Published on: May 14, 2024

ವೆಸ್ಟ್ ನೈಲ್ ಫೀವರ್

ವೆಸ್ಟ್ ನೈಲ್ ಫೀವರ್

ಸುದ್ದಿಯಲ್ಲಿ ಏಕಿದೆ? ಕೇರಳದ ಮಲ್ಲಪುರಂ, ಕೋಝಿಕ್ಕೋಡ್​ ಮತ್ತು ತ್ರಿಶೂರ್​​ ಜಿಲ್ಲೆಗಳಲ್ಲಿ ಸೋಂಕು ವೆಸ್ಟ್ ನೈಲ್ ಫೀವರ್ ಪ್ರಕರಣಗಳು ಪತ್ತೆಯಾಗಿವೆ.

ಮುಖ್ಯಾಂಶಗಳು

  • 1937ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪತ್ತೆಯಾಗಿತ್ತು. 2011ರಲ್ಲಿ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು.
  • ಸೋಂಕಿತ ಕ್ಯುಲೆಕ್ಸ್​ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ.

ವೆಸ್ಟ್ ನೈಲ್ ವೈರಸ್

ವೆಸ್ಟ್ ನೈಲ್ ವೈರಸ್ ಒಂದು ಏಕ-ತಂತು ಆರ್ಎನ್ಎ ವೈರಸ್ ಆಗಿದೆ.

ಇದು ವೈರಸ್‌ಗಳಿಗೆ ಸಂಬಂಧಿಸಿದ ಫ್ಲೇವಿವೈರಸ್ ಆಗಿದ್ದು, ಇದು ಸೇಂಟ್ ಲೂಯಿಸ್ ಎನ್ಸೆಫಾಲಿಟಿಸ್, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರವನ್ನು ಉಂಟು ಮಾಡುತ್ತದೆ.

ರೋಗದ ಲಕ್ಷಣಗಳು

 ತಲೆನೋವು, ಜ್ವರ, ಸ್ನಾಯು ನೋವು, ತಲೆ ತಿರುಗುವಿಕೆ ಮತ್ತು ಜ್ಞಾಪಕ ಶಕ್ತಿಯ ಕೊರತೆ. ಶೇ. 1ರಷ್ಟು ಜನರಲ್ಲಿ ಇದು ಪ್ರಜ್ಞಾಹೀನತೆಗೆ ಕಾರಣವಾಗಬಹುದು. ಇನ್ನು ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು.

ತಡೆಗಟ್ಟುವಿಕೆ

ವೆಸ್ಟ್ ನೈಲ್ ಜ್ವರ ಕಾಯಿಲೆಗೆ ಸರಿಯಾದ ಚಿಕಿತ್ಸೆ ಅಥವಾ ಲಸಿಕೆ ಇಲ್ಲದಿರುವುದರಿಂದ ಇದನ್ನು ತಡೆಗಟ್ಟುವಿಕೆ ಮುಖ್ಯವಾಗಿದೆ. ಸೊಳ್ಳೆ ಕಡಿತವನ್ನು ತಪ್ಪಿಸುವುದು ಈ ರೋಗವನ್ನು ತಡೆಗಟ್ಟುವ ಅತ್ಯುತ್ತಮ ವಿಧಾನವಾಗಿದೆ.