Published on: June 5, 2024

ನಕ್ಷತ್ರ ಸಭಾ

ನಕ್ಷತ್ರ ಸಭಾ

  • ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ಉತ್ತರಾಖಂಡ ಸರ್ಕಾರವು ನಕ್ಷತ್ರ ಸಭಾ ಎಂಬ ಭಾರತದ ಮೊದಲ ಆಸ್ಟ್ರೋ(ಖಗೋಳ) ಪ್ರವಾಸೋದ್ಯಮ ಅಭಿಯಾನವನ್ನು ಮಸ್ಸೂರಿಯ ಜಾರ್ಜ್ ಎವರೆಸ್ಟ್ ಶಿಖರದಲ್ಲಿ ನಡೆಸಲಾಯಿತು. ಈ ಶಿಖರವು ಹಿಮದಿಂದ ಆವೃತವಾದ ಹಿಮಾಲಯ ಶಿಖರಗಳು ಮತ್ತು ಡೂನ್ ಕಣಿವೆಯ ಅದ್ಭುತ ನೋಟಗಳಿಗೆ ಹೆಸರುವಾಸಿಯಾಗಿದೆ.

ಮುಖ್ಯಾಂಶಗಳು

  • ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಸ್ಟಾರ್‌ಸ್ಕೇಪ್ಸ್, ಪ್ರಮುಖ ಆಸ್ಟ್ರೋ-ಟೂರಿಸಂ ಕಂಪನಿಯೊಂದಿಗೆ ಕೈಜೋಡಿಸಿದ್ದು, ಜನರಿಗೆ ಸಮಗ್ರ ಆಸ್ಟ್ರೋ ಟೂರಿಸಂ ಅನುಭವವನ್ನು ಒದಗಿಸುವ ಹೊಸ ಉಪಕ್ರಮವಾದ ನಕ್ಷತ್ರ ಸಭೆಯನ್ನು ಪರಿಚಯಿಸಿದೆ.
  • ಸಂಘಟಕರು ಉತ್ತರಾಖಂಡದಾದ್ಯಂತ ವಿವಿಧ ಸ್ಥಳಗಳಲ್ಲಿ(ಉತ್ತರಕಾಶಿ, ಪಿಥೋರಗಢ, ನೈನಿತಾಲ್ ಮತ್ತು ಚಮೋಲಿಯಂತಹ ಜಿಲ್ಲೆಗಳಲ್ಲಿ) ಕಾರ್ಯಕ್ರಮಗಳ ಸರಣಿಯನ್ನು 2025 ರ ಮಧ್ಯದ ತನಕ ಹಲವಾರು ನಕ್ಷತ್ರ ಸಭೆಗಳನ್ನು ನಡೆಸಲು ಯೋಜಿಸುತ್ತಿದ್ದಾರೆ
  • ಆಸ್ಟ್ರೋ ಟೂರಿಸಂ ಜೊತೆಗೆ, ರಾಜ್ಯವು ಹಸಿರು ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ ಮತ್ತು ಕ್ಷೇಮ ಪ್ರವಾಸೋದ್ಯಮದತ್ತ ಗಮನಹರಿಸುತ್ತಿದೆ.

ಉದ್ದೇಶ

ರಾಜ್ಯದಲ್ಲಿ ಬಹು ಆಯಾಮದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉತ್ತರಾಖಂಡದ ಉಪಕ್ರಮದ ಭಾಗವಾಗಿದೆ. ಈ ಪ್ರವರ್ತಕ ಉಪಕ್ರಮವು ರಾತ್ರಿಯ ಆಕಾಶದ ಅಡಿಯಲ್ಲಿ ಅನನ್ಯ ಅನುಭವಗಳನ್ನು ಬಯಸುವ ಪ್ರಯಾಣಿಕರಿಗೆ ಪ್ರಧಾನ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (UTDB)

ಇದು ಉತ್ತರಾಖಂಡ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ಸಂಸ್ಥೆಯಾಗಿದೆ.

ಸ್ಥಾಪನೆ: 1976

ಪ್ರಧಾನ ಕಛೇರಿ: ಡೆಹ್ರಾಡೂನ್‌