Published on: May 4, 2024

ಚುಟುಕು ಸಮಾಚಾರ : 3 ಮೇ 2024

ಚುಟುಕು ಸಮಾಚಾರ : 3 ಮೇ 2024

  • ಪುತ್ತೂರಿನ ಪ್ರಾಧ್ಯಾಪಕಿ ಪೂರ್ಣಿ ಮಾರವಿ ನಿರ್ದೇಶಿಸಿರುವ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯ ಚಿತ್ರಕ್ಕೆ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ –2024ರಲ್ಲಿ ವಿಶೇಷ ಪ್ರಮಾಣಪತ್ರ ದೊರೆತಿದೆ. ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇ ವ್ಸ್’ ಚಿತ್ರದಲ್ಲಿ ಕರ್ನಾ ಟಕದ 40ಕ್ಕೂ ಹೆಚ್ಚು ದೇವದಾಸಿಯರ ಜೀವನದ ವ್ಯಥೆ, ಕನಸುಗಳು, ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ. ಪೂರ್ಣಿ ಮಾರವಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು, ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.
  • ಇನ್ಸೆಕ್ಟ್ (ಕೀಟ)ಕೆಫೆ: ತೋಟಗಾರಿಕೆ ಇಲಾಖೆಯು   ಲಾಲ್ ಬಾಗನಲ್ಲಿ ನೂತನವಾಗಿ ಇನ್ಸೆಕ್ಟ್ ಕೆಫೆಗಳನ್ನು ಸ್ಥಾಪಿಸಲಾಯಿತು.  ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ದುಂಬಿ–ಕೀಟಗಳ ಸಂರಕ್ಷಣೆಗಾಗಿ ‘ಇನ್ಸೆಕ್ಟ್ ಕೆಫೆ’ ಎಂಬ ಎಂಟು ವಿಶಿಷ್ಟ ಕೀಟ ತಾಣಗಳನ್ನು ಲಾಲ್ ಬಾಗನಲ್ಲಿ ಅನಾವರಣಗೊಳಿಸಲಾಯಿತು. ‘ಇವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ (ಇವೈ ಜಿಡಿಎಸ್), ವಿಭಿನ್ನ ಇಂಡಿಯಾ ಫೌಂಡೇಷನ್ನ ಸಹಯೋಗದಲ್ಲಿ ಬೆಂಗಳೂರಿನಲ್ಲಿರುವ ಉದ್ಯಾನಗಳಲ್ಲಿ 21 ಇನ್ಸೆಕ್ಟ್ ಕೆಫೆಗಳನ್ನು ನಿರ್ಮಿಸುವ ಉದ್ದೇಶವನ್ನು  ಹೊಂದಲಾಗಿದೆ. ‘ಮರುಬಳಕೆ ಮಾಡಿದ ಮರ, ಮಣ್ಣು ಹಾಗೂ ಬಿದಿರಿನಿಂದ ಇನ್ಸೆಕ್ಟ್ ಕೆಫೆಗಳನ್ನು ತಯಾರಿಸಲಾಗಿದೆ. ಇವುಗಳನ್ನು ಪ್ರಮುಖ ಉದ್ಯಾನಗಳಲ್ಲಿ ಸ್ಥಾಪಿಸುವುದರಿಂದ ವಿವಿಧ ಪ್ರಬೇಧಗಳ ಕೀಟಗಳಿಗೆ ಸುರಕ್ಷಿತ ತಾಣವಾಗುತ್ತವೆ’. ‘ಕೀಟಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಇನ್ಸೆಕ್ಟ್ ಕೆಫೆ ಯೋಜನೆ ಸಹಕಾರಿಯಾಗಿದೆ. ಕೀಟಗಳ ಸಂತಾನೋತ್ಪತ್ತಿ ಮತ್ತು ಉಳಿವಿಗಾಗಿ ಸುರಕ್ಷಿತವಾದ ಗೂಡುಗಳಿಲ್ಲದ ಪರಿಣಾಮ ಅನೇಕ ಕೀಟಗಳು ಅಪಾಯ ಅಂಚಿನಲ್ಲಿವೆ.
