ಅಂತರರಾಷ್ಟ್ರೀಯ ಕಾರ್ಮಿಕರ ದಿನ
ಅಂತರರಾಷ್ಟ್ರೀಯ ಕಾರ್ಮಿಕರ ದಿನ
ಸುದ್ದಿಯಲ್ಲಿ ಏಕಿದೆ? ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಮೇ ಡೇ, ಲೇಬರ್ ಡೇ ಹಾಗೂ ವರ್ಕರ್ಸ್ ಡೇ ಎಂತಲೂ ಕರೆಯಲಾಗುತ್ತದೆ.
ಉದ್ದೇಶ
ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ.
ಹಿನ್ನೆಲೆ
ಅಮೇರಿಕಾದಲ್ಲಿ 1886 ರಲ್ಲಿ ಒಂದು ಬೃಹತ್ ಮುಷ್ಕರ ನಡೆಯಿತು, ಅಲ್ಲಿ ಸುಮಾರು 200,000 ಅಮೇರಿಕನ್ ಕಾರ್ಮಿಕರು ದಿನಕ್ಕೆ ಎಂಟು ಗಂಟೆಗಳ ಕೆಲಸದ ಸಮಯವನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು. ಆದಾಗ್ಯೂ, ಈ ಚಳುವಳಿಯು ನಂತರ ಚಿಕಾಗೋದಲ್ಲಿ ಹಿಂಸೆಗೆ ತಿರುಗಿತು ಮತ್ತು ಅದನ್ನು ಹೇಮಾರ್ಕೆಟ್ ಅಫೇರ್ಸ್ ಎಂದು ನೆನಪಿಸಿಕೊಳ್ಳಲಾಯಿತು.
ಈ ಘಟನೆಯು ಅಂತರಾಷ್ಟ್ರೀಯ ಕಾರ್ಮಿಕ ದಿನದ ಆರಂಭವನ್ನು ಸೂಚಿಸಿತು. 1889 ರಲ್ಲಿ, ಯುರೋಪಿನ ಅನೇಕ ಸಮಾಜವಾದಿ ಪಕ್ಷಗಳು ಮೇ 1 ಅನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನವಾಗಿ ಆಚರಿಸಲು ಒಗ್ಗೂಡಿ ಅಂದಿನಿಂದ ಪ್ರತಿ ವರ್ಷವೂ ಅದೇ ದಿನದಂದು ಆಚರಿಸಲಾಗುತ್ತದೆ.
ಭಾರತದಲ್ಲಿ ಆಚರಣೆ
- ಭಾರತದಲ್ಲಿ ಇದನ್ನು ‘ಮೇ ದಿನ’ ಎಂದು ಕರೆಯುತ್ತಾರೆ.
- ದೇಶದಲ್ಲಿ ಮೊದಲ ಕಾರ್ಮಿಕ ದಿನವನ್ನು ಮೇ 1, 1923 ರಂದು ಮದ್ರಾಸಿನಲ್ಲಿ ಆಚರಿಸಲಾಯಿತು.
- ಇದನ್ನು ಕಾಮ್ರೇಡ್ ಸಿಂಗರವೇಲರ್ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆರಂಭಿಸಿತ್ತು. ಅಂದಿನಿಂದ ಈವರೆಗೆ ಭಾರತದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ರಜೆ ಘೋಷಿಸಲಾಗಿದೆ.
- ಇದು 141ನೇ ವರ್ಷದ ಅಂತಾರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ.