋನ್ಗಳಲ್ಲಿ ಅಳವಡಿಸಿಕೊಳ್ಳಬಹುದು. ಹೀಗೆ ಮುಂಚಿತವಾಗಿಯೇ ಸಿಗುವ ಮಾಹಿತಿ ಆಧರಿಸಿ, ವ್ಯಕ್ತಿ ತಮ್ಮ ಹೃದಯ ಆರೈಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಈ ತಂತ್ರಾಂಶಕ್ಕೆ WARN ಎಂದು ಹೆಸರಿಡಲಾಗಿದೆ. ಹೃದಯದ ಅನಿಯಂತ್ರಿತ ಏರಿಳಿತ ಹಾಗೂ ಅದರಿಂದ ಉಂಟಾಗಬಹುದಾದ ಸಮಸ್ಯೆಯನ್ನೂ ಅಷ್ಟೇ ಕರಾರುವಕ್ಕಾಗಿ ಗ್ರಹಿಸಲಿದೆ. ಸರಾಸರಿಯಾಗಿ 30 ನಿಮಿಷಗಳ ಮೊದಲೇ ಎಚ್ಚರಿಕೆ ನೀಡುವ ಸಾಮರ್ಥ್ಯ ಇದಕ್ಕಿದೆ’ ‘
- ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ರಾಯಭಾರಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಸಹಭಾಗಿತ್ವದಲ್ಲಿ ಜೂನ್ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ನ ರಾಯಭಾರಿಯಾಗಿ ಉಸೇನ್ ಬೋಲ್ಟ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೇಮಕಮಾಡಿದೆ. ಜಮೈಕಾದ ಬೋಲ್ಟ್ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 100 ಮೀಟರ್, 200 ಮೀಟರ್ ಮತ್ತು 4×100 ಮೀಟರ್ ಓಟಗಳಲ್ಲಿ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದರು.