Published on: May 5, 2024

ಚುಟುಕು ಸಮಾಚಾರ : 4 ಮೇ 2024

ಚುಟುಕು ಸಮಾಚಾರ : 4 ಮೇ 2024

  • ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನು ಅವರಿಗೆ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಹಮೀದಾ ಅವರ ಡೂಡಲ್ ಕಲಾಕೃತಿಯನ್ನು ಬೆಂಗಳೂರು ಮೂಲದ ಕಲಾವಿದೆ ದಿವ್ಯಾ ನೇಗಿ ಅವರು ರಚಿಸಿದ್ದಾರೆ. ‘ಅಲಿಗಢ ಅಮೆಜಾನ್’ ಎಂದೇ ಖ್ಯಾತಿ ಪಡೆದಿರುವ ಹಮೀದಾ ಬಾನು, 1900 ದಶಕದ ಆರಂಭದಲ್ಲಿ ಉತ್ತರ ಪ್ರದೇಶದ ಅಲಿಗಢದ ಕುಸ್ತಿಪಟುಗಳ ಕುಟುಂಬದಲ್ಲಿ ಜನಿಸಿದ್ದರು. 1940–50ರ ದಶಕದಲ್ಲಿ ಅಥ್ಲೆಟಿಕ್ಸ್ನಲ್ಲಿ 300ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮೀದಾ ಗೆದ್ದಿದ್ದರು. 1954ರ ಇದೇ ದಿನದಂದು ನಡೆದ ಕುಸ್ತಿ ಪಂದ್ಯದಲ್ಲಿ ಖ್ಯಾತ ಕುಸ್ತಿಪಟು ಬಾಬಾ ಪೈಲ್ವಾನ್ ಅವರನ್ನು ಕೇವಲ ಒಂದು ನಿಮಿಷ ಮತ್ತು 34 ಸೆಕೆಂಡುಗಳಲ್ಲಿ ಸೋಲಿಸುವ ಮೂಲಕ ಹಮೀದಾ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದರು. ಆನಂತರ ಅವರು ವೃತ್ತಿಪರ ಕುಸ್ತಿಯಿಂದ ನಿವೃತ್ತರಾದರು.
  • ಭಾರತದ ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜಾ ಹಾಗೂ ಹಾಂಗಕೊಂಗ್ ಜುಂಜಿ ಅವರಿಗೆ ‘ಕೋಫಿ ಅನ್ನಾನ್ ಕರೇಜ್ ಇನ್ ಕಾರ್ಟೂನಿಂಗ್’ ಪ್ರಶಸ್ತಿಯನ್ನು ನೀಡಲಾಗಿದೆ. ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಭಾರತದ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದೆ ರಚಿತಾ ತನೇಜಾ, ಮೊನಚು ಕಾರ್ಟೂನ್ಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಮೊನಚು ಕಾರ್ಟೂನ್ಗಳ ಮೂಲಕವೇ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿದ, ಜನರಲ್ಲಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಇವರಿಗೆ ಪ್ರಶಸ್ತಿ ನೀಡಲಾಗಿದೆ.
  • ಪ್ರತಿ ವರ್ಷ ಮೇ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ 31 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. 2024 ರ ಥೀಮ್: ಎ ಪ್ರೆಸ್ ಫಾರ್ ದಿ ಪ್ಲಾನೆಟ್: ಜರ್ನಲಿಸಂ ಇನ್ ದಿ ಫೇಸ್ ಆಫ್ ದಿ ಎನ್ವಿರಾನ್ಮೆಂಟಲ್ ಕ್ರೈಸಿಸ್.
  • ಚಂದ್ರನ ಮೇಲ್ಮೈ ಅಧ್ಯಯನ ಉದ್ದೇಶದ ‘ಚಾಂಗಿ–6’ ಗಗನನೌಕೆಯನ್ನು ಚೀನಾದ ದಕ್ಷಿಣದಲ್ಲಿನ ಹೈನಾನ್ ಪ್ರಾಂತ್ಯದ ಕರಾವಳಿಯಲ್ಲಿರುವ ವೆಂಚಾಂಗ್ ಅಂತರಿಕ್ಷ ಉಡ್ಡಯನ ಕೇಂದ್ರದಿಂದ ಉಡ್ಡಯನ ಮಾಡಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್ಎಸ್ಎ) ತಿಳಿಸಿದೆ. ರಾಕೆಟ್: ‘ಮಾರ್ಚ್–5 ವೈ 8’. ಭೂಮಿಗೆ ಕಾಣದಂತಹ ಚಂದಿರನ ಮತ್ತೊಂದು ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ, ತರುವ ಇಂತಹ ಬಾಹ್ಯಾಕಾಶ ಕಾರ್ಯ ಕ್ರಮ ಚಂದ್ರನ ಅನ್ವೇಷಣೆಯಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಗಗನನೌಕೆಯು, ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಹಾಗೂ ಭೂಮಿ ಮರಳಲಿರುವ ಘಟಕ ಎಂಬ ನಾಲ್ಕು ಉಪಕರಣಗಳನ್ನು ಹೊಂದಿದೆ.
  • ದೇಶದ ಮೊದಲ ಸ್ವದೇಶಿ ಮಾನವರಹಿತ FWD-200B ಏರ್ಕ್ರಾಫ್ಟ್ ಯುದ್ಧ ಬಾಂಬರ್ ಡ್ರೋನ್ ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗಿದೆ. ವಿನ್ಯಾಸ: ಫ್ಲೈಯಿಂಗ್ ವೆಡ್ಜ್ ಕಂಪನಿ. FWD-200B ಮೀಡಿಯಂ ಅಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (MALE) ಮಾನವರಹಿತ ಯುದ್ಧ ವೈಮಾನಿಕ ವಾಹನವಾಗಿದ್ದು, ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗುತ್ತದೆ.