Published on: August 13, 2021
ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅಭಿಯಾನ
ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅಭಿಯಾನ
ಸುದ್ಧಿಯಲ್ಲಿ ಏಕಿದೆ? ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಆಜಾದ್ ಕಿ ಅಮೃತ ಮಹೋತ್ಸವ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅಭಿಯಾನವನ್ನು ಹಮ್ಮಿಕೊಂಡಿದ್ದು ದೇಶದ ನಾಗರಿಕರು ಭಾಗವಹಿಸಬಹುದೆಂದು ಕರೆ ನೀಡಿದೆ.
ಏನಿದು ಸ್ವತಂತ್ರ ಓಟ ?
- ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಫ್ರೀಡಂ ರನ್ 0 ದೇಶಾದ್ಯಂತ ಪ್ರಾರಂಭಿಸಿದೆ. ದೇಶದ 75 ಪ್ರಮುಖ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭವಾಗಿದೆ. ಗಾಂಧಿ ಜಯಂತಿ ಅಕ್ಟೋಬರ್ 2ರವರೆಗೆ ಅದು ಮುಂದುವರಿಯಲಿದೆ. ಪ್ರತಿ ಜಿಲ್ಲೆಯ 75 ಗ್ರಾಮಗಳು ಇದರಲ್ಲಿ ಭಾಗಿಯಾಗಲಿವೆ
- ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ 0 ಅಭಿಯಾನದಲ್ಲಿ ಭಾಗಿಯಾದ ಬಿಎಸ್ ಎಫ್ ಯೋಧರು ನಂತರ ಓಟದಲ್ಲಿ ಭಾಗಿಯಾದರು. ಮುಂಬೈಯ ಗೇಟ್ ವೇ ಆಫ್ ಇಂಡಿಯಾದಲ್ಲಿ ಆರಂಭಗೊಂಡ ಫಿಟ್ ಇಂಡಿಯಾ ಅಭಿಯಾನದಲ್ಲಿ 40 ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊಗಳು ಭಾಗಿಯಾಗಿದ್ದರು.