Published on: May 24, 2024

ಉದ್ಭವ್ ಯೋಜನೆ

ಉದ್ಭವ್ ಯೋಜನೆ

ಸುದ್ದಿಯಲ್ಲಿ ಏಕಿದೆ? ರಕ್ಷಣಾ ಕ್ಷೇತ್ರದಲ್ಲಿ ದೇಶದ ಒಟ್ಟು ಚಿತ್ರಣ ಹಾಗೂ ಭಾರತೀಯ ಸೇನೆಯ ಶ್ರೀಮಂತ ಪರಂಪರೆ, ಮಹಾಭಾರತ ಮಹಾಕಾವ್ಯದ ಯುದ್ಧದ ಸನ್ನಿವೇಶಗಳನ್ನು ಉದ್ಭವ್ ಯೋಜನೆಯಡಿ ಭಾರತೀಯ ಸೇನೆಯು ಪ್ರದರ್ಶಿಸಲಿದೆ. ಭಾರತೀಯ ಇತಿಹಾಸ, ಪರಂಪರೆಯ ಸಂಭ್ರಮಾಚರಣೆಯನ್ನು ರಾಷ್ಟ್ರೀಯ ಸಂಸ್ಕೃತಿ, ಗುರುತ್ವದ ಭಾಗವಾಗಿ ಇದನ್ನು ಆಚರಿಸಲಾಗುತ್ತಿದೆ.

ಮುಖ್ಯಾಂಶಗಳು

  • ವಿಷಯ: ಭಾರತದ ಭಿನ್ನ ಸಂಸ್ಕೃತಿಯ ಐತಿಹಾಸಿಕ ಸ್ವರೂಪ
  • ಉದ್ಭವ್ ಯೋಜನೆಜಗೆ 2023 ರಲ್ಲಿ ಚಾಲನೆ ನೀಡಲಾಗಿತ್ತು.
  • ಯೋಜನೆಯಡಿ ವೇದ, ಪುರಾಣ, ಉಪನಿಷದ್, ಅರ್ಥಶಾಸ್ತ್ರ ಗಳ ಆಳವಾದ ಅಧ್ಯಯನ ನಡೆಸಲಿದ್ದು, ಭಾರತೀಯ ಮತ್ತು ಪಾಶ್ಚಿಮಾತ್ಯ ವಿದ್ವಾಂಸರ ನಡುವಿನ ಬೌದ್ಧಿಕ ಸಮಾನಾಂಶಗಳನ್ನು ದಾಖಲಿಸಲಾಗುವುದು.
  • ಸೇನೆಯು ಇದೇ ಸಂದರ್ಭದಲ್ಲಿ ‘ಪ್ರಾಚೀನತೆಯಿಂದ ಸ್ವಾತಂತ್ರ್ಯದವರೆಗೆ: ಭಾರತೀಯ ಸೇನೆಯ ಪರಿಕರ, ಯುದ್ಧ, ಕಾರ್ಯ ತಂತ್ರದ ವಿಕಸನ’ ಕುರಿತು ಪ್ರದರ್ಶನವನ್ನು ಆಯೋಜಿಸಿತ್ತು. ಈ ಪ್ರದರ್ಶ ನವನ್ನು ನಮ್ಮ ಇತಿಹಾಸದ ಜೊತೆಗೆ ಜಾಗತಿಕ ನೆಲೆಗಟ್ಟಿನಲ್ಲಿ ದೇಶದ ಸ್ಥಾನವನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ

ಉದ್ದೇಶ

ಭವಿಷ್ಯದ ಸವಾಲುಗಳನ್ನು ಎದುರಿಸಲು ಸೇನೆಯನ್ನು ಸನ್ನದ್ಧಗೊಳಿಸುವ ಕ್ರಮವಾಗಿ ಸೇನೆಯ ಸಮಕಾಲೀನ ಅಗತ್ಯಗಳು ಹಾಗೂ ಭಾರತೀಯ ಪ್ರಾಚೀನ ಕಾರ್ಯತಂತ್ರವನ್ನು ಒಗ್ಗೂಡಿಸುವುದು(ಆಧುನಿಕ ಮಿಲಿಟರಿಗಾಗಿ ಪ್ರಾಚೀನ ಬುದ್ಧಿವಂತಿಕೆ). ಈ ಮೂಲಕ ದೇಶೀಯ ಧರ್ಮ ಬೋಧೆಗೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ.