ಶಾ(SHAW) ಪುರಸ್ಕಾರ
ಶಾ(SHAW) ಪುರಸ್ಕಾರ
ಸುದ್ದಿಯಲ್ಲಿ ಏಕಿದೆ? ಭಾರತದ ಕರ್ನಾಟಕ ಮೂಲದ ಅಮೆರಿಕಾ ವಿಜ್ಞಾನಿ ಮತ್ತು ಸುಧಾಮೂರ್ತಿ ಅವರ ಸಹೋದರ ಶ್ರೀನಿವಾಸ್ ಆರ್ ಕುಲಕರ್ಣಿ ಅವರು ಖಗೋಳಶಾಸ್ತ್ರ ವಿಭಾಗದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ‘ಶಾ ಪುರಸ್ಕಾರ’ ನೀಡಲಾಗಿದೆ.
ಮುಖ್ಯಾಂಶಗಳು
- ಅವರಿಗೆ ಖಗೋಳ ಟ್ರಾನ್ಸಿಯಂಟ್‌ಗಳ ಭೌತಶಾಸ್ತ್ರದ ಕೆಲಸಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ
- ಅವರಲ್ಲದೆ ಅಮೆರಿಕದವರೇ ಆದ ಸ್ವೀ ಲೇ ಥೇನ್ ಹಾಗೂ ಸ್ಟುಅರ್ಟ್ ಆರ್ಕಿನ್ ಅವರಿಗೂ ಪ್ರತಿಷ್ಠಿತ ಶಾ ಪುರಸ್ಕಾರ ಲಭ್ಯವಾಗಿದೆ.ಇವರಿಬ್ಬರಿಗೂ ವೈದ್ಯಕೀಯ ವಿಭಾಗದಲ್ಲಿ ಈ ಪುರಸ್ಕಾರ ಸಿಕ್ಕಿದೆ.
ಶ್ರೀನಿವಾಸ್ ಆರ್ ಕುಲಕರ್ಣಿ
- ಅವರು ಖಗೋಳ ಶಾಸ್ತ್ರದ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಮಿಲಿಸೆಕೆಂಡ್ ಪಲ್ಸರ್ಸ್, ಗಾಮಾ – ರೇ ಬರ್ಸ್ಟ್, ಸೂಪರ್ ನೋವಾ ಹಾಗೂ ಹಲವು ಮಾರ್ಪಡುವ ಹಾಗೂ ಸಂಚರಿಸುವ ಬಾಹ್ಯಾಕಾಶ ವಸ್ತುಗಳ ಕುರಿತಾಗಿ ಸಂಶೋಧನೆ ಮಾಡಿದ್ದಾರೆ.
- ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಕುರುಂದ್ವಾಡ್ ಎಂಬ ಪುಟ್ಟ ಪಟ್ಟಣವಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಈ ಪಟ್ಟಣದಲ್ಲಿ 1955ರಲ್ಲಿ ಜನಿಸಿದರು
- ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ವ್ಯಾಸಂಗ ಮಾಡಿದರು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದ ಅವರು ಇದೀಗ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾ ಪ್ರಶಸ್ತಿ
- 2002 ರಲ್ಲಿ, ಶ್ರೀ ಶಾ ಅವರ ಆಶ್ರಯದಲ್ಲಿ, ಶಾ ಪ್ರಶಸ್ತಿ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು.
- ಇದನ್ನು ಹಾಂಗ್ ಕಾಂಗ್‌ನ ಶಾ ಪ್ರೈಜ್ ಫೌಂಡೇಶನ್ ನೀಡುವ ಜಾಗತಿಕ ಪ್ರಶಸ್ತಿಯಾಗಿದೆ.
- ಪ್ರಶಸ್ತಿಯು ಮೂರು ವಾರ್ಷಿಕ ಪ್ರಶಸ್ತಿಗಳನ್ನು ಒಳಗೊಂಡಿದೆ, ಅವುಗಳೆಂದರೆ ಖಗೋಳಶಾಸ್ತ್ರದ ಪ್ರಶಸ್ತಿ, ಜೀವ ವಿಜ್ಞಾನ ಮತ್ತು ವೈದ್ಯಕೀಯ ಪ್ರಶಸ್ತಿ ಮತ್ತು ಗಣಿತ ವಿಜ್ಞಾನದ ಪ್ರಶಸ್ತಿ.
- ಪ್ರಶಸ್ತಿಯ ಮೊತ್ತ: 2016 ರಿಂದ ೧.೨ ಮಿಲಿಯನ್ US ಡಾಲರ್ ನೀಡಲಾಗುತ್ತದೆ
ಖಗೋಳ ಟ್ರಾನ್ಸಿಯಂಟ್(ಸಂಚರಿಸುವ ಬಾಹ್ಯಾಕಾಶ ಕ್ಷಣಿಕ ಕಾಯ)
ಖಗೋಳಶಾಸ್ತ್ರದಲ್ಲಿ,ಒಂದು ಕ್ಷಣಿಕವಾದ ಯಾವುದೇ ಆಕಾಶ ಕಾಯವಾಗಿದ್ದು, ಅದರ ಹೊಳಪು ಅಲ್ಪಾವಧಿಯಲ್ಲಿ ಬದಲಾಗುತ್ತದೆ. ಈ ವಿದ್ಯಮಾನಗಳು ಸಾಮಾನ್ಯವಾಗಿ ಬಾಹ್ಯಾಕಾಶದಲ್ಲಿ ಹಿಂಸಾತ್ಮಕ ಘಟನೆಗಳೊಂದಿಗೆ ಸಂಬಂಧ ಹೊಂದಿವೆ.
ಉದಾಹರಣೆ
ವೇಗದ ರೇಡಿಯೋ ಬರ್ಸ್ಟ್ (FRB): ಇದನ್ನು 2007 ರಲ್ಲಿ ಕಂಡುಹಿಡಿಯಲಾಯಿತು ಮತ್ತು ಇದು ಕೆಲವು ಮಿಲಿಸೆಕೆಂಡ್‌ಗಳಲ್ಲಿ ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಕ್ತಿಯನ್ನು ಹೊರಸೂಸುತ್ತದೆ.
ಸೂಪರ್ನೋವಾಗಳು: ನಕ್ಷತ್ರಗಳು ಬೆಸೆಯಲು ಬೇಕಾಗಿರುವ ಧಾತುಗಳ ಕೊರತೆಯಿಂದಾಗಿ ದೊಡ್ಡ ನಕ್ಷತ್ರಗಳ ಹೊರ ಪದರಗಳು ಸ್ಫೋಟಗೊಂಡಾಗ ಅವುಗಳ ಕೇಂದ್ರವು ಸ್ಫೋಟಗೊಳ್ಳುತ್ತವೆ. ಅನೇಕ ಸೂಪರ್ನೋವಾಗಳು ಎಷ್ಟು ಪ್ರಕಾಶಮಾನವಾಗಿವೆಯೆಂದರೆ ಅದು ಇರುವ ನಕ್ಷತ್ರಪುಂಜ(ಗ್ಯಾಲಕ್ಸಿ)ದಲ್ಲಿರುವ ಉಳಿದ ನಕ್ಷತ್ರ ಒಟ್ಟುಗೂಡಿದಾಗ ಹೊರಸೂಸುವ ಬೆಳಕಿಗಿಂತ ಹೆಚ್ಚಿನ ಬೆಳಕನ್ನು ಹೊರಸೂಸುತ್ತದೆ.