Published on: May 28, 2024
ರೆಮಲ್ ಚಂಡಮಾರುತ
ರೆಮಲ್ ಚಂಡಮಾರುತ
ಸುದ್ದಿಯಲ್ಲಿ ಏಕಿದೆ? ಬಂಗಾಳಕೊಲ್ಲಿಯಲ್ಲಿ ಚಂಡಮಾರುತವು ಸೃಷ್ಟಿಯಾಗುತ್ತಿದ್ದು ಮೇ 26 ವೇಳೆಗೆ ತೀವ್ರ ಚಂಡಮಾರುತವಾಗಿ ಪಶ್ಚಿಮ ಬಂಗಾಳ ಕರಾವಳಿ ಮತ್ತು ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಮುಖ್ಯಾಂಶಗಳು
- ಪ್ರಸಕ್ತ ಸಾಲಿನ (2024 ರ) ಮುಂಗಾರು ಪೂರ್ವದಲ್ಲಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಮೊದಲ ಚಂಡಮಾರುತ ಇದಾಗಿದ್ದು, ಇದಕ್ಕೆ ‘ರೆಮಲ್’ ಎಂದು ಹೆಸರಿಸಲಾಗಿದೆ.
- ಹೆಸರಿಸುವಿಕೆ: ಉಷ್ಣವಲಯದ ಚಂಡಮಾರುತಗಳ ಪಟ್ಟಿಯಲ್ಲಿ ‘ರೆಮಲ್’ ಎಂಬ ಹೆಸರನ್ನು ಒಮಾನ್ ನೀಡಿದೆ.
- ಅರೇಬಿಕ್ ಭಾಷೆಯಲ್ಲಿ ‘ರೆಮಲ್’ ಎಂದರೆ ‘ಮರಳು’.
- ಇದರ ಪರಿಣಾಮ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ಉತ್ತರ 24 ಪರಗಣ, ದಕ್ಷಿಣ 24 ಪರಗಣ ಮತ್ತು ಪುರ್ಬಾ ಮೇದಿಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
- ಬಂಗಾಳಕೊಲ್ಲಿಯಲ್ಲಿ ಒತ್ತಡದ ತಗ್ಗಿದ ಪರಿಣಾಮ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಪೂರ್ವ -ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆಯಿದೆ.
ನಿಮಗಿದು ತಿಳಿದಿರಲಿ
- ಬಂಗಾಳ ಕೊಲ್ಲಿಯು, ಅರೆಬ್ಬಿ ಸಮುದ್ರಕ್ಕಿಂತ ಸುಮಾರು 4:1 ರ ಅನುಪಾತದಲ್ಲಿ ಹೆಚ್ಚು ಚಂಡಮಾರುತಗಳನ್ನು ಅನುಭವಿಸುತ್ತದೆ. ಆದರೆ 2022 ರ ಅಧ್ಯಯನ ಪ್ರಕಾರ ಅರೆಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸೃಷ್ಟಿಯಾಗುವಿಕೆಯು 2001-2019 ರಿಂದ 52% ರಷ್ಟು ಹೆಚ್ಚಾಗಿದೆ, ಆದರೆ ಬಂಗಾಳ ಕೊಲ್ಲಿಯಲ್ಲಿ ಸ್ವಲ್ಪ ಕಡಿಮೆಯಾಗಿದೆ.
- ಬಂಗಾಳ ಕೊಲ್ಲಿ ತುಲನಾತ್ಮಕವಾಗಿ ಅರೆಬ್ಬಿ ಸಮುದ್ರಕ್ಕಿಂತ ಕಡಿಮೆ ಆಳವಾಗಿದೆ. ಬಂಗಾಳ ಕೊಲ್ಲಿಯ ದೊಡ್ಡ ಮೇಲ್ಮೈ ವಿಸ್ತೀರ್ಣವು ಹೆಚ್ಚಿನ ಆವಿಯಾಗುವಿಕೆಗೆ ಕಾರಣವಾಗುವ ವೇಗವಾದ ತಾಪನವನ್ನು ಅನುಮತಿಸುತ್ತದೆ. ಅಸ್ಥಿರತೆಯನ್ನು ಉಂಟುಮಾಡುವ ಪ್ರದೇಶದಲ್ಲಿ ಹೆಚ್ಚಿನ ಒತ್ತಡದ ವಲಯವನ್ನು ರೂಪಿಸುತ್ತದೆ. ಈ ಎಲ್ಲಾ ಅಂಶಗಳು ಚಂಡಮಾರುತ ರಚನೆಗೆ ಸೂಕ್ತವಾಗಿವೆ.
- ಅರೆಬ್ಬಿ ಸಮುದ್ರ ಹೆಚ್ಚಿನ ಲವಣಾಂಶ, ಕಡಿಮೆ ಸಮುದ್ರದ ಮೇಲ್ಮೈ ತಾಪಮಾನ ಮತ್ತು ಅನನುಕೂಲವಾದ ಗಾಳಿ ವ್ಯವಸ್ಥೆಗಳಿಂದಾಗಿ ಸಾಂಪ್ರದಾಯಿಕವಾಗಿ ಕಡಿಮೆ ಚಂಡಮಾರುತಗಳನ್ನು ಕಂಡಿದೆ.