  • ಮೌಂಟ್ ಎವರೆಸ್ಟ್ ಪರ್ವತ ಪ್ರದೇಶದಲ್ಲಿ ಎವರೆಸ್ಟ್ ಸ್ವಚ್ಛತಾ ಅಭಿಯಾನ– 2024 ಅನ್ನು ನೇಪಾಳ ಸೇನೆ ಆರಂಭಿಸಿದೆ. ಈ ಅಭಿಯಾನಕ್ಕೆ ನೇಪಾಳದ ಅರಣ್ಯ ಮತ್ತು ಪರಿಸರ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ನೇಪಾಳ ಪರ್ವತಾರೋಹಿಗಳ ಸಂಘಗಳು ನೆರವು ನೀಡುತ್ತಿವೆ.ಈ ತಂಡ ಮೌಂಟ್ ಎವರೆಸ್ಟ್, ಮೌಂಟ್ ಲೊಟ್ಸೆ ಮತ್ತು ಮೌಂಟ್ ನಪ್ಟ್ಸೆ ಗಳಿಂದ ಕಸವನ್ನು ಸಂಗ್ರಹಿಸಿ ತರಲಿದೆ. ನೇಪಾಳ ಸೇನೆ 2019 ರಿಂದ ಎವರೆಸ್ಟ್ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ನೇಪಾಳ ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ವಚ್ಛತಾ ಅಭಿಯಾನ ಇದಾಗಿದೆ.
  • ಕೋವಿಡ್ ಲಸಿಕೆ– ಕೋವಿಶೀಲ್ಡ್ ಅನ್ನು ಅಭಿವೃದ್ಧಿ‍ಪಡಿಸಿದ್ದ ಕಂಪನಿ, ಆ ಲಸಿಕೆಯಿಂದ ಮಾರಣಾಂತಿಕ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಸ್ಟ್ರಾಜೆನೆಕಾ ಕಂಪನಿ ಇದೇ ಮೊದಲ ಬಾರಿಗೆ ಲಂಡನ್ನ ನ್ಯಾಯಾಲಯದ ಎದುರು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಪಡೆದುಕೊಂಡವರಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ರಕ್ತಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೆಟ್ ಸಂಖ್ಯೆ ಇಳಿಕೆ (ಟಿಟಿಎಸ್) ಸಮಸ್ಯೆ ತಲೆದೋರುತ್ತದೆ ಎಂದು ಕಂಪನಿ ಪ್ರಮಾಣಪತ್ರದಲ್ಲಿ ವಿವರಿಸಿದೆ. ಆದರೆ ಇದು ಅಪರೂಪದ ಅಡ್ಡಪರಿಣಾಮವಾದರೂ ಮಾರಣಾಂತಿಕ ಸಮಸ್ಯೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
  • ಭಾರತವು 2025 ರಲ್ಲಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಸ್ನ ಅತಿಥ್ಯ ವಹಿಸಲಿದೆ. ಈ ಚಾಂಪಿಯನ್ಷಿಪ್ ಗುವಾಹಟಿಯ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಪ್ರಕಟಿಸಿದೆ. 2008ರ ನಂತರ ಮೊದಲ ಬಾರಿ ಈ ಪ್ರತಿಷ್ಠಿತ ಚಾಂಪಿಯನ್ಷಿಪ್ ಭಾರತದಲ್ಲಿ ನಡೆಯುತ್ತಿದೆ. ಆ ವರ್ಷ ಪುಣೆಯಲ್ಲಿ ಈ ಟೂರ್ನಿ ನಡೆದಿತ್ತು. ‘ತಂಡ ಮತ್ತು ವೈಯಕ್ತಿಕ ವಿಭಾಗದ ಸ್ಪರ್ಧೆಗಳೆಲ್ಲವೂ ಭಾರತ ಬ್ಯಾಡ್ಮಿಂ ಟನ್ ಸಂಸ್ಥೆಯ ಈ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿವೆ. 2026 ರ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್ ಡೆನ್ಮಾರ್ಕನ ಹಾರ್ಸೆನ್ಸ್‌ ನಗರದಲ್ಲಿ ನಡೆಯಲಿದೆ